Distribution of school bag and notebook and learning material by Gunj organization
ಮಾನ್ವಿ: ತಾಲೂಕಿನ ಪೋತ್ನಾಳ್ ಪಟ್ಟಣದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಕಾಲೋನಿ ಪೋತ್ನಾಳ್ ದಲ್ಲಿ ಗುಂಜ್ ಸಂಸ್ಥೆ ವತಿಯಿಂದ ಇಂದು 108 ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ಹಾಗೂ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಸಂಸ್ಥೆಯ ಶ್ರೀ ವೆಂಕಟೇಶ ಆಯನೂರು ಮಾತನಾಡಿ ನೀವುಗಳು ಚೆನ್ನಾಗಿ ವಿಧ್ಯಾಭ್ಯಾಸ ಮಾಡಬೇಕು,ಈಗಿನ ತಂದೆತಾಯಿಗಳು ಎಷ್ಟೋ ಜನ ಬಡವರಿರ್ತಾರೆ,ಆದ್ದರಿಂದ ನಮ್ಮ ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂತಹ ಚಿಕ್ಕದಾದ ಸಹಾಯವನ್ನು ಮಾಡುತ್ತಿದ್ದೇವೆ, ಚೆನ್ನಾಗಿ ಓದಿ ಸಮಾಜದಲ್ಲಿ ಉನ್ನತವಾದ ಸ್ಥಾನಗಳಿಗೆ ಹೋಗಬೇಕೆಂದು ನಮ್ಮ ಬಯಕೆ.ನಾವು ಕೊಟ್ಟಿರುವಂತಹ ವಸ್ತುಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಗುಂಡಯ್ಯ ನಾಯಕ್ ಕರೇಗುಡ್ಡ ಮಾತನಾಡಿ ಗುಂಜ್ ಸಂಸ್ಥೆಯವರು ನಮ್ಮ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೋಟ್ ಬುಕ್ ಕೊಡುತ್ತಿರುವುದು ನಮಗೆ ಖುಷಿಯ ವಿಚಾರ. ಸರಕಾರಿ ಶಾಲೆಯಲ್ಲಿ ಇರುತ್ತಕ್ಕಂತಹ ನಮ್ಮ ಮಕ್ಕಳು ಸರಿಯಾದ ರೀತಿಯಲ್ಲಿ ಅವನ್ನು ಬಳಸಿಕೊಳ್ಳಬೇಕು.ಮತ್ತು ನೀವು ಸರಿಯಾಗಿ ವಿಧ್ಯಾಭ್ಯಾಸ ಮಾಡಬೇಕು. ಕೊಟ್ಟಿರುವ ಸಂಸ್ಥೆಗೆ ಗೌರವ ತರುವ ರೀತಿಯಲ್ಲಿ ವಿಧ್ಯಾಭ್ಯಾಸ ಮಾಡಿ ಮುಂದೆ ಉನ್ನತ ಸ್ಥಾನಗಳಿಗೆ ಹೋಗಬೇಕು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಶೋಕ ತಡಕಲ್ ಮಾತನಾಡಿ ಮಕ್ಕಳು ಚೆನ್ನಾಗಿ ವಿಧ್ಯಾಭ್ಯಾಸ ಮಾಡಬೇಕು,ನೀವು ಚೆನ್ನಾಗಿ ಓದಿ ನಿಮ್ಮ ತಂದೆತಾಯಿಗಳಿಗೆ ಹೆಸರು ತರಬೇಕು, ಶಿಕ್ಷಕರು ಕೊಡುವಂತ ವಿಧ್ಯಾಭ್ಯಾಸ ಚೆನ್ನಾಗಿ ಕಲಿಯಬೇಕು, ಮತ್ತು ಇವತ್ತು ಕೊಟ್ಟಂತಹ ಶಾಲಾ ಬ್ಯಾಗ್, ನೋಟ್ಬುಕ ಗಳನ್ನು
ಸರಿಯಾಗಿ ಬಳಸಿಕೊಳ್ಳಬೇಕು.
ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ ಆಯನೂರು ಗುಂಜ್ ಸಂಸ್ಥೆ, ಮುಖ್ಯಗುರು ಶ್ರೀ ಗುಂಡಯ್ಯ ನಾಯಕ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀ ಶರಣಪ್ಪ ರಂಗದಾಳ್, ಮಾನ್ವಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶ್ರೀ ಅಶೋಕ ತಡಕಲ್, ಸಹ ಶಿಕ್ಷಕರಾದ ಶ್ರೀಮತಿ ಗೀತಾ ಮಳ್ಳಿ, ಶ್ರೀಮತಿ ಹಂಪಮ್ಮ, ಹಾಗೂ ಅತಿಥಿ ಶಿಕ್ಷಕರಾದ ಶ್ರೀಪರಶುರಾಮ್ ಹಾಗೂ ಶ್ರೀಮತಿ ಮೀನಾಕ್ಷಿ ಶಾಲೆಯ ಮಕ್ಕಳ ಪಾಲಕರು ಸೇರಿದಂತೆ ಅನೇಕರು ಇದ್ದರು.