Rabia, programa del Día del Corazón
ಕೊಪ್ಪಳ ಸೆಪ್ಟೆಂಬರ್ 30 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಘಟಕ ಹಾಗೂ ಎನ್.ಸಿ.ಡಿ. ಕೋಶ ಕೊಪ್ಪಳ, ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ರೇಬೀಸ್ ದಿನಾಚರಣೆ” ಮತ್ತು “ವಿಶ್ವ ಹೃದಯ ದಿನಾಚರಣೆ” ಕಾರ್ಯಕ್ರಮವು ಕೊಪ್ಪಳ ನಗರಸಭೆ ಸಭಾಂಗಣದಲ್ಲಿ ಸೆಪ್ಟೆಂಬರ್ 29ರಂದು ನಡೆಯಿತು.
ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಬ ಹಿರೇಗೌಡರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ ಪಾಷಾ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ನಂದಕುಮಾರ ಅವರು ಮಾತನಾಡಿ, ಪ್ರತಿ ವರ್ಷ ಸೆಪ್ಟೆಂಬರ್ 28ರಂದು “ವಿಶ್ವ ರೇಬೀಸ್ ದಿನಾಚರಣೆ” ಮತ್ತು ಸೆಪ್ಟೆಂಬರ್ 29ರಂದು “ವಿಶ್ವ ಹೃದಯ ದಿನಾಚರಣೆ” ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಇದರ ಉದ್ದೇಶ ದೇಶದಲ್ಲಿ ರೇಬಿಸ್‌ನಿಂದ ಈ ವರ್ಷದಲ್ಲಿ 25 ಸಾವು ಸಂಭವಿಸಿದ್ದು, ಪ್ರತಿ ಗಂಟೆಗೆ 2 ಸಾವು ಸಂಭವಿಸುತ್ತಿವೆ. `ಆಲ್ ಫಾರ್ ಒನ್ ಹೆಲ್ತ್ ಫಾರ್ ಆಲ್ ಮತ್ತು ಹೃದಯ ಉಳಿಸಿ ಮತ್ತು ಬೆಳೆಸಿ’ ಎಂಬ ಘೋಷವಾಕ್ಯದೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ರೇಬೀಸ್ ಒಂದು ವೈರಾಣು ಉಂಟಾಗುವ ರೋಗ, ಲಕ್ಷಣ ಉಂಟಾದಲ್ಲಿ (ಐಡ್ರೋಪೂಬಿಯಾ ಪೋಟೂಪೂಬಿಯಾ ಎರೋಪೂಬಿಯಾ) ಸಾವು ಖಚಿತವಾಗುತ್ತದೆ. ನಾಯಿ ಕಡಿತದ ಕೇಟಗರಿ ಆಪ್ ಬೈಟ್ ಬಗ್ಗೆ ಹಾಗೂ ನಾಯಿ ಕಡಿತದ ನಂತರ ತೆಗೆದುಕೊಳ್ಳಬೇಕಾದ ಲಸಿಕೆಯ ಕುರಿತು ಮಾಹಿತಿ ನೀಡಿದರು. “ವಿಶ್ವ ಹೃದಯ ದಿನಾಚರಣೆ” ಅಂಗವಾಗಿ ಹೃದಯ ಆರೋಗ್ಯದ ಕುರಿತು ತೆಗೆದುಕೊಳ್ಳಬೇಕಾದ ಸಲಹೆಗಳ ಕುರಿತು ವಿವರಿಸಿದರು. ಪ್ರತಿದಿನ ವ್ಯಾಯಾಮ , ಸೈಕ್ಲಿಂಗ ಮತ್ತು ವಾಕಿಂಗ ಬಗ್ಗೆ ವಿವರಿಸಿದರು. ಮುಖ್ಯವಾಗಿ ತೂಕ ನಿರ್ವಹಣೆ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ವೀರುಪಾಕ್ಷಪ್ಪ ಮುರನಾಳ, ಪೌರಾಯುಕ್ತರಾದ ಗಣಪತಿ ಪಾಟಿಲ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರಾದ ಡಾ.ಮಲ್ಲಯ್ಯ, ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತçಜ್ಞಾರಾದ ಡಾ.ಗುರುಪ್ರಸಾದ ಪುರೋಹಿತ ಮತ್ತು ಜಯಶ್ರೀ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವ್ಹಿ ಸಜ್ಜನರ್, ಜಿಲ್ಲಾ ಸೂಕ್ಮಾಣು ಜೀವಿ ಶಾಸ್ತ್ರಜ್ಞರಾದ ಹರ್ಷವರ್ಧನ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಕೊಪ್ಪಳ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ನಗರ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.