Breaking News

ರೈತ.ರೈತರ ನಡುವೆ ಸಂಘರ್ಷಉಂಟುಮಾಡಲುಸಂಚುರೂಪಿಸುತ್ತಿದೆ ಅದಕ್ಕೆ ಯಾವುದೇ ಮುಗ್ದ ರೈತರು ಕಿವಿ ಕೊಡದೆಜಾಗೃತರಾಗಬೇಕೆಂದು ರೈತ ಸಂಘದ ತಾಲೂಕುಅಧ್ಯಕ್ಷಕಾರಿಗನಹಳ್ಳಿ ಪುಟ್ಟೇಗೌಡ ರೈತರಲ್ಲಿಮನವಿಮಾಡಿದರು

The taluk president of Kariganahalli Puttegowda appealed to the farmers to be aware that there is a plot to create conflict between farmers.

ಕೆ.ಆರ್.ಪೇಟೆ: ಸತ್ಯಕ್ಕೆ ಜಯ ಸಿಕ್ಕ ಹಿನ್ನೆಲೆಯಲ್ಲಿ .ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಹತಾಶೆಯಗೊಂಡು ತನ್ನ ಲಾಭದಾಯಕಕ್ಕಾಗಿ ರೈತ.ರೈತರ ನಡುವೆ ಸಂಘರ್ಷ ಉಂಟುಮಾಡಲು ಸಂಚು ರೂಪಿಸುತ್ತಿದೆ ಅದಕ್ಕೆ ಯಾವುದೇ ಮುಗ್ದ ರೈತರು ಕಿವಿ ಕೊಡದೆ ಜಾಗೃತರಾಗಬೇಕೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ರೈತರಲ್ಲಿ ಮನವಿ ಮಾಡಿದರು

