NS Bosaraju Foundation distributed Rs 1 lakh each to the families of the deceased children
ರಾಯಚೂರು: ಜಿಲ್ಲೆಯ ಮಾನ್ವಿಯ ಲಯೋಲಾ ಶಾಲೆಯ ಬಸ್ ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಶಾಲಾ ಮಕ್ಕಳು ಮೃತಪಟ್ಟು ಹಲವಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ತಿಳಿದು ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಕುರ್ಡಿ ಗ್ರಾಮದ ಅಪಘಾತಕ್ಕೊಳಗಾದ ಕುಟುಂಬಗಳೊಂದಿಗೆ ಮಾತನಾಡಿ ಎನ್ಎಸ್ ಬೋಸರಾಜು ಫೌಂಡೇಶನ್ ನಿಂದ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 1 ಲಕ್ಷ ರೂ ದಂತೆ 2 ಲಕ್ಷ ರೂಗಳನ್ನು ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಅಪಘಾತದಲ್ಲಿ ಮೃತಪಟ್ಟ ಮಕ್ಕಳ ಕುಟುಂಬಗಳಿಗೆ ಈಗಾಗಲೇ ಕೆ ಎಸ್ ಆರ್ ಟಿ ಸಿ ಇಂದ 5 ಲಕ್ಷ ಹಣವನ್ನು ನೀಡಲಾಗುತ್ತಿದೆ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಈ ಪ್ರಕರಣದ ಕುರಿತು ಮಾತನಾಡಲಾಗಿದೆ. ಅಪಘಾತಕ್ಕೊಳಗಾದ ಮಕ್ಕಳ ಕುಟುಂಬಗಳಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿ ಎನ್‌ಎಸ್ ಬೋಸರಾಜು ಫೌಂಡೇಷನ್ ನಿಂದ ಮೃತ ಪಟ್ಟ ಮಕ್ಕಳ ಪಾಲಕರಿಗೆ ತಲಾ ಒಂದು ಲಕ್ಷ ರೂ ದಂತೆ ಒಟ್ಟು 2 ಲಕ್ಷ ರೂಗಳನ್ನು ನೀಡಿ ಅವರ ದುಃಖ ದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದರು.