Breaking News

ಪ್ರತೇಕ ಆನೆಗೊಂದಿ ಪ್ರಾಧಿಕಾರ ರಚಿಸಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸುವಂತೆ ಮನವಿ

A request to encourage tourism by creating an elephant authority


ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಿಷ್ಕಿಂಧಾ ಅಂಜನಾದ್ರಿ ಸೇರಿ ಸುತ್ತಲಿನ ಐತಿಹಾಸಿಕ ಮತ್ತು ಸೌಂದರ್ಯ ವೀಕ್ಷಣೆಗೆ ನಿತ್ಯವೂ ಸಾವಿರಾರು ಪ್ರವಾಸಿಗರು ಆಗಮಿಸುತ್ತಿರುವುದರಿಂದ ರಾಜ್ಯ ಸರಕಾರ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗದ ನಾಲ್ಕು ಗ್ರಾ.ಪಂ.ಗಳನ್ನು ಬೇರ್ಪಡಿಸಿ ಆನೆಗೊಂದಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಈ ಭಾಗದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವಂತೆ ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿರುವುದಾಗಿ ಜನತಾ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಟಿ.ಚಕ್ರವರ್ತಿ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನೆಗೊಂದಿ ಭಾಗದಲ್ಲಿ ವಿಶ್ವ ವಿಖ್ಯಾತ ಕಿಷ್ಕಿಂಧಾ ಅಂಜನಾದ್ರಿ, ಪಂಪಾಸರೋವರ, ಆನೆಗೊಂದಿ, ನವವೃಂದಾವನಗಡ್ಡಿ, ವಾಲೀಕಿಲ್ಲಾ ಆಧಿಶಕ್ತಿ ದೇಗುಲ, ಋಷಿಮುಖ ಪರ್ವತ ಸೇರಿ ಏಳುಗುಡ್ಡ ಪ್ರದೇಶ ಪ್ರಕೃತಿ ಸೌಂದರ್ಯ ಹಾಗೂ ಸಾಣಾಪೂರ ಫಾಲ್ಸ್, ಮತ್ತು ಲೇಖ ನೋಡಲು ನಿತ್ಯವೂ ಪ್ರವಾಸಿಗರು ಆಗಮಿಸುತ್ತಾರೆ. ಇವರಿಗೆ ಊಟ ವಸತಿ ಕಲ್ಪಿಸಲು ಸ್ಥಳೀಯರಿಗೆ ಸಣ್ಣಪುಟ್ಟ ಹೊಟೇಲ್ ಮಾಡಲು ಅನುಕೂಲ ಮಾಡಬೇಕು. ದೇಶ ವಿದೇಶದ ಪ್ರವಾಸಿಗರು ಆಗಮಿಸುವುದರಿಂದ ಅಕ್ರಮ ಚಟುವಟಿಕೆ ಮತ್ತು ಅವರ ಸುರಕ್ಷತೆಗಾಗಿ ಆನೆಗೊಂದಿ, ಅಂಜನಾದ್ರಿ, ಅಥವಾ ಸಾಣಾಪೂರದಲ್ಲಿ ಪೊಲೀಸ್ ಠಾಣೆ ಆರಂಭಿಸಬೇಕು.ಸAಚಾರಿ ಪೊಲೀಸ್ ವ್ಯವಸ್ಥೆ ಮತ್ತು ಅಂಜನಾದ್ರಿ ಹತ್ತಿರ ಆಸ್ಪತ್ರೆ ಸ್ಥಾಪನೆ ಹೀಗೆ ಪ್ರವಾಸೋದ್ಯಮಕ್ಕೆ ಪೂರಕವಾಗಲು ಯೋಜನೆಗಳ ಅನುಷ್ಠಾನವಾಗಬೇಕು. ಈ ಎಲ್ಲಾ ಯೋಜನೆ ಅನುಷ್ಠಾನವಾಗಲು ಶಾಸಕ ಗಾಲಿ ಜನಾರ್ದನರೆಡ್ಡಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಂತೆ ಸರಕಾರ ಪ್ರತೇಕ ಆನೆಗೊಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆದು ಕೂಡಲೇ ಕಾರ್ಯ ಆರಂಭಿಸಬೇಕು. ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆನೆಗೊಂದಿ ಭಾಗವಿದ್ದರೆ ಹೊಸಪೇಟೆ ಹೋಟೆಲ್ ಲಾಭಿ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸದಾ ಅಡ್ಡಿಯಾಗುತ್ತದೆ. ಸರಕಾರ ಕೂಡಲೇ ಪ್ರತೇಕ ಆನೆಗೊಂದಿ ಪ್ರಾಧಿಕಾರ ರಚಿಸುವಂತೆ ಟಿ.ಚಕ್ರವರ್ತಿ ನಾಯಕ ಮನವಿ ಮಾಡಿದ್ದಾರೆ.

ಜಾಹೀರಾತು

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *