Breaking News

ಸಮಾಜ ಸೇವೆಯ ಮೂಲಕ ಬಡವರಿಗೆ ಸಹಾಯ ಮಾಡುತ್ತಿರುವ ಜಿ ಸಿ ಕಿರಣ್

GC Kiran is helping the poor through social service.


ಚಾಮರಾಜನಗರ :ಕೊಳ್ಳೇಗಾಲ, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಹಾಗೂ ಸಮಾಜಸೇವಕ ಜಿಸಿ ಕಿರಣ್ ರವರು ಶುಕ್ರವಾರ ಸಂಜೆ ತಾಲೂಕಿನ ಮುಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಅನಾರೋಗ್ಯ ಪೀಡಿತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದರು.
ಗ್ರಾಮದ ಉಪ್ಪಾರ ಬಡಾವಣೆಗೆ ಭೇಟಿ ನೀಡಿದ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ನಂಜಮ್ಮ ಎಂಬುವರಿಗೆ ರೇಡಿಯೇಶನ್ ಚಿಕಿತ್ಸೆ ವೆಚ್ಚಕ್ಕಾಗಿ 25,000 ರೂ ಗಳ ಚೆಕ್ಕನ್ನು ನೀಡಿದರು. ಮುಂದಿನ ವಾರ ಇನ್ನು ಹೆಚ್ಚಿನ ನೆರವು ನೀಡುವ ಭರವಸೆ ನೀಡಿದರು.  ಮತ್ತೊಬ್ಬ ಕ್ಯಾನ್ಸರ್ ಪೀಡಿತೆ  ನಾಗಮ್ಮ ಎಂಬುವರ ಮನೆಗೆ ಭೇಟಿ ನೀಡಿದ ಅವರು ಅಲ್ಲಿ ಅವರ ಚಿಕಿತ್ಸೆ ಹಾಗೂ ಔಷದ ವೆಚ್ಚಕ್ಕಾಗಿ ಧನ ಸಹಾಯ ಮಾಡಿದರು. ಒಂದೇ ಮನೆಯಲ್ಲಿ ಮೂವರು ಅನಾರೋಗ್ಯ ಪೀಡಿತರಾಗಿ ದುಡಿಮೆ ಇಲ್ಲದೆ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ವೆಚ್ಚಕ್ಕಾಗಿ ಪರದಾಡುತ್ತಿದ್ದ ವೆಂಕಟರಮಣಶೆಟ್ಟಿ ರವರ ಮನೆಗೆ ಭೇಟಿ ನೀಡಿ ಕುಟುಂಬದ ಸಮಸ್ಯೆ ಆಲಿಸಿ 10.000 ರೂ. ಗಳ ಚೆಕ್ ವಿತರಿಸಿದರು. ಹಾಗೂ ದುಡಿಮೆಯೇ ಇಲ್ಲದಿದ್ದ ಮೇಲೆ ಬದುಕು ಸಾಗಿಸುವುದು ಕಷ್ಟ. ನಾನು ನೀಡಿರುವ ಈ ಸಣ್ಣ ಸಹಾಯ ತಾತ್ಕಾಲಿಕ. ನೀವು ಜೀವನ ನಿರ್ವಹಣೆ ಮಾಡಲು ನಿಮ್ಮ ಕುಟುಂಬಕ್ಕೆ ಒಂದು ಹೊಲಿಗೆಯಂತ್ರ ಕೊಡಿಸುತ್ತೇನೆ. ಇದರಿಂದ ದುಡಿಮೆ ಮಾಡಿ ಹೇಗೂ ಜೀವನ ನಿರ್ವಹಣೆ ಮಾಡಬಹುದು ಎಂದು ಭರವಸೆ ನೀಡಿದರು.
ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿರುವ ಮಹಿಳಾ ಸಂಘದ ಸದಸ್ಯರನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು ಮಹಿಳೆಯರು ಸ್ವಾವಲಂಬಿಗಳಾಗಲು ಸ್ವಯಂ ಉದ್ಯೋಗ ಕಲಿತು ಆರ್ಥಿಕವಾಗಿ ಸಬಲರಾಗಬೇಕು. ಆಗ ಮಾತ್ರ ಸಮಾಧಾನಕರ ಜೀವನ ನಡೆಸಲು ಸಾಧ್ಯ. ನಿಮ್ಮ ಮಹಿಳಾ ಸಂಘಕ್ಕೆ ಹುಲಿಗೆ ಯಂತ್ರಗಳನ್ನು ಕೊಡಿಸುತ್ತೇನೆ ಇದರಿಂದ ದುಡಿದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯೆ ಕಾಂತಮ್ಮ ಮಹಿಳಾ ಸಂಘದ ರಾಜಮ್ಮ, ಜಯಲಕ್ಷ್ಮಿ, ಸುಷ್ಮಾ, ಗಿರಿಜಾ, ಗೀತಾ, ಕಾವ್ಯ, ಪುಟ್ಟಮ್ಮ, ಚಂದ್ರಕಲಾ, ಚಂದ್ರಮ್ಮ ಮುಖಂಡರಾದ ಮಂಜುನಾಥ್ ಸಿದ್ದರಾಜು  ಉಮೇಶ್, ದಿನೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ. ಅಪಾರ ಪ್ರಮಾಣದಲ್ಲಿ ನಷ್ಟ.

ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಕುಪ್ಪಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟಿಗೆಹಳ್ಳಿ ಗ್ರಾಮದ ದಲಿತ ಸಮುದಾಯದ ಕೆಂಪರಾಮಯ್ಯ ಸನ್ ಆಫ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.