Municipal commissioner who does not even listen to MLAs: Aili Nagaraja

ಗಂಗಾವತಿ: ನಗರದಲ್ಲಿ ಹೆಸರುವಾಸಿಯಾಗಿರುವ ನೆಹರು ಉದ್ಯಾನವನದ ಸುರಕ್ಷತೆ ಮತ್ತು ಸ್ವಚ್ಚತೆಯ ಬಗ್ಗೆ ಗಂಗಾವತಿ ನಗರಸಭೆ ಕಡೆಗಣಿಸಿದೆ. ಉದ್ಯಾನವನದ ಸ್ವಚ್ಛತೆ ಕಾಪಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ನಮ್ಮ ಸಂಘಟನೆ ಶಾಸಕರು ಹಾಗೂ ಪೌರಾಯುಕ್ತರು ಉಭಯರ ಸಮ್ಮುಖದಲ್ಲಿ ಕಳೆದ ತಿಂಗಳು ಮನವಿ ಮಾಡಿಕೊಂಡಿದ್ದು, ಶಾಸಕರು ಈ ಬಗ್ಗೆ ಸೂಕ್ತ ಕ್ರಮವಹಿಸಲು ಪೌರಾಯುಕ್ತರಿಗೆ ಸೂಚಿಸಿದಾಗ್ಯೂ ಪೌರಾಯುಕ್ತರು ಶಾಸಕರ ಮಾತಿಗೆ ಕಿಮ್ಮತ್ತು ಕೊಡದೇ ನಿರ್ಲಕ್ಷö್ಯವಹಿಸಿರುತ್ತಾರೆ ಎಂದು ಕರವೇ ನಾರಾಯಣಗೌಡ ಬಣ ಸಂಘಟನೆ ಗಂಗಾವತಿ ನಗರ ಘಟಕ ಅಧ್ಯಕ್ಷರಾದ ಐಲಿ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.
ಸದರಿ ಉದ್ಯಾನವನದಲ್ಲಿ ಬರುವ ಸಾರ್ವಜನಿರು ಮತ್ತು ಬೇರೆ ಬೇರೆ ಊರಿಗೆ ಹೋಗುವ ಪ್ರಯಾಣಿಕರು ವಿಶ್ರಾಂತಿಯ ಸಲುವಾಗಿ ಈ ಉದ್ಯಾನಕ್ಕೆ ಬರುತ್ತಾರೆ. ವಯಸ್ಸಾದ ವೃದ್ದರು, ಹಿರಿಯ ನಾಗಕರಿಕರು ಉದ್ಯಾನವನದಲ್ಲಿ ವಾಯು ವಿಹಾರಕ್ಕೆ, ವ್ಯಾಯಮಕ್ಕೆ ಬರುತ್ತಾರೆ. ಆದರೆ ಈ ಉದ್ಯಾನವನದಲ್ಲಿ ಸ್ವಚ್ಚತೆ ಇಲ್ಲದೆ ಮತ್ತು ವ್ಯಾಯಾಮ ಸಲುವಾಗಿ ಹಾಕಿರುವ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುತ್ತವೆ. ಇದರಿಂದಾಗಿ ವೃದ್ಧರಿಗೆ, ಹಿರಿಯ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಮತ್ತು ಹಗಲು ರಾತ್ರಿ ಈ ಉದ್ಯಾನವನದಲ್ಲಿ ಕುಡುಕರ ಹಾವಳಿ ಮತ್ತು ಅನೈತಿಕ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಯಾವುದೇ ಇಲ್ಲಾಖೆಯ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ. ಅಲ್ಲದೇ ಸ್ವಚ್ಚತೆ ಇಲ್ಲದೆ ಕಲುಷಿತ ವಾತಾವರಣ ಉಂಟಾಗಿದೆ ಮತ್ತು ಈ ಉದ್ಯಾನವನಕ್ಕೆ ಬಂದಿರುವ ಸಾರ್ವಜನಿಕರು ಪ್ರಯಾಣಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಮತ್ತು ಈ ಉದ್ಯಾನವನದಲ್ಲಿ ಮಧ್ಯಪಾನದ ಬಾಟಲ್‌ಗಳು, ಇತರೆ ಅನೈತಿಕ ಚಟುವಟಿಕೆಗೆ ಉಪಯೋಗಿಸುವ ವಸ್ತುಗಳು ಉದ್ಯಾನವನದಲ್ಲಿ ಕಾಣತ್ತಿವೆ. ಉದ್ಯಾನವನದ ಸುತ್ತಲು ಸರಿಯಾಗಿ ಬೇಲಿ ವ್ಯವಸ್ಥೆ ಇರುವದಿಲ್ಲ. ಈಗಲಾದರೂ ಈ ಉದ್ಯಾನದತ್ತ ಶಾಸಕರು ಹಾಗೂ ಪೌರಾಯುಕ್ತರು ಗಮನಹರಿಸಿ ಸ್ಥಳಪರಿಶಿಲನೆ ಮಾಡಿ ಇದರಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಸ್ವಚ್ಚತೆಯನ್ನು ಕಾಪಾಡಬೇಕು ಮತ್ತು ವ್ಯಾಯಾಮಕ್ಕೆ ಉಪಯೋಗಿಸುವ ಸಾಮಾಗ್ರಿಗಳು ಸರಿಪಡಿಸಬೇಕೆಂದು ಮತ್ತು ಸಂಜೆ ೬.೦೦ ಗಂಟೆಯ ನಂತರ ಉದ್ಯಾನವನದ ಭದ್ರತೆಯ ಗೇಟಿಗೆ ಬೀಗಹಾಕಬೇಕು ಮತ್ತು ಒಂದು ಕಾವಲುಗಾರರನ್ನು ನೇಮಿಸಬೇಕೆಂದು ನಮ್ಮ ಸಂಘಟನೆಯಿAದ ಒತ್ತಾಯಿಸಲಾಗಿದೆ.