Bhairavan Jogi Diksha and Jogappara Samavesha may benefit the devotees: Sri Dr. Nirmalanandanath Swamiji.

ವರದಿ ; ಬಂಗಾರಪ್ಪ .ಸಿ . ಹನೂರು .
ಮಂಡ್ಯ :ಭೈರವಾಷ್ಠಮಿಯ ದಿನದಿಂದ ಹಲವಾರು ಜೋಗಿಗಳು ಜೋಗಿ ದೀಕ್ಷೆಯನ್ನು ಪಡೆದಿರುವುದು ಸಂತೋಷದ ವಿಷಯವೆಂದು ಶ್ರೀ ಆದಿಚುಂಚನಗಿರಿಯ ಮಹಾಸಂಸ್ಥಾನ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾ ಮಂಟಪದಲ್ಲಿ ಆಯೋಜಿಸಿದ ಶ್ರೀ ಕಾಲಭೈರವೇಶ್ವರವಾಷ್ಠಮಿ ಪ್ರಯುಕ್ತ ಜೋಗಿ ದೀಕ್ಷೆ ಮತ್ತು ಜೋಗಪ್ಪರ ಸಮಾವೇಶದಲ್ಲಿ ಮಾತನಾಡಿದ ಪೂಜ್ಯರು ಶ್ರೀ ಮತಿ
ನಂದಿನಿಯವರು ನಮ್ಮ ದೇಶದ ಅತ್ಯುನ್ನತ್ತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ನಂದಿನಿಯವರು ನಮ್ಮ ಮಠದ ಸದ್ಭಕ್ತರು ಮಾದರಿಯಾಗಿರುತ್ತಾರೆ ,
ಶ್ರೀ ಮಠಕ್ಕೆ ಬಂದ ಭೈರವ ದೀಕ್ಷಿತರು ಕುಟುಂಬದ ಸಂತೋಷದೊಳಗಿನ ಜಂಜಾಟದಲ್ಲಿ ನಾವು ದೈವ ಭಕ್ತರಾಗಿ ಸಮಾಜ ಸೇವೆಯನ್ನು ಮಾಡಬೇಕು , ಮನುಷ್ಯನ ಆದ್ಯಾಂತಕ ಸ್ಥಿತಿಯ ನಂತರ ನಾವು ಕಲ್ಲಿನ ಹಂತಕ್ಕೆ ಹೋಗಬಾರದು ಎತ್ತರಕ್ಕೆ ಹೋಗಲು ನಾವು ಜಗತ್ತಿನಲ್ಲಿ ಬದಲಾವಣೆಯ ಸ್ಥೀತಿ ಯಾಗಿರುತ್ತದೆ , ಈ ಚಕ್ರದಿಂದ ತುಂಭ ಮೆಲಕ್ಕೆರುವ ಮನೋಭಾವ ಮತ್ತು ದೈವಿಸ್ವರೂಪದ ಗುಣಗಳನ್ನು ಬೆಳೆಸಿಕೊಂಡು ಹೋಗಬೇಕು , ಬೆಟ್ಟದ ತುದಿಯಲ್ಲಿರುವ ಕಲ್ಲು ತಾನು ಪ್ರತಾಪಕ್ಕೆ ಬಿದ್ದರೆ ಎಲ್ಲಾರಿಗೂ ನೋಡುವ ಪರಿಣಾಮ ವಾಗುತ್ತದೆ ಅದಕ್ಕೆ ಅವಕಾಶ ಮಾಡಿಕೊಡಬಾರದು , ನಾವುಗಳು ಕಾಲದವಸದಲ್ಲಿದ್ದೆವೆ ಆದರೆ ಭೈರವನ ಕಾಲವಸದಲ್ಲಿ ಕಾಲವಿದೆ ,
ಸಾವಿರದೆಂಟನೂರು ವರ್ಷಗಳ ಹಿಂದಿನಿಂದ ಮಠದಲ್ಲಿ ನಾವು ಕಾಲಭೈರಶ್ವರನ ಆರಾದಕರಾದ ನಮ್ಮ ಗುರುಗಳೆ ಕಾರಣವಾಗಿದೆ ,ಇಂದು ಒಂದು ಲಕ್ಷದ ಐವತ್ತು ಸಾವಿರ ವಿದ್ಯಾರ್ಥಿಗಳಿದ್ದಾರೆ .ನನ್ನ ಬದ್ದತೆ ಗಳನ್ನು ಬಿಟ್ಟಾಗ ನಮಗೆ ಕಾಲಭೈರವನ ಕೃಪೆ ಬಹಳ ಮುಖ್ಯ , ಇತ್ತಿಚಿಗೆ ನಮ್ಮ ಮಠವು ರೈತರ ಮಠವಾಗಿದೆ ,ನಮ್ಮದು ವ್ಯವಸಾಯದ ಪರಂಪರೆಯನ್ನು ಮುಂದುವರಿಸಿಬೇಕು ಅರ್ಚಕರು ಹೆಚ್ಚಿನ ಪ್ರಮಾಣದಲ್ಲಿ ತರಬೇತಿ ಪಡೆದು ಅರ್ಚನೆ ಮಾಡಬೇಕು ,ರಾಜ್ಯದಲ್ಲಿ ಪ್ರಥಮವಾಗಿ
ನಮ್ಮಲ್ಲಿ ಅಗ್ರಿಕಲ್ಚರ್ ಸೈನ್ಸ್ ನಲ್ಲಿ ತರಬೇತಿಗೆ ಸೇರಿಸಲು ಅವಕಾಸವಿದೆ , ಎಲ್ಲಾ ಜೋಗಿಗಳು ದೇವರ ಕೃಪೆಗೆ ಪಾತ್ರರಾಗಬೇಕಾಗಿದೆ ,ಭಕ್ತರಿಗೆ ಎದೆಯಲ್ಲಿ ಭಕ್ತಿಯನ್ನು ನೀಡಲಿ ಎಂದರು .
