Bhima Koregaon Victory Program Celebration

ಗಂಗಾವತಿ : ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಹಾಗೂ ರೈತ ಸಂಘ ದಲಿತ ಅಲ್ಪಸಂಖ್ಯಾತರ ಒಕ್ಕೂಟದದಿಂದ ಗಂಗಾವತಿ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಭೀಮ ಕೋರೆಗಾಂವ್ ಸ್ಥಂಭದ ಭಾವಚಿತ್ರಕ್ಕೆ, ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಶರಣೆಗೌಡ ಕೆಸರಟ್ಟಿ ರೈತ ಸಂಘದ ರಾಜ್ಯಾಧ್ಯಕ್ಷ ಮಾತನಾಡಿ
ಜನವರಿ 1, ಜಗತ್ತಿಗೆ ಹೊಸ ವರ್ಷದ • ಸಂಭ್ರಮಾಚಾರಣೆಯಾದರೆ ಶೋಷಿತರ ಪಾಲಿಗೆ ಇದು ಅಸ್ಪೃಶ್ಯತೆಯ ಈ ವಿರುದ್ಧ ಬಂಡೆದ್ದು ವಿಜಯ ಸಾಧಿಸಿದ – ಮಹಾರ್ ಯೋಧರ ಶೌರ್ಯದ ಸಂಕೇತ ಮೆರೆದ ವಿಜಯೋತ್ಸವ ದಿನ ಇದು ಹಾಗಿದೆ
ಡಾ ಬಾಬಾ ಸಾಹೇಬ್ ಅಂಬೇಡ್ಕರ್ – ರವರ ಬದುಕಿನಲ್ಲಿ ಮುಖ್ಯ ಪ್ರೇರಣೆ > ನೀಡಿದ ಈ ದಿನವು ನಮ್ಮೆಲ್ಲರ ಪಾಲಿಗೆ > ವಿಜಯೋತ್ಸವದ ದಿನವಾಗಿದೆ. ಕ್ರಿಶ. 1800 ರ ಸಂದರ್ಭದಲ್ಲಿ ಮಹರಾಷ್ಟ್ರ ದಲ್ಲಿ ಆಡಳಿತ ನಡೆಸುತ್ತಿದ್ದ ಪೇಶ್ವಗಳು ಮನು ಸಂವಿಧಾನವನ್ನು ಜಾರಿಗೆ ತರುವ ಮೂಲಕ ಅಸ್ಪೃಶ್ಯರ ಜೀವನವನ್ನು ಕಠೋರವಾಗಿಸಿದ್ದರು. ಸಾರ್ವಜನಿಕ ಕೆರೆಗಳನ್ನು ಬಳಸದಂತೆ • ನಿರ್ಬಂಧ ಹೇರಲಾಗಿತ್ತು.ತಮ್ಮ ಮೇಲೆ ಈ ರೀತಿಯ ಅಮಾನುಷ ಕೃತ್ಯಗಳನ್ನು ನಡೆಸುತ್ತಿದ್ದ ಪೇಶ್ವಗಳ ದೌರ್ಜನ್ಯ ದಬ್ಬಾಳಿಕೆಯಿಂದ ರೋಸಿ ಹೋಗಿದ್ದ ಅಸ್ಪೃಶ್ಯರು ತಮ್ಮ ಜನಾಂಗದ ಮುಕ್ತಿಗಾಗಿ ಈ ಯುದ್ಧವನ್ನು ಮಾಡಬೇಕಾದ ಪ್ರಸಂಗದಿಂದ ಪೇಶ್ವೆಗಳ ವಿರುದ್ಧ 500 ಮಹರ್ ಸೈನಿಕರು ಸೇರಿಕೊಂಡು 28000 ಪೇಶ್ವೆಗಳ ಸೈನಿಕರನ್ನು ಹೊಡೆದು ಉಳಿಸಿದಂತಹ ಈ ಮಹರ್ ಸೈನಿಕರು 01.01.1818 ರಂದು ವಿಜಯವನ್ನು ಸಾಧಿಸಿದಂತಹ ದಿನವಾಗಿದೆ. ಆ ಯುದ್ಧ ಮುಗಿದ ನಂತರ ಕೊರೆಗಾವ್ ಗ್ರಾಮಕ್ಕೆ ಬಂದು ಯುದ್ಧದಲ್ಲಿ ಮರಣ ಹೊಂದಿದಂತಹ ಮಹರ್ ಸೈನಿಕರ ಧ್ವಜಸ್ತಂಭವನ್ನು ಹಾಕಿ ವಿಜಯೋತ್ಸವವನ್ನು ಆಚರಣೆ ಮಾಡಿದ ದಿನ ಇದಾಗಿದೆ ಎಂದರು
