MLA M R Manjunath expressed appreciation for the work of the Karnataka Journalists Association
ವರದಿ : ಬಂಗಾರಪ್ಪ ಸಿ.
ಹನೂರು : ಇಂದಿನ ಪರಿಸ್ಥಿತಿಯಲ್ಲಿ ಪತ್ರಿಕೆಗಳಾಗಲಿ ಅದರ ಸಂಘ ಸಂಸ್ಥೆಗಳಾಗಲಿ ನಡೆಸಬೇಕಾದರೆ ಬಹಳ ಕಠಿಣ ಶ್ರಮ ಬೇಕು ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಘವು ಮಾಡುವಂತ ಸಾಮಾಜಿಕ ಕಾರ್ಯವು ಮೆಚ್ಚುವಂತಹದು ಯಾರು ಎನೆ ಹೇಳಿದರು ನೀವು ನ್ಯಾಯದ ಪರ ಸಮಾಜದ ಕಳಕಳಿಯುಳ್ಳ ಸುದ್ದಿಗಳನ್ನು ಪ್ರಕಟಿಸಿ ನಿಮ್ಮೇಲ್ಲ ನೋವು ನಲಿವಿನಲ್ಲಿ ನಾನಿದ್ದೆನೆ ,ಹಾಗೂ ಪತ್ರಕರ್ತರಾದವರು ನಮ್ಮ ಸುತ್ತಮುತ್ತಲಿನ ನಡೆಯುವ ಅಂಕುಡೊಂಕುಗಳನ್ನು ತಿದ್ದುವ ಕಾರ್ಯ ಮಾಡಬೇಕು ಸುದ್ದಿಗಳ ಕಡೆ ಹೆಚ್ಚು ಗಮನ ಹರಿಸಬೇಕು, ಎಂದು ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು ತಿಳಿಸಿದರು
ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇವಾಲಯದ ಕಲ್ಯಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಪತ್ರಕರ್ತರ ದಿನಾಚರಣೆಯಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ಪ್ರತಿಯೋಂದು ಸುದ್ದಿಯು ಪ್ರಬುದ್ದತೆಯಿಂದ ಕೂಡಿರುವ ಹಾಗೆ ಮಾಡಬೇಕು ಯುವಕರು ಹೆಚ್ಚು ಪತ್ರಕರ್ತರಾಗಿದ್ದಿರ ಅಲ್ಲದೆ ನಿಮ್ಮ ಸಂಘದಿಂದ ಶಾಲಾ ಮಕ್ಕಳಿಗೆ ದಾನಿಗಳಿಂದ ಸಹಾಯ ಪಡೆದು ನೋಟ್ ಬುಕ್ ಗಳನ್ನು ಉಚಿತವಾಗಿ ನೀಡುತ್ತಿರುವ ನಿಮ್ಮ ಕಾರ್ಯ ಶ್ಲಾಘನೀಯವಾದುದ್ದು ನಿಮ್ಮ ಸಂಘದವರು ಹೊಸತನವನ್ನು ಪ್ರಾರಂಭಿಸಿದ್ದಿರ ಅದು ನಿರಂತರವಾಗಿ ನೆಡಯಲಿ ಆರ್ಥಿಕವಾಗಿ ನೀವು ಸಬಲರಾಗಿ ನಿಮ್ಮ ಸಂಘದ ಜೋತೆಯಲ್ಲಿ ಸದಾಕಾಲವೂ ನಾನಿರುವೆ ಎಂದು ಪತ್ರಕರ್ತರಿಗೆ ಅಭಯ ನೀಡಿದರು .
ಕಾರ್ಯಕ್ರಮದಲ್ಲಿ ಶಾಸಕರನ್ನೂದ್ದೇಶಿಸಿ ಮಾತನಾಡಿದ ಕರ್ನಾಟಕ ಪತ್ರಕರ್ತರ ಸಂಘದ ಹನೂರು ತಾಲ್ಲೂಕು ಘಟಕ ದ ಅಧ್ಯಕ್ಷರಾದ ಬಂಗಾರಪ್ಪ ಸಿ ನಮ್ಮ ಸಂಘದ ಪ್ರಾರಂಭದಿಂದಲೂ ನಮಗೆ ಒಂದಿಲ್ಲೊಂದು ರೀತಿಯಲ್ಲಿ ಹುರಿದುಂಬಿಸಿ ಪ್ರೋತ್ಸಾಹ ನೀಡುತ್ತಿರುವ ಶಾಸಕರ ಕಾರ್ಯವು ಶ್ಲಾಘನೀಯವಾದುದ್ದು ನಮ್ಮಲ್ಲಿರುವ ಪತ್ರಕರ್ತರು ವೃತ್ತಿಯಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸ್ವಂತ ಕೆಲಸ ಮಾಡುತ್ತಿದ್ದು , ಪತ್ರಿಕ ವೃತ್ತಿಯನ್ನು ಪ್ರವೃತ್ತಿಯನ್ನಾಗಿ ಮಾಡುತ್ತಿದ್ದಾರೆ ನಮ್ಮ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಗಣ್ಯರಿಗೂ ನಮ್ಮ ಸಂಘದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಅಕ್ಕನವರು ನೆರೆದಿದ್ದ ಎಲ್ಲಾರಿಗೂ ರಕ್ಷಾ ಬಂಧನ ಹಬ್ಬದ ಕುರಿತು ಹಿತವಚನ ನೀಡಿದರು . ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆಕಾರ್ಯವನ್ನು ಗಣ್ಯ ವ್ಯಕ್ತಿಗಳಿಂದ ಮಾಡಿಸಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಪರಿಮಳನಾಗಪ್ಪ ,ಬಿಜೆಪಿ ಮುಖಂಡರಾದ ದತ್ತೇಶ್ ಕುಮಾರ್ ,ಉದ್ಯಮಿಗಳಾದ ಜಿ ನಾಗೇಶ್ ,ರಂಗಸ್ವಾಮಿ ಪೊನ್ನಾಚಿ ,ನಾಗೇಂದ್ರ ,ರೈತ ಸಂಘದ ಮುಖಂಡರುಗಳು ಹಾಜರಿದ್ದರು . ಸಂಘದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಸತೀಶ್ ಕುಮಾರ್ ,ಕಾರ್ಯದರ್ಶಿ ಬಸವರಾಜು ,ಸಂಘಟನ ಕಾರ್ಯದರ್ಶಿ ,ಶಾರುಖ್ ಖಾನ್ ,ಖಜಾಂಚಿ ,ಚೇತನ್ ಕುಮಾರ್ , ನಿರ್ದೇಶಕರು ಹಾಗೂ ಸದ್ಯರುಗಳಾದ ನಾಗೇಂದ್ರ ಎನ್ ,ರವಿ ಗೌಡ ,ಪ್ರಸನ್ನ ಕುಮಾರ್ ,ಅಜೀತ್ , ವಿಲಿಯಂ ,ರವಿಕುಮಾರ್ ಇನ್ನಿತರರು ಹಾಜರಿದ್ದರು