ಶ್ರೀ ಮಠದ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳು ಮಾತನಾಡಿ ಇಂದು ಕಾಲಭೈರವಾಷ್ಟಮಿ ಇದೊಂದು ಪವಿತ್ರ ದಿನವಾಗಿದೆ ,ಭಗವಂತನಿಗೂ ಮಾನವರಿಗೂ ಮದ್ಯದಲ್ಲಿರುವವರು ಅರ್ಚಕರು ನಿಮ್ಮದು ಪವಿತ್ರವಾದ ಭಾಗ್ಯವಂತರು ,ನಮ್ಮ ನೇಲದಲ್ಲಿ ಕಾಳಿಕ ಮಾತೆಯನ್ನು ಯಥಾವತ್ತಾಗಿ ದರ್ಶನ ಮಾಡಿದ ರಾಮಕೃಷ್ಣ ಪರಂಸರು ಸಹ ಅರ್ಚಕ ವೃತ್ತಿಯನ್ನು ಮಾಡಿದವರು , ಯಾವ ಅರ್ಚಕ ನೀತಿ ನಿಯಮದಿಂದ ನಿಷ್ಟೆಯಿಂದ ದೇವರನ್ನು ಪೂಜಿಸಿದರೆ ಭಗವಂತ ನಮ್ಮ ಮುಂದೆಯೆ ಪ್ರಕಟಗೊಳ್ಳುತ್ತಾನೆ ಇದು ಸತ್ಯವಾಗಿರುತ್ತದೆ ನಮ್ಮ ಪೂಜ್ಯರಾದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳು ಅವರ ಶ್ರಮದಿಂದ ಜೋಗಿ ಸಂಪ್ರದಾಯವನ್ನು ಮೂಬತೈದು ವರ್ಷದಿಂದ ನಡಿಸಿಕೊಂಡು ಬರುತ್ತಿದ್ದಾರೆ .ನಾವು ಮುಂದುವರೆಸುಕೊಂಡು ಹೋಗೋಣ ,ಹಿಂದಿನ ಕಾಲದಲ್ಲಿ ಜೋಗಿಗಳು ,ಸುಭೆದಾರರು,ಚೂಡಿದಾರರು ಎಂದು ಕರೆಯುತ್ತಿದ್ದರು, ಒಂದು ಕಡೆ ಅರ್ಚಕರು ಭಗವಂತನ ಸೇವೆ ಮಾಡಲು ತಯಾರಿದ್ದಾರೆ . ಇನ್ನೂಂದು ಕಡೆ ಜೋಗಪ್ಪಗಳು ಭಕ್ತರ ಮನೆಮನೆಗೆ ಹೋಗಿ ಭೈರವನ ಸೇವೆ ಮಾಡಿ ಪ್ರತಿ ಹಳ್ಳಿಗಳಲ್ಲಿ ಅವರಿಗೆ ನೀಡಿದ ಬಂದಂತಹ ದಾನ್ಯಗಳನ್ನು ಶ್ರೀ ಮಠಕ್ಕೆ ನೀಡುತ್ತಿದ್ದಾರೆ . ಜೋಗಪ್ಪನ ಮನೆತನದವರು ಭಿಕ್ಷೆ ಬೇಡಿ ಭೈರವ ಸೇವೆಮಾಡುತ್ತಿರುವುದು ಸಂತೋಷದ ವಿಷಯ ನಿಮಗೆ ಮುಂದಿನ ದಿನಗಳಲ್ಲಿ ನಿಮ್ಮ ಸೇವೆ ನಮ್ಮ ಮಠಕ್ಕಿರಲಿ ಎಂದು ತಿಳಿಸಿದರು .
ಇದೇ ಸಮಯದಲ್ಲಿ ಶ್ರೀ ಮಠದ ಕಾರ್ಯದರ್ಶಿಗಳಾದ ಪ್ರಸನ್ನ ನಾಥ ಸ್ವಾಮೀಜಿಗಳು . ಬೆಂಗಳೂರಿನ ಶಾಖಾ ಮಠದ ಸೋಮನಾಥ ಸ್ವಾಮೀಜಿಗಳು ಹಾಗೂ ಎಲ್ಲಾ ಶಾಖಾ ಮಠದ ಪೂಜ್ಯರು . ಸದ್ಭಕ್ತರು , ಐಎ ಎಸ್ ಅಧಿಕಾರಿಗಳಾದ ಶ್ರೀ ಮತಿ ನಂದಿನಿ . ಜೋಗಿಗಳು ,ಹಾಗೂ ಅರ್ಚಕ ತರಬೇತಿಯ ಶಿಬಿರಾರ್ತಿಗಳು ,
ಇನ್ನಿತರರು ಹಾಜರಿದ್ದರು .