Donors’ cooperation is necessary in the development of government schools: Dr|| Amaresh Patil

ಗಂಗಾವತಿ: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಆದರೂ ಅವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ದೊರೆಯಲಿ ಎಂಬ ಉದ್ದೇಶದಿಂದ ತಮಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಾರೆ. ಸರಕಾರದ ಜೊತೆಗೆ ನಾವೂ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಜವಾಬ್ದಾರಿ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಅಷ್ಟೇ ಇರುತ್ತದೆ ಎಂದು ಗಂಗಾವತಿಯ ಖ್ಯಾತ ಮಕ್ಕಳ ತಜ್ಞರು ಹಾಗೂ ಐಎಪಿ ವಿಜಯನಗರ ಶಾಖೆಯ ಅಧ್ಯಕ್ಷರಾದ ಡಾ|| ಅಮರೇಶ್ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗಾವತಿಯ ಸ.ಹಿ.ಪ್ರಾ. ಶಾಲೆ ವಿರುಪಾಪುರ ತಾಂಡಾದಲ್ಲಿ ಆಯೋಜಿಸಿದ್ದ ದಾನಿಗಳಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗೆ ಎಲ್.ಇ.ಡಿ ಟಿ.ವಿ ದೇಣಿಗೆ ನೀಡಿ ಮಾತನಾಡಿದರು. ಸರಕಾರ ಕೊಡುವ ಬಿಸಿ ಊಟ, ಹಾಲು, ಮೊಟ್ಟೆ, ಪಠ್ಯಪುಸ್ತಕ, ಸಮವಸ್ತçಗಳ ಜೊತೆಗೆ ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಪರಿಣಾಮಕಾರಿಯಾದ ಶಿಕ್ಷಣ ಸಿಗಲಿ ಎಂಬ ಸದುದ್ದೇಶದಿಂದ ಶ್ರೀಮತಿ ಶ್ರೀದೇವಿಯವರು ಎಲ್.ಇ.ಡಿ ಟಿವಿಯ ಅವಶ್ಯಕತೆ ನಮ್ಮ ಶಾಲೆಗೆ ಇದೆ ಎನ್ನುವ ವಿಷಯ ಪ್ರಸ್ತಾಪಿಸಿದಾಗ ನಾನು ಅತ್ಯಂತ ಸಂತೋಷದಿAದ ಎಲ್.ಇ.ಡಿ ಟಿವಿಯನ್ನು ನೀಡಲು ಒಪ್ಪಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳುತ್ತಾ ಬನ್ನಿ ಸರ್ಕಾರಿ ಶಾಲೆಗಳನ್ನು ಉಳಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗಂಗಾವತಿಯ ಸಿಎಂಎಸ್ ಎಂಟರ್‌ಪ್ರೆöÊಸಸ್‌ನ ಮಾಲಿಕರಾದ ಶ್ರೀ ಅಮಿತ್‌ಕುಮಾರ್, ಚಂದ್ರಶೇಖರ ಬಲಕುಂದಿ ಅವರು ಶಾಲಾ ದಾಖಲಾತಿಗಳ ಸಂರಕ್ಷಣೆಯ ಉದ್ದೇಶದಿಂದ ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಅಲ್ಮಾರವನ್ನು ಹಾಗೂ ವಿರುಪಾಪುರ ತಾಂಡಾದ ಗುತ್ತಿಗೆದಾರರಾದ ಶ್ರೀ ವೆಂಕಟೇಶ್ ನಾಯಕ್ ಮಾತಾಳೋ ಇವರು ಐದು ಸಾವಿರ ರೂಪಾಯಿ ಬೆಲೆಬಾಳುವ ಡಯಾಸ್ ಅನ್ನು ದೇಣಿಗೆ ನೀಡಿದ್ದರಿಂದ, ಈ ಮೂವರು ದಾನಿಗಳಿಗೆ ಶಾಲೆಯವತಿಯಿಂದ ಗೌರವ ಸಮರ್ಪಣೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಮುಖ್ಯೋಪಾಧ್ಯಾಯರು ಸ.ಕಿ.ಪ್ರಾ ಶಾಲೆ ವಿರುಪಾಪುರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರವ ಸಮರ್ಪಣೆಯ ನಂತರ ಮುಖ್ಯೋಪಾಧ್ಯಾಯರಾದ ರಾಮಣ್ಣ ಅವರು ಸರಕಾರದ ಜೊತೆಗೆ ಇಂತಹ ದಾನಿಗಳು ಕೈ ಜೋಡಿಸಿದಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ನಿಮ್ಮ ಸಹಾಯ ಸಹಕಾರ ಸದಾ ನಮ್ಮೊಂದಿಗೆ ಇರಲಿ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಸಹ ಶಿಕ್ಷಕಿಯಾದ ಜಿ. ಶ್ರೀದೇವಿ ಕೃಷ್ಣಪ್ಪ ಅವರು “ಪ್ರಾರ್ಥಿಸುವ ತುಟಿಗಳಿಗಿಂತ ದಾನ ನೀಡುವ ಕೈ ದೊಡ್ಡದು” ಎಂಬAತೆ ಶಾಲೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಪ್ರಸ್ತಾಪ ಮಾಡಿದ ತಕ್ಷಣ ದೇಣಿಗೆ ನೀಡಲು ಒಪ್ಪಿಕೊಂಡ ಮೂವರು ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದುರುಗಪ್ಪ, ಶಿಕ್ಷಣ ಪ್ರೇಮಿಗಳು, ಸಹ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.