Breaking News

ಪತ್ರಕರ್ತರ ಮಕ್ಕಳಿಗೆ ಜ್ಯೋತಿಭಾಫುಲೆ ವಿದ್ಯಾರ್ಥಿರತ್ನ ಪುರಸ್ಕಾರ ಪ್ರದಾನ

Jyotibhaphule Vidyarthi Ratna award given to children of journalists

ಜಾಹೀರಾತು

ಕೊಪ್ಪಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಜ್ಯೋತಿಭಾ ಫುಲೆ ವಿದ್ಯಾರ್ಥಿರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಗರದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ಪತ್ರಿಕಾರಂಗ ಪವಿತ್ರವಾದದ್ದು, ಸಮಾಜ ತಿದ್ದುವಲ್ಲಿ ಅವರ ಪಾತ್ರ ಮುಖ್ಯವಾಗಿದೆ ಆದರೆ ಅವರ ಸ್ಥಿತಿ ಶೋಚನೀಯವಾಗಿದೆ, ಕೆಲವು ಮಾಧ್ಯಮಗಳು ಸತ್ಯದಿಂದ ದೂರವಿದ್ದಾರೆ ಎಂಬುದು ಸಮಾಜಕ್ಕೆ ಕಂಟಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ನಾನು ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಸಂಧರ್ಭದಿAದ ಎಂಎಲ್ಸಿಯಾಗುವರೆಗೂ ತಮ್ಮ ಬೆಳವಣಿಗೆಗೆ ಪತ್ರಕರ್ತರ ಸಹಕಾರ ಅತಿಮುಖ್ಯವಾಗಿದೆ ಎಂದರು.
ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ್ ಮಾತನಾಡಿ, ಈಗಾಗಲೇ ನಗರಸಭೆಯಿಂದ ಪತ್ರಕರ್ತರಿಗೆ ನಿವೇಶನ ನೀಡಲು ಹಕ್ಕುಪತ್ರಗಳು ಸಿದ್ಧವಾಗಿದೆ. ಶಾಸಕರು ಶೀಘ್ರದಲ್ಲೇ ವಿತರಣೆ ಮಾಡುತ್ತಾರೆ ಎಂದರು. ಅಲ್ಲದೆ ನಿವೇಶನ ನೀಡಿದ ಬಳಿಕ ನಗರಸಭೆಯಿಂದ ಮನೆಕಟ್ಟಿಸಿ ಕೊಡುತ್ತೇವೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಮಾತಾನಾಡಿ, ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ವಿತರಣೆಯಲ್ಲಿ ಎಲ್ಲಾ ಹಿರಿಯ ಪತ್ರಕರ್ತರ ಸಲಹೆ ಪಡೆದು, ಸೂಕ್ತವಾಗಿರುವವರಿಗೆ ನೀಡಲಾಗುವುದು ಎಂದರು.
ಸAಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ ಅಧ್ಯಕ್ಷತೆವಹಿಸಿದ್ದರು. ಈ ಸಂಧರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಅಶ್ವಿನಿ ಗದುಗಿನಮಠ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಕಾನಿಪ ರಾಜ್ಯ ಸಮಿತಿ ಸದಸ್ಯ ದೇವರಾಜ್, ರಾಜ್ಯ ಸಮಿತಿ ಸದಸ್ಯ ಎಂ. ಸಾದಿಕ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ವೈ. ಪತ್ರರ್ಕರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಹೆಚ್.ವಿ., ರಾಜು ಬಿ.ಆರ್., ಎನ್.ಎಂ ದೊಡ್ಡಮನಿ, ಹೆಚ್. ಎಸ್. ಹರೀಶ್, ಹನುಮಂತ ಹಳ್ಳಿಕೇರಿ, ರುದ್ರಗೌಡ ಪಾಟೀಲ್, ವೀರಣ್ಣ ಕಳ್ಳಿಮನಿ, ಚಾಂದ್ ಸಿಂಗ್, ಮಂಜುನಾಥ ಅಂಗಡಿ, ಪ್ರತಿಭಾ ಪುರಸ್ಕಾರ ಸಮಿತಿಯ ಮಂಜುನಾಥ ಜಿ. ಗೊಂಡಬಾಳ, ಸಿದ್ದು ಹಿರೇಮಠ, ಉಮೇಶ ಪೂಜಾರ, ಕ್ರೀಡಾ ಸಮಿತಿ ಸದಸ್ಯರು ಇದ್ದರು.
ಪ್ರಶಸ್ತಿ ಜೊತೆಗೆ ಸಂಘದಿAದ ೫೦೦ ಮತ್ತು ಸಂಸದ ರಾಜಶೇಖರ ಹಿಟ್ನಾಳ ಅವರಿಂದ ೨೦೦೦ ನಗದು ಸಮೇತ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಾಹಿತ್ಯ ಎಂ. ಗೊಂಡಬಾಳ, ಎಸ್. ಎನ್. ಬೃಂದಾ ನಾರಾಯಣ, ಕಾವ್ಯ ಬಸಪ್ಪ ಕೊಡ್ಲಿ ಮತ್ತು ಸಾಹಿಲಕುಮಾರ ವೀರಣ್ಣ ಕಳ್ಳಿಮನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾ ಪುರಸ್ಕಾರವನ್ನು ಸ್ವಂತ ಖರ್ಚಿನಿಂದ ನಡೆಸಿಕೊಟ್ಟ ಮೂವರಿಗೆ ಗೌರವಿಸಲಾಯಿತು.

About Mallikarjun

Check Also

ದೇಶದಲ್ಲಿಅಧಿಕಾರಶಾಹಿ ಪದ್ಧತಿನಿರ್ಮೂಲವಾಗಬೇಕು : ಡಾ.ಕೆ ಎಸ್ ಜನಾರ್ದನ್

Bureaucracy should be eradicated in the country: Dr. KS Janardhan ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ  …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.