Depot manager who insulted Ambedkar’s portrait demanded suspension.
ತಿಪಟೂರು:ನಗರದ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾಧಿ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನ ಕಿತ್ತೆಸೆದು ಅವಮಾನ ಮಾಡಿರುವ ತಿಪಟೂರು ಕೆ.ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ರವಿಶಂಕರ್ ರವರನ್ನ ಸರ್ಕಾರ ಕೂಡಲೇ ಅಮಾನತ್ತುಗೊಳಿಸ ಬೇಕು ವಿಶ್ವ ಪ್ರಜಾಪ್ರಭುತ್ವದ ದಿನವೇ ಅವಮಾನ ಮಾಡಿ ಗುಂಡಾವರ್ತನೆ ತೋರಿ,ನ್ಯಾಯ ಕೇಳಲು ಹೋದ ದಲಿತಪರ ಸಂಘಟನೆಗಳ ಮುಖಂಡರಿಗೂ ಗೌರವ ನೀಡದೇ ಅಗೌರವದಿಂದ ವರ್ತಿಸಿರುವ ರವಿಶಂಕರ್ ವರ್ತನೆ ಖಂಡನೀಯವಾಗಿದೆ. ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿರುವ ಅಧಿಕಾರಿಯನ್ನ ಕೂಡಲೇ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ವಿಶ್ವಪ್ರಜಾಪ್ರಭುತ್ವದ ದಿನ ಇಡೀ ವಿಶ್ವವೇ ಡಾ//ಬಿ.ಆರ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸುತ್ತಿದ್ದರೆ ದಲಿತ ವರ್ಗಕ್ಕೆ ಸೇರಿದ ರವಿಶಂಕರ್ ಅಗೌರವ ತೋರಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿರುವ ಡಿಪೋ ಮ್ಯಾನೇಜರ್ ನ್ಯಾಯಕೇಳಲು ಹೋದ ದಲಿತ ಮುಖಂಡರಿಗೂ ಅಗೌರವ ತೋರಿರುವುದು ಖಂಡನೀಯ, ಕೆಲ ದಲಿತ ಮುಖಂಡರಿಗೆ ಬೆದರಿಕೆಯೊಡ್ಡುವ ಕೃತ್ಯ ಸಹ ಮಾಡಲಾಗಿದೆ.ಅಧಿಕಾರದ ದರ್ಪದಿಂದ ಜನವಿರೋದಿಯಾಗಿ ವರ್ತಿಸುತ್ತಿರುವ ರವಿಶಂಕರ್ ವರ್ತನೆಗೆ ಸಾರ್ವಜನಿಕರಿಗೆ ಅಕ್ಷೇಪವ್ಯಕ್ತವಾಗಿದ್ದು. ಸರ್ಕಾರ ಕೂಡಲೇ ಅಮಾನತ್ತಿನಲ್ಲಿ ಇಟ್ಟು ಇಲಾಖೆಯ ಮೇಲಧಿಕಾರಿಗಳಿಂದ ತನಿಖೆ ನಡೆಸಬೇಕು. ಬಸ್ ನಿಲ್ದಾಣದಲ್ಲಿ ಹಲವಾರು ಮಹಾನ್ ನಾಯಕರ ಪೊಟೋಗಳನ್ನ ಅಳವಡಿಸಿದ್ದು. ಅಂಬೇಡ್ಕರ್ ಪೋಟೋ ಮಾತ್ರ ತೆರವುಗೊಳಿಸಿರುವ ಅಧಿಕಾರಿಯ ವರ್ತನೆ ಸರಿಯಲ್ಲ.ಇನ್ನೂ,ಪತ್ರಕರ್ತರೊಬ್ಬರು ಪತ್ರಿಕಾ ಮೌಲ್ಯಗಳನ್ನ ಎತ್ತಿಹಿಡಿದು ನ್ಯಾಯಪರವಾಗಿ ವರದಿಮಾಡದೇ ದಲಿತ ಮುಖಂಡರಿಗೆ ಬೆದರಿಕೆ ಹಾಕಿ ಅಧಿಕಾರಿಯ ಪರವಾಗಿ ವಕಾಲತ್ತು ವಹಿಸಿರುವುದು ಹಾಸ್ಯಸ್ಪದನಾಗಿದೆ.
ಸರ್ಕಾರ ಕೂಡಲೇ ಪ್ರಕರಣವನ್ನ ಕೂಲಂಕುಷವಾಗಿ ತನಿಖೆ ನಡೆಸಬೇಕು,ತಿಪಟೂರು ಕೆ.ಎಸ್ ಆರ್ ಟಿ ಬಸ್ ನಿಲ್ದಾಣದಲ್ಲಿ ಜನರಿಗೆ ಆಗುವ ತೊಂದರೆಗಳ ಬಗ್ಗೆ ಕೇಳಲು ಹೋದ ಸಾರ್ವಜನಿಕರ ಮೇಲೂ ಗುಂಡಾಗಿರಿ ನಡೆಸಿರುವ ದೂರುಗಳಿದು ಸರ್ಕಾರ ಸೂಕ್ತ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದರೆ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುವುದ್ದಾಗಿ ದಲಿತ ಮುಖಂಡರಾದ ಕುಪ್ಪಾಳು ರಂಗಸ್ವಾಮಿ.ಕೊಪ್ಪ ಶಾಂತಪ್ಪ.ನಾಗ್ತಿಹಳ್ಳಿ ಕೃಷ್ಣಮೂರ್ತಿ. ಶೆಟ್ಟಿಹಳ್ಳಿ ಕಲ್ಲೇಶ್.ಗಾಂಧೀ ನಗರ ಬಸವರಾಜು.ಶಿವಕುಮಾರ್ ಮತ್ತಿಘಟ್ಟ .ಹರ್ಚನಹಳ್ಳಿ ಮಂಜುನಾಥ್. ಒತ್ತಾಯಿಸಿದ್ದಾರೆ