Breaking News

ಗಣಿಗಾರಿಕೆಯಿಂದ ಉದ್ಯೋಗಾವಕಾಶದ ಜೊತೆ ಅಭಿವೃದ್ಧಿ ಸಾಧ್ಯ : ಪ್ರಸನ್ನ ಕುಮಾರ

Development is possible with employment opportunities through mining: Prasanna Kumar

ಜಾಹೀರಾತು

ಕೊಪ್ಪಳ: ಗಣಿಗಾರಿಕೆಯಿಂದ ಉದ್ಯೋಗದ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಸಹಕಾರಿ ಯಾಗುತ್ತದೆ. ಹಾಗೂ ಆರ್ಥಿಕತೆ ಸಾರ್ವತ್ರಿಕ ಅಭಿವೃದ್ಧಿ ಯಾಗುತ್ತದೆ ಎಂದು ಹೊಸಪೇಟೆಯ ಹಿರಿಯ ಭೂ ವಿಜ್ಞಾನಿ ಪ್ರಸನ್ನ ಕುಮಾರ ಹೇಳಿದರು.

ಶುಕ್ರವಾರದಂದು ಕುಕನೂರು ತಾಲೂಕಿನ ಗಾವರಾಳ ಗ್ರಾಮದ ಸೀಮಾ ವ್ಯಾಪ್ತಿಯ ಎಸ್.ವಿ ಗ್ರಾನೈಟ್ ನ ಜಮೀನಿನಲ್ಲಿ ಜಿಲ್ಲಾಧಿಕಾರಿ, ಕೊಪ್ಪಳ ಜಿಲ್ಲಾ ಕೆ.ಎಸ್.ಪಿ.ಸಿ.ಬಿ. ಹಿರಿಯ ಪರಿಸರ ಅಧಿಕಾರಿಗಳು, ಪರಿಸರ ಸಂಬಂಧಿಸಿದ ಸಂಘ ಸಂಸ್ಥೆಗಳು, ಪತ್ರಕರ್ತರು ಇತರರಿಗೆ ಹಮ್ಮಿಕೊಂಡ ಪರಿಸರದ ಬಗ್ಗೆ ಸಾರ್ವಜನಿಕರ ಆಲಿಕೆ ಸಭೆಯಲ್ಲಿ ಅವರು ಮಾತನಾಡಿದರು.

ಗಣಿಗಾರಿಕೆ ಪರಿಸರ ನಿರ್ವಹಣೆ ವಿಧಾನ ಮತ್ತು ಪರಿಸರ ಯೋಜನೆ ನಿರ್ವಹಣೆ ರಕ್ಷಿಸುತ್ತದೆ. ಇದರ ಜೊತೆಯಲ್ಲಿ ಆಡಳಿತ ಮಂಡಳಿ ಆರೋಗ್ಯ ರಕ್ಷಣೆ , ನೀರಿನ ನಿರ್ವಹಣೆ ಸ್ಥಾಪಿಸಲು ಪ್ರಸ್ಥಾಪಿಸಿರುತ್ತದೆ ಹಾಗೂ ಗಣಿಗಾರಿಕೆ ಪ್ರದೇಶದ ಸುತ್ತಲೂ ಹಸಿರು ವಲಯ ಮಾಡುವ ಯೋಜನೆಗಳು ಇದ್ದು ಗಣಿದಾರರು ಪ್ರದೇಶದ ಸಮರ್ಥನೀಯ ಅಭಿವೃದ್ಧಿ ಮಾಡಲು ಯೋಚಿಸಿರುತ್ತಾರೆ ಎಂದರು.

ಗಣಿಗಾರಿಕೆಯಿಂದಾಗಿ ಯಾವುದೇ ರೀತಿ ವಿಷಕಾರಿ ಉತ್ಪನ್ನಗಳಾಗಲಿ ಉತ್ಪಾದಿಸುವದಿಲ್ಲಾ, ಇದರಿಂದ ವಾಯು ಮಾಲಿನ್ಯವಾಗಲಿ, ನೀರಿನ ಮೇಲಾಗಲಿ ಯಾವ ಕೆಟ್ಟ ಪರಿಣಾಮಗಳು ಬರದಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ನಂತರದಲ್ಲಿ ಮಸಬಹಂಚಿನಾಳ ಗ್ರಾಮ ಪಂಚಾಯತಿ ಸದಸ್ಯ ಮಹೇಶ ಗಾವರಾಳ ಮಾತನಾಡಿ ನಮ್ಮ ಭಾಗದಲ್ಲಿ ಗಣಿಗಾರಿಕೆ ಮಾಡುವುದರಿಂದ ಸಾಕಷ್ಟು ಉದ್ಯೋಗವಕಾಶ ದೊರೆಯುವುದಲ್ಲದೇ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುತ್ತದೆ.

ಇಲ್ಲಿನ ಬಡ ಜನತೆ ನಿರುದ್ಯೋಗದಿಂದ ಬಳಲುತ್ತಿದ್ದು, ಉದ್ಯೋಗ ಅರಸಿ ಬೇರೆ ಬೇರೆ ಪ್ರದೇಶಗಳಿಗೆ ತೆರಳುತ್ತಾರೆ , ನಮ್ಮ ಭಾಗದಲ್ಲಿ ಸ್ಥಳೀಯ ಕಾರ್ಮಿಕರಿಗೆ ದುಡಿಯಲು ಯಾವುದೇ ಕಂಪನಿ, ಕೈಗಾರಿಕೆ ಕಾರ್ಖಾನೆಗಳ ಅನೂಕೂಲಗಳಿಲ್ಲಾ.
ಗಣಿ ಮಾಲಕರು ಬೇರೆ ಪ್ರದೇಶಗಳ ಕಾರ್ಮಿಕರನ್ನು ಕರೆ ತಂದು ಕೆಲಸ ಮಾಡುವುದು ನಿಲ್ಲಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದರು.

ಗಾವರಾಳ ಸೀಮಾದಲ್ಲಿ ಈ ಹಿಂದೆ ಇದ್ದ ಗಣಿಗಳಿಂದ ಡಂಪಿಂಗ್ ಮಾಡಿದ ನಿರುಪಯುಕ್ತ ಕಲ್ಲು, ಮಣ್ಣು ಗುಡ್ಡದ ಆಕಾರ ಬೆಳೆದಿದ್ದು , ವನ್ಯ ಜೀವಿಗಳಿಗೆ ವಾಸ ಸ್ಥಾನವಾಗಿ ಮಾರ್ಪಟ್ಟು, ಮೂರು ವರ್ಷದ ಹಿಂದೆ ಚಿರತೆಗಳ ಬಂದು ಇಲ್ಲಿಯೇ ಬಿಡಾರ ಹೂಡಿದ್ದು, ಇಲ್ಲಿನ ರೈತಾಪಿ ವರ್ಗದವರು ಜೀವ ಭಯದಿಂದ ವಾಸಿಸುವಂತಾಗಿದ್ದು, ಕೂಡಲೇ ಇಲ್ಲಿನ ಗಣಿ ಮಾಲಕರಿಗೆ ಡಂಪಿಂಗ್ ನ್ನು ಸ್ವಚ್ಚಗೊಳಿಸಿ ಸೂಚಿಸಬೇಕು ಎಂದು ತಿಳಿಸಿದರು.

ನಂತರ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಮಾತನಾಡಿ ಎಲ್ಲಾ ಗಣಿಯವರಿಗೆ ಡಂಪಿಂಗ್ ಯಾರ್ಡ್ ಸ್ವಚ್ಛತೆಗೆ ಸೂಚಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಗಣಿಗಾರಿಕೆ ನಡೆಸಲು ಸೂಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಕುಕನೂರು ತಹಶೀಲ್ದಾರ ಪ್ರಾಣೇಶ, ಕೊಪ್ಪಳ ಪರಿಸರ ಸಂರಕ್ಷಣಾಧಿಕಾರಿ ಮುರುಳಿಧರ್, ಪರಿಸರ ಸಂರಕ್ಷಣಾ ಇಲಾಖೆಯವರು, ರೈತರು ಸಾರ್ವಜನಿಕರು ಇದ್ದರು.

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *