Taluka Panchayat EO visit to various Gram Panchayats

ಶಿಶುಪಾಲನಾ ಕೇಂದ್ರಗಳ ವೀಕ್ಷಣೆ, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಸೂಚನೆ
ರಾಯಚೂರು ಜ.18 (ಕರ್ನಾಟಕ ವಾರ್ತೆ): ತಾಲೂಕಿನ ಕಮಲಾಪೂರು, ಉಡಮಗಲ್ ಗ್ರಾಮ ಪಂಚಾಯತಿಗಳಿಗೆ ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಮಲಾಪೂರು, ಉಡಮಗಲ್, ಮರ್ಚಟ್ಹಾಳ್ ಮತ್ತು ಮಮದಾಪೂರು ಗ್ರಾಮಗಳಲ್ಲಿನ ಕೂಸಿನ ಮನೆ, ಶಿಶುಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಆಯಾ ಕೇಂದ್ರಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು.
ಶಿಶುಪಾಲನಾ ಕೇಂದ್ರದಲ್ಲಿರುವ ಮಕ್ಕಳ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.
ಶಿಶು ಆರೈಕೆದಾರರಿಗೆ, ಕೇಂದ್ರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಸೂಚಿಸಿದರು.
ಮಕ್ಕಳಿಗೆ ಆಹಾರ ಬಡಿಸುವ ಮುಂಚೆ ತಮ್ಮ ಮತ್ತು ಮಕ್ಕಳ ಕೈಗಳನ್ನು ಸ್ವಚ್ಚವಾಗಿ ತೊಳೆಯಬೇಕು ಎಂದರು.
ಶಿಶುಪಾಲನಾ ಕೇಂದ್ರಗಳಿಗೆ ಬೇಕಾಗುವ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಇದೆ ವೇಳೆ ಇಓ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೆ ವೇಳೆ ಇಓ ಅವರು,
ಮಹಾತ್ಮಗಾಂಧಿ ನರೇಗಾ ಹಾಗೂ ಇನ್ನಿತರೆ ಯೋಜನೆಗಳಡಿ ಅನುಷ್ಠಾನಗೊಳ್ಳುವ ವಿವಿಧ ಕಾಮಗಾರಿಗಳನ್ನು ಸಹ ಪರಿಶೀಲನೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಕೇಶ್ವರಿ, ಅನ್ನಪೂರ್ಣ, ರಂಗಪ್ಪ, ಐಇಸಿ ಸಂಯೋಜಕ ಧನರಾಜ, ಮೊಬೈಲ್ ಕ್ರಷ್ ಸಿಬ್ಬಂದಿ ವಿಜಯಲಕ್ಷ್ಮಿ ಹಾಗೂ ಬಿ.ಎಫ್.ಟಿ, ಜಿ.ಕೆ.ಎಮ್ ಮತ್ತು ಗ್ರಾ.ಪಂ ಸಿಬ್ಬಂದಿ ಇದ್ದರು.