Breaking News

ಶವ ಪತ್ತೆ ಗುರುತು ಪತ್ತೆಗೆ ಮನವಿ ಪೋಲಿಸ್ ಇಲಾಖೆ ಮನವಿ,,

Request for identification of dead body Police department request,,

ಜಾಹೀರಾತು

ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ (ಯಲಬುರ್ಗಾ) : ತಾಲೂಕಿನ ಬೇವೂರ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 16-04-2024 ರಂದು ಬೆಳಿಗ್ಗೆ 6 ಘಂಟೆಯಿಂದ ಮಧ್ಯಾಹ್ನ 3:30 ಘಂಟೆಯ ಮದ್ಯದ ಅವಧಿಯಲ್ಲಿ ಅನಾಮಧೇಯ ಯುವಕ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾನೆ.

ಸುಮಾರು 25-30 ವಯಸ್ಸಿನವನಾಗಿದ್ದು ಬೇವೂರ ಸೀಮಾದ ವೀರಣ್ಣ ಹಳ್ಳಿಯವರ ಜಮೀನಿನ ಮಾವಿನ ಮರದ ಟೊಂಗೆಗೆ ಅಂಗಿಯಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತುಬೇವೂರ ಠಾಣೆಯಲ್ಲಿ ಯುಡಿಆರ್ ನಂ.05/2024 ಕಲಂ 174 ಸಿಆರ್ ಪಿಸಿಯಲ್ಲಿ ಪ್ರಕರಣ ದಾಖಲಾಗಿದೆ.

ಅನಾಮಧೇಯ ವ್ಯಕ್ತಿಯ ಶವ ಚಹರೆ ಹೆಸರು, ಗೊತ್ತಾಗಿರುವುದಿಲ್ಲಾ, ವಯಸ್ಸು : 25 ರಿಂದ 30 ಒಳಗಿದ್ದು, ಕಪ್ಪು ಬಣ್ಣ ಹೊಂದಿದ ಇತನು 5.3 ಅಡಿ ಎತ್ತರವಿದ್ದಾನೆ. ಒಂದು ಕೆಸರಿ ಬಣ್ಣದ ಉದ್ದನೇಯ ತೋಳಿನ ಶರ್ಟ್ ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿದ್ದಾನೆ.

ಈ ಮೇಲೆ ತಿಳಿಸಿದ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಬೇವೂರ ಪೋಲಿಸ್ ಠಾಣೆಗೆ ಹಾಗೂ ಈ ಕೆಳಗಿನ ದೂರವಾಣಿಗಳಿಗೆ ತಿಳಿಸಲು ಬೇವೂರ ಠಾಣೆಯ ಪಿಎಸ್ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಟ್ರೋಲ್ ರೂಮ್ 08539-230100. ಡಿಎಸ್ ಪಿ ಕೊಪ್ಪಳ 9480803720
ಸಿಪಿಐ ಯಲಬುರ್ಗಾ 9480803733 ಪಿಎಸ್ಐ ಬೇವೂರ 9480803751 ಬೇವೂರ ಪೋಲಿಸ್ ಠಾಣೆ 08534- 227641

About Mallikarjun

Check Also

ಡಾ,ಗಂಗಾಮಾತಾಜಿ ನೇತೃತ್ವದಲ್ಲಿ ನಡೆಯುತ್ತಿರು 23ನೇ ಕಲ್ಯಾಣ ಪರ್ವಕ್ಕೆ 25 ಸಾವಿರ ರೊಟ್ಟಿ ತಯಾರಿ

Preparation of 25 thousand roti for 23rd Kalyana Parva is going on under the leadership …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.