Distribution of eco-friendly Ganesha idols by Vasavi Yuvajana Sangh
ಬೆಂಗಳೂರು; ಅವೆನ್ಯೂ ರಸ್ತೆ. ವಾಸವಿ ಯುವಜನ ಸಂಘ ದಿಂದ 8 ನೇ ಬಾರಿ ವಿಶಿಷ್ಟ ರೀತಿಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಮಾಡಲಾಗುತ್ತಿದೆ.
ಸಂಘದ ಸುಮಾರು 50ಕ್ಕೂ ಹೆಚ್ಚು ಯುವಕರು ರಾಜಾ ಅಂಜನ್, ಮುರಳಿ ಕೃಷ್ಣ ನೇತೃತ್ವದಲ್ಲಿ ಸ್ನೇಹಿ ಮಣ್ಣಿನಿಂದ ಮಾಡಿದ, ಬಣ್ಣವಿಲ್ಲದ ಗೌರಿ – ಗಣೇಶ ಮೂರ್ತಿಗಳನ್ನು ಲಾಲ್ ಭಾಗ್ ಗೇಟ್ ಮುಂಭಾಗ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಿದರು.
ಗಣೇಶ ಮೂರ್ತಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಆಚಾರ್ಯ ಪಾಠ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ, ಪ್ರಕೃತಿ ಮಾತೆಯನ್ನು ಉಳಿಸಲು ಯುವ ಸಮೂಹ ವಿಭಿನ್ನ ಆಲೋಚನೆಗಳೊಂದಿಗೆ ವಿಭಿನ್ನವಾಗಿ ಆಯೋಜನೆ ಮಾಡಬೇಕು. ಎಲ್ಲ ಹಬ್ಬಗಳನ್ನು ಪ್ರಕೃತಿ ಮಾತೆಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ಗಣೇಶನ ರೀತಿಯಲ್ಲಿ ತಾಳ್ಮೆ, ಆಲೋಚನೆ ಮಾಡಬೇಕು. ಗಣೇಶನ ಕಿವಿಗಳಂತೆ ಕೇಳುಗರಾಗಬೇಕು. ಏಕಗ್ರತೆಗಾಗಿ ಗಣೇಶನ ಕಣ್ಣುಗಳು ಅತ್ಯಂತ ಅಗತ್ಯ ಎಂದರು.