ಕೆ ಆರ್ ಪೇಟೆ,: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದರು. ತಾಲೂಕು ರೈತ ಸಂಘ ಯಾವುದೇ ರೈತರಿಗೆ ಅನ್ಯಾಯ ಮಾಡುವುದಕ್ಕೆ ಕನಸಿನಲ್ಲು ಚಿಂತಿಸುವುದಿಲ್ಲ ಏಕೆಂದರೆ ರೈತರ ಉಳಿವಿಗಾಗಿ ಸಾವಿರಾರು ಚಳುವಳಿಯ ಕಠಿಣ ಹೋರಾಟದಲ್ಲೂ ದೃತಿಗಿಡದೆ ರೈತರ ಹೋರಾಟಕ್ಕೆ ನಿಂತಿದೆ. ಆದರೆ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ಅಪಾಯಕಾರಿ ಡಿಸ್ಟಲರಿ ಮತ್ತು ಎಥನಾಲ್ ನಿರ್ಮಾಣಕ್ಕಾಗಿ ಕಾರ್ಖಾನೆ ಆವರಣದಲ್ಲೇ ಕಳೆದ ಬುಧವಾರ ನಡೆದ ಜನಾಭಿಪ್ರಾಯ ಸಭೆಯಲ್ಲಿ ಪ್ರಸ್ತುತ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಇಂತಹ ಅಪಾಯಕಾರಿ ಘಟಕಗಳು ಬೇಡವೇ ಬೇಡ ಎಂದು ಸಾವಿರಾರು ಜನಸಾಗರ ತೀವ್ರ ವಿರೋಧದ ಬೆನ್ನಲ್ಲೇ ಜಿಲ್ಲಾಧಿಕಾರಿ ಕುಮಾರ್ ಅವರು ಕೂಡ ಈ ಸಭೆಯಲ್ಲಿ ಡಿಸ್ಟಲರಿ ಮತ್ತು ಎಥನಾಲ್ ನಿರ್ಮಾಣಕ್ಕೆ ವಿರೋಧ ಎಂದು ಹೇಳಿಕೆ ನೀಡಿ ಸರ್ಕಾರಕ್ಕೆ ಈ ವರದಿಯನ್ನೇ ಸಲ್ಲಿಸುತ್ತೇನೆ ಎಂದು ತಿಳಿಸಿದರು ಅವರ ವರದಿಗೆ ಕಿಂಚಿತ್ತು ಗೌರವ ಕೊಡದೆ ಕಾನೂನು ನಿಯಮವನ್ನು ಗಾಳಿಗೆ ತೂರಿ ಮುಗ್ಧ ರೈತರನ್ನ ಪ್ರಾಮಾಣಿಕ ರೈತರ ಮೇಲೆ ಹತ್ತಿಕ್ಕಲು ಚಿಂತಿಸುತ್ತಿದೆ ಇದಕ್ಕೆ ಯಾವುದೇ ರೈತರು ಕಿವಿ ಕೊಡಬೇಡಿ. ಈ ತಿಂಗಳಲ್ಲೇ ರೈತರ ಚಿಂತನ ಮಂಥನ ಕಾರ್ಯಕ್ರಮವನ್ನ ರೂಪಿಸಲು ಚಿಂತಿಸಿದ್ದೇವೆ ದಿನಾಂಕ ನಿಗದಿಪಡಿಸುತ್ತಿದ್ದಂತೆ ತಾಲೂಕಿನಾದ್ಯಂತ ರೈತರನ್ನು ಆಹ್ವಾನಿಸುತ್ತೇವೆ ಆ ದಿನ ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ ಹೇಮಾವತಿ ನದಿ ಮತ್ತು ಪರಿಸರ ರಕ್ಷಣೆಗಾಗಿ ಹಾಗೂ ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರ ಉಳಿವಿಗಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಹೋರಾಟಗಾರ ಮಾಕವಳ್ಳಿ ಪಟೇಲ್ ಯೋಗೇಶ್ ಮಾತನಾಡಿ ಕೋರಮಂಡಲ ಸಕ್ಕರೆ ಕಾರ್ಖಾನೆ ಪ್ರಾಮಾಣಿಕ ಕಬ್ಬು ಬೆಳೆಗಾರರಿಗೆ ಅಪಾಯಕಾರಿ ಡಿಸ್ಟಲರಿ ಮತ್ತು ಎಥನಾಲ್ ನಿರ್ಮಾಣವಾದರೆ ಕಾರ್ಖಾನೆ ಕಬ್ಬಿನ ದರ ಹೆಚ್ಚಾಗುತ್ತದೆ ಎಂದು ಸ್ವಯಂ ಘೋಷಿತ ವಕ್ತಾರರ ಮುಖಾಂತರ ಮಂಕು ಬೂದಿ ಹರಡುತ್ತಿದೆ. ಅದನ್ನು ಮುಗ್ಧ ಪ್ರಾಮಾಣಿಕ ಕಬ್ಬು ಬೆಳೆಗಾರರು ಅರಿತುಕೊಳ್ಳಬೇಕು ಹಲವು ಕಡೆ ಇಂತಹ ಅಪಾಯಕಾರಿ ಘಟಕಗಳು ನಿರ್ಮಾಣವಾಗಿರುವ ಅಂತ ಕಾರ್ಖಾನೆಗಳ ಸುತ್ತಮುತ್ತಲಿನ ರೈತರ ಬದುಕು ಏನಾಗಿದೆ ಎಂದು ತಿಳಿಯಬೇಕೆಂದರೆ ಸಾಮೂಹಿಕವಾಗಿ ನಾವೆಲ್ಲರೂ ಹೋಗೋಣ ಬನ್ನಿ ಅದನ್ನು ಅರಿತುಕೊಳ್ಳೋಣ . ಕಬ್ಬು ಬೆಳೆಗಾರರು ಕಾರ್ಖಾನೆಯ ಸುತ್ತಮುತ್ತಲನ 10 ಗ್ರಾಮಗಳು ವಾಸಿಸುತ್ತಿರುವವರು ಕೂಡ ರೈತರೆ ಅವರಿಗೆ ಕಬ್ಬು ಬೆಳೆಗಾರರು ಕೂಡ ರೈತರೆ ಅಂದರೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅದರಲ್ಲಿ ಒಂದು ಮುಖಕ್ಕೂ ಅಪಾಯಕಾರಿ ಘಟಕಗಳಿಂದ ಒಡೆತ ಬಿದ್ದರು ನಾಣ್ಯಕ್ಕೆ ನೋವಾಗುವುದು ಎಂದು ನಮ್ಮೆಲ್ಲರಿಗೂ ಮನವರಿಕೆ ಮಾಡಿಕೊಳ್ಳಬೇಕು. ಹಾಗಾಗಿ ವಿಷಕಾರಿ ಹಾರುವ ಬೂದಿ ನೀಡುತ್ತಿದ್ದರು ಪ್ರಸ್ತುತ ಸಕ್ಕರೆ ಕಾರ್ಖಾನೆ ಹೊರತುಪಡಿಸಿ ಉಳಿದ ಯಾವುದೇ ಉಪ ಉತ್ಪನ್ನಗಳಿಗೆ ಅವಕಾಶ ನೀಡದಂತೆ ತಾಲೂಕು ಕಬ್ಬು ಬೆಳೆಗಾರರ ಸಹಕಾರ ಅಗತ್ಯವಿದೆ ನಾವೆಲ್ಲಾ ಒಂದಾಗುವ ಸಮಯ ಗೋಚರವಾಗಿದೆ ಈಗಲೂ ಒಂದಾಗದಿದ್ದರೆ ಇಂತಹ ಅಪಾಯಕಾರಿ ಘಟಕಗಳಿಂದ ನಮ್ಮ ಮರಣ ಶಾಸನ ಕಟ್ಟಿಟ್ಟ ಬುತ್ತಿ ಎಂದು ವಿಷಾದ ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆಯ ಆಡಳಿತ ವ್ಯವಸ್ಥೆಯ ವಿರುದ್ಧ ಶೆಟ್ಟಹಳ್ಳಿ ಕೃಷ್ಣೇಗೌಡ, ಮಾಕವಳ್ಳಿ ರವಿಕುಮಾರ್, ರಾಮನಹಳ್ಳಿ ಆರ್ ಎಸ್ ಮಂಜೇಗೌಡ ತೆರೆದಂತೆ ಅನೇಕರು ಕಿಡಿಕಾರಿದರು.

ಈ ಸಂದರ್ಭದಲ್ಲಿ ರೈತಪರ ಹೋರಾಟಗಾರ ಕರೋಟಿ ತಮ್ಮಯ್ಯ, ಜಿಲ್ಲಾ ರೈತ ಸಂಘ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಸಂಘ ತಾಲೂಕು ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ರೈತ ಸಂಘ ತಾಲೂಕು ಮಾಜಿ ಅಧ್ಯಕ್ಷ ಪಿ.ಬಿ ಮಂಚನಹಳ್ಳಿ ನಾಗೇಶ್ , ನಿವೃತ್ತ ಶಿಕ್ಷಕ ಮಾಕವಳ್ಳಿ ಲಕ್ಕೇಗೌಡ,ಬೀಚೆನಹಳ್ಳಿ ಸಣ್ಣಯ್ಯ, ಕರೋಟಿ ಸುಬ್ರಹ್ಮಣ್ಯ, ಕರೋಟಿ ಲೋಕೇಶ್ , ರಾಮನಹಳ್ಳಿ ಡೈರಿ ಕುಮಾರ್, ಮಾಣಿಕನಹಳ್ಳಿ ವೆಂಕಟೇಶ, ಚೌಡೇನಹಳ್ಳಿ ಮೂರ್ತಿ, ಲಿಂಗಾಪುರ ರೇವಣ್ಣ, ಕೃಷ್ಣಾಪುರ ರಾಜಣ್ಣ,ರಾಮಯ್ಯ, ಗ್ರಾ.ಪಂ ಸದಸ್ಯ ತೆಂಗಿನಘಟ್ಟ ಲೋಕೇಶ್, ರೈತ ಮುಖಂಡ ಮಂಜೇಗೌಡ, ಸೇರಿದಂತೆ ಅನೇಕ ರೈತ ಮುಖಂಡರಿದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.