Raitha Morcha protests against the state Congress government for ignoring the interest of farmers
ಕೊಪ್ಪಳ-07:ಬಿಜೆಪಿಯ ಜಿಲ್ಲಾ ರೈತ ಮೋರ್ಚಾ ಘಟಕದ ಪರವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಸಾಂಕೇತಿಕ ಶಾಂತಿಯುತ ಪ್ರತಿಭಟನೆಯನ್ನು ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರಿಗೆ ಕೊಡ ಮಾಡುತ್ತಿದ್ದ ನಾಲ್ಕು ಸಾವಿರ ಹಣ ನಿಲ್ಲಿಸಿದ್ದು ಹಾಗೂ ರೈತರ ಕೈಗೆ ಎಟಕದಂತೆ ಅದರಲ್ಲೂ ಪ್ರಮುಖವಾಗಿ ಸಣ್ಣ ರೈತರಿಗೆ ಬಾರಿ ಬೆಲೆ ತೇತುವಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸಿರುವ ಬಿಸಿಗೆ ಜನರು ತತ್ತರಿಸಿ ಹೋಗಿದ್ದಾರೆ ರೈತರಿಗೆ ಸಹಾಯ ಮಾಡುವ ನೆಪದಲ್ಲಿ ದಲ್ಲಾಲಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ಇವರ ಕ್ರಮಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ ಜಿಲ್ಲಾ ಪ್ರಮುಖ ಮಹಿಳಾ ಮುಖಂಡರಾದ ಶ್ರೀಮತಿ ಮಂಜುಳಾ ಅಮರೇಶ ಕರಡಿˌಗೀತಾ ಪಾಟೀಲˌಮಹಾಲಕ್ಷ್ಮೀ ಕಂದಾರಿˌಗಣೇಶ ಹೊರತಟ್ನಾಳˌಮಹೇಶ ಮಂಗಳೂರು ಅಗಳಕೇರಿˌಪ್ರದೀಪ ಹಿಟ್ನಾಳˌ ಮಾರ್ಕಂಡೆಪ್ಪ ಬೇವಿನಹಳ್ಳಿˌರವಿ ಓಜನಹಳ್ಳಿˌಸುನೀಲ ಹೆಸರೂರˌರವಿಚಂದ್ರ ಮಾಲಿಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಕೊಪ್ಪಳ ತಹಸಿಲ್ದಾರ ವಿಠಲ್ ಚೌಗಲೆ ಇವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು.