Mass Marriages Marriage of the Lucky : Mainalli Mr
ಕೊಪ್ಪಳ : ಸಾಮೂಹಿಕ ವಿವಾಹಗಳೆಂದರೇ ಬಡವರ ಮದುವೆಗಳಲ್ಲಾ ಇವು ಭಾಗ್ಯವಂತರ ಮದುವೆಗಳು ಎಂದು ಮೈನಳ್ಳಿಯ ಸಿದ್ಧೇಶ್ವರ ಸ್ವಾಮಿಗಳು ಹೇಳಿದರು.
ಕುಕನೂರು ತಾಲೂಕಿನ ಹಿರೇಬಿಡನಾಳ ಗ್ರಾಮದೇವತೆ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ 10ನೇ ವರ್ಷದ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.
ಆಡಂಬರದ ಮದುವೆಗಳು ಕೇವಲ ಕುಟುಂಬಕ್ಕೆ ಸೀಮಿತವಾದರೇ ಸಾಮೂಹಿಕ ವಿವಾಹಗಳು ದೈವದ ಸಮ್ಮುಖದಲ್ಲಿ, ಸಾವಿರಾರು ಜನರ ಆಶೀರ್ವಾದದೊಂದಿಗೆ, ನೂತನ ದಾಂಪತ್ಯಕ್ಕೆ ಕಾಲಿರಿಸುವ ದಂಪತಿಗಳು ಭಾಗ್ಯವಂತರಾಗಿದ್ದು, ನಿವೆಲ್ಲರೂ ಆದರ್ಶ ಜೀವನ ಸಾಗಿಸಬೇಕು ಎಂದು ಹಾರೈಸಿದರು.
ನಂತರದಲ್ಲಿ ಕುಕನೂರು ಅನ್ನದಾನೀಶ್ವರಮಠದ ಮಹಾದೇವಯ್ಯ ಸ್ವಾಮಿಜೀಗಳು ಮಾತನಾಡಿ ಒಂದು ಗ್ರಾಮದಲ್ಲಿ ಯಾವ ವ್ಯಕ್ತಿಗಳು ಹಿರಿಯರು ಮಾರ್ಗದರ್ಶನದಲ್ಲಿ ನಡೆಯುವರೋ ಆ ಗ್ರಾಮದಲ್ಲಿ ಇಂತಹ ಧರ್ಮ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಈ ಗ್ರಾಮವು ಸಾಮರಸ್ಯದಿಂದ ಕೂಡಿ ಒಂದೇ ಕುಟುಂಬದವರಂತೆ ಅನ್ಯೂನ್ಯತೆಯಿಂದ ಇರುವುದು ಮಾನವ ಕುಲಕ್ಕೆ ಮಾದರಿಯಾಗಿದೆ ಎಂದರು.
ನೂತನ ದಂಪತಿಗಳು ಸಮಾನ ಮನಸ್ಕರಾಗಿ ಬಾಳುವುದರ ಜೊತೆ ತಂದೆ, ತಾಯಿಯನ್ನು ಕೊನೆಯವರೆಗೆ ರಕ್ಷಣೆ, ಪಾಲನೆ ಮಾಡಬೇಕು, ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರೆಯದಂತೆ ಜೀವನ ಸಾಗಿಸಬೇಕು ಎಂದು ದಂಪತಿಗಳಿಗೆ ಹೇಳಿದರು.
ನಂತರದಲ್ಲಿ ಗ್ರಾಮದ ಪ್ರಮುಖರು ಮಾತನಾಡಿ ನಮ್ಮ ಗ್ರಾಮದ ಹಾಗೂ ಸುತ್ತ ಮುತ್ತಲಿನ ಗ್ರಾಮದವರ ಸಹಕಾರದಿಂದ ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಹಾಗೂ ಇಲ್ಲಿ ಮುಂದಿನ ದಿನಗಳಲ್ಲಿ ಭಕ್ತರ ಸಹಕಾರದಿಂದ ಶರಣಬಸವೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ತಿರ್ಮಾನ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವಲಿಂಗಪ್ಪ ಗುದಮುರಗಿ, ಯಂಕರಡ್ಡಿ, ಸಕ್ರಪ್ಪ ಚೌಡಕಿ, ಚನ್ನಬಸಪ್ಪ ದ್ಯಾಂಪೂರ, ಶಿವರಡ್ಡಿ ನಾಗರಡ್ಡಿ, ಅಶೋಕ ತೋಟದ, ರಾಮಣ್ಣ, ವೀರಯ್ಯ ಶಾಸ್ತ್ರೀ, ಕೂಡಲೆಪ್ಪ ಬಳಗೇರಿ, ಅಶೋಕ ಮಡಿವಾಳರ ಸೇರಿದಂತೆ, ಹಿರಿಯರು ಯುವಕರು ಭಕ್ತಾಧಿಗಳು ಉಪಸ್ಥಿತರಿದ್ದರು.