Breaking News

ಲಿಟಲ್ ಹಾರ್ಟ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ,ಗಮನ ಸೆಳೆದಶಿಕ್ಷಕರ,ಸಾಂಸ್ಕೃತಿಕ ಕಾರ್ಯಕ್ರಮಗಳು

Teacher’s Day Celebration at Little Heart School

ಜಾಹೀರಾತು

ಗಂಗಾವತಿ17, ನಗರದ ಲಿಟಲ್ ಹಾರ್ಟ್ ಶಾಲೆಯಲ್ಲಿ ಶನಿವಾರದಂದು ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು, ಜಗನ್ನಾಥ ಆಲಮ್ಪಲ್ಲಿ ಹಾಗೂ ಮುಖ್ಯೋಪಾಧ್ಯಾಯ ಪ್ರಿಯಕುಮಾರಿ ಸೇರಿದಂತೆ ವೇದಿಕೆಯಲ್ಲಿನ ಗಣ್ಯರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು, ಬಳಿಕ ಜಗನ್ನಾಥ್ ಆಲಂಪಲ್ಲಿ ಮಾತನಾಡಿ ಸಮೃದ್ಧ ರಾಷ್ಟ್ರದಲ್ಲಿ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ, ಶಿಕ್ಷಕರು ತಮ್ಮ ವೃತ್ತಿಯ ಮೌಲ್ಯವನ್ನು ಅರಿತು ಪಾಠ ಪ್ರವಚನಿಗೆ ಮುಂದಾಗಬೇಕು, ಹಿ oದಿನ ಶಿಕ್ಷಣ ಪದ್ಧತಿಗೂ ಹಾಗೂ ಪ್ರಸ್ತುತ ಶಿಕ್ಷಣ ಪದ್ಧತಿಗೂ ವ್ಯತ್ಯಾಸವಾಗಿದ್ದು ಪಾಲಕರು ಶಿಕ್ಷಕರಿಗೆ ಸಹಕಾರ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮುಂದಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಸಂಸ್ಥೆ ಸದಸ್ಯರುಗಳಾದ ನರಸಿಂಹಮೂರ್ತಿ ಆಲಂಪಲ್ಲಿ, ಇಬ್ರಾಹಿಂ ಹೂಗ ರ, ಪ್ರಭಾಕರ್, ನಾಣಿ, ರಜಿನಿ ಇತರರು ಉಪಸ್ಥಿತರಿದ್ದರು, ಬಳಿಕ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಉಭಯ ಶಾಲೆಗಳ ಶಿಕ್ಷಕರು ನೃತ್ಯ, ಸಂಗೀತ, ಕ್ಯಾಟ್ ವಾಕ್, ಇತರೆ ಕಾರ್ಯಕ್ರಮಗಳು ಆಕರ್ಷಣೀಯವಾಗಿ ಮೂಡಿಬಂದವು

About Mallikarjun

Check Also

ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ

MLA K Shadakshari distributes kits to workers ತಿಪಟೂರು.ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ …

Leave a Reply

Your email address will not be published. Required fields are marked *