Pre-meeting of Gokak Movement Retrospective and Prospective Conference Make the Kalaburgi divisional level convention a grand success; District Collector Nitish
ರಾಯಚೂರು, :ಇದೇ ಅಕ್ಟೋಬರ್ ೦೫ರಂದು ಕಲಬುರಗಿ ವಿಭಾಗ ಮಟ್ಟದ ಗೋಕಾಕ್ ಚಳುವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವನ್ನು ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಸೆ.೨೬ರ ಗುರುವಾರ ದಂದು ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗೋಕಾಕ್ ಚಳುವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಸಮಾವೇಶಕ್ಕೆ ಸ್ವಾಗತ ಸಮಿತಿ, ವಸತಿ ಸಮಿತಿ, ಊಟೋಪಚಾರ ಸಮಿತಿ, ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿ ಸಮಿತಿ, ಸಾರಿಗೆ ಸಮಿತಿ, ವಿಚಾರ ಸಂಕೀರ್ಣ, ಪ್ರಚಾರ ಸಮಿತಿ, ಕಾನೂನು ಸುವ್ಯವಸ್ಥೆ ಹಾಗೂ ಭದ್ರತಾ ಸಮಿತಿ, ವಿದ್ಯುತ್ ಮತ್ತು ಲೈಟಿಂಗ್ ಸಮಿತಿ, ತುರ್ತು ಸೇವಾ ಸಮಿತಿ ಸೇರಿದಂತೆ ಸುಮಾರು ೧೩ಸಮಿತಿಗಳ ನೇಮಕ ಮಾಡಿದ್ದು, ಸಮಿತಿಯ ಎಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಬೇಕೆಂದರು.
ವೇದಿಕೆ ಸಿದ್ದತೆ, ಗಣ್ಯರಿಗೆ ಆಸನದವ್ಯವಸ್ಥೆ ಮಾಡಿಕೊಳ್ಳಬೇಕು. ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಆಹ್ವಾನ ಪತ್ರಿಕೆ ಮುದ್ರಿಸಬೇಕು. ಶಾಮಿಯಾನಾ, ವಿದ್ಯಾರ್ಥಿ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಕುಳಿತು ಕೊಳ್ಳಲು ಆಸನದ ವ್ಯವಸ್ಥೆ, ಚಿಕಿತ್ಸಾ ಅಂಬ್ಯುಲನ್ಸ ನುರಿತ ವೈದ್ಯರೊಂದಿಗೆ ಹಾಗೂ ಅಗ್ನಿಶಾಮಕ ವಾಹನದ ವ್ಯವಸ್ಥೆ ಮಾಡಬೇಕು. ಸಮಾವೇಶಕ್ಕೆ ಬಂದವರಿಗೆ, ಮಜ್ಜಿಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ನಿರ್ವಹಿಸಬೇಕು. ನಗರದ ಪ್ರಮುಖ ಬೀದಿಗಳಲ್ಲಿ ದೀಪಾಲಂಕಾರವನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾದ ಸಂತೋಷ್ ಹಾನಗಲ್ ಅವರು ಮಾತನಾಡಿ, ಅಕ್ಟೋಬರ್ ೫ರಂದು ರಾಯಚೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವು ೧೯೮೦ರ ದಶಕದಲ್ಲಿ ನಡೆದ ಗೋಕಾಕ ಚಳುವಳಿಯನ್ನು ಕೇಂದ್ರದಲ್ಲಿರಿಸಿಕೊAಡು ಚಳುವಳಿಯ ಹಿನ್ನೋಟ ಮತ್ತು ಮುನ್ನೋಟದ ಬಗೆಗೆ ಚರ್ಚಿಸುವ ಉದ್ದೇಶವನ್ನು ಹೊಂದಿದೆ. ಈ ಚಳಿವಳಿಯಲ್ಲಿ ಭಾಗವಹಿಸಿದ ಅನೇಕ ಹಿರಿಯ ಹೋರಾಟಗಾರರು, ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮತ್ತು ಕನ್ನಡ ಚಳುವಳಿಯು ಮುಂದೆ ಸಾಗಬೇಕಾದ ಹಾದಿಗಳ ಬಗ್ಗೆ ಅನೇಕ ವಿಧ್ವಾಂಸರು ಬೆಳಕು ಚೆಲ್ಲಲಿದ್ದಾರೆ. ಗೋಕಾಕ ಚಳುವಳಿಯನ್ನು ಮುನ್ನಡೆಸಿದ ಹಿರಿಯ ಹೋರಾಟಗಾರರನ್ನು ಈ ಸಂದAರ್ಭದಲ್ಲಿ ಸನ್ಮಾನಿಸಲಾಗುವುದು ಎಂದರು.
ಕಾರ್ಯಕ್ರಮದ ಭಾಗವಾಗಿ ಕಲಾತಂಡಗಳಿAದ ಮೆರವಣಿಗೆ, ಕಲ್ಯಾಣ ಕರ್ನಾಟಕದ ಕಲಾ ತಂಡಗಳಿಂದ ಕಲಾ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಚಳುವಳಿಯ ಭಾವಚಿತ್ರಗಳು ಮತ್ತು ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ, ಅಪರ ಜಿಲ್ಲಾಧಿಕಾರಿ ಶಿವಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗೂರು, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಕೈಗಾರಿಕಾ ತರಬೇತಿಯ ಜಂಟಿ ನಿರ್ದೇಶಕರಾದ ಬಸವರಾಜ ಯಂಕAಚಿ, ಯುವಜನ ಸೇವ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ್ ನಾಯಕ, ದೇವದುರ್ಗ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.