ನಂತರ ಶಂಕರ್ ಸಿದ್ದಾಪುರ ವಕೀಲರ ಮಾತನಾಡಿ ಹೊಸ ವರ್ಷ ಆಚರಣೆ ಮತ್ತು ಭೀಮ ಕೊರೆಗಾವ್ ನಮ್ಮ ಮಹರ್ ಸೈನಿಕರ ನೆನಪು ಮಾಡಿಕೊಳ್ಳುವುದರ ಜೊತೆಗೆ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರು ಲಕ್ಷ್ಮಿ ನಾರಾಯಣ್ ನಾಗವರ್ ಇವರು ನಮ್ಮನ್ನೆಲ್ಲ ಬಿಟ್ಟು ಹಗಲಿದ್ದಾರೆ ಅವರಿಗೆ ಕೂಡ ನಮ್ಮ ಮಹಾರ್ ಸೈನಿಕರ ಜೊತೆಗೆ ಅವರಿಗೂ ಕೂಡ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ನಂತರದ ದಿನಮಾನಗಳಲ್ಲಿ ಭೀಮ ಕೊರೆಗಾವ್ ಯುದ್ಧ ನಡೆಯಬೇಕಾದರೆ ಪೇಶ್ವೆಗಳ ಕೊಳಕು ಮನಸ್ಥಿತಿಗಳಿಂದ ನಮ್ಮ ಮಹಾರ್ ಸೈನಿಕರ ಅಸ್ಪೃಶ್ಯತೆ ದಬ್ಬಾಳಿಕೆ ಒಳಗಾಗುವುದರಿಂದ ಈ ಯುದ್ಧ ನಡೆಯಲು ಕಾರಣ ಮತ್ತು ಯುದ್ಧವು ಅಸ್ಪೃಶ್ಯರ ಸ್ವಾಭಿಮಾನದ ಸಂಕೇತವಾಗಿದೆ ಈ ಘಟನೆಯು ನಮ್ಮೆಲ್ಲರಿಗೂ ಆತ್ಮಗೌರವನ್ನು ಎತ್ತಿ ಹಿಡಿಯುವ ದಿನವಾಗಿದೆ. ಇಂತಹ ಸ್ವಾಭಿಮಾನದ, ಆತ್ಮಗೌರವದ ದಿನವನ್ನು ಶೋಷಿತ ಸಮುದಾಯದವರು ನೆನಪಿಸಿಕೊಂಡು ಅಮರ ವೀರರ ಕೆಚ್ಚೆದೆಯ ಸ್ವಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ತ್ಯಾಗ ಬಲಿದಾನದಿಂದ ಮನು ಸಂವಿದಾನಕ್ಕೆ ಪೆಟ್ಟುಬಿದ್ದು ಅಸ್ಪೃಶ್ಯರಿಗೆ ವಿದ್ಯಾಭ್ಯಾಸ ನೀಡಲು, ಸೈನ್ಯಕ್ಕೆ ಸೇರಲು, ಸಾಮಾಜಿಕವಾಗಿ ಅಲ್ಪ ಪ್ರಮಾಣದಲ್ಲಿ ನಾಗರೀಕ ಬದುಕು ಕಾಣಲು ಸಾಧ್ಯವಾಗಿದೆ.
ಅಂದು ಅಸ್ಪೃಶ್ಯರು ಬ್ರಿಟೀಷರ ಪರ ವಾಗಿ ಯುದ್ಧ ಮಾಡಿದ್ದು ಅಭಿಮಾನ ಪಡುವ ಸಂಗತಿಯಲ್ಲದಿದ್ದರೂ ಜನಾಂಗಕ್ಕೆ ತಮ್ಮ ಮಕ್ಕಳು ಮುಂದಿನ ಭವಿಷ್ಯ, ಹೊಟ್ಟೆಗೆ ಅನ್ನ ದೊರಕಿಸಿಕೊ ಳ್ಳುವ ಸ್ವಾಭಿಮಾನದಿಂದ ಬದುಕುವ ಉದ್ದೇಶಕ್ಕೆ ತಮ್ಮ ಅಮೂಲ್ಯ ಜೀವವನ್ನು ಅರ್ಪಣೆ ಮಾಡಿದ ನಮ್ಮಹುತಾತ್ಮರಾದ ಯೋಧರಿಗೆ ನಾವೆಲ್ಲ ಗೌರವಿಸಬೇಕಾಗಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾದಿಗ ಸಮಾಜದ ಜಿಲ್ಲಾ ಮುಖಂಡರಾದ ಗಂಗಣ್ಣ ಸಿದ್ದಾಪುರ ಹೊನ್ನೂರ ಸಿದ್ದಾಪುರ ಅಯ್ಯಣ್ಣ ಮೈಲಾಪುರ್ ಪರುಶುರಾಮ ಮಹಾದೇವ ಕಾಟಾಪುರ ಶರಣಪ್ಪ ಸಿದ್ದಾಪುರ ಮೂರ್ತಿ ಸಂಗಾಪುರ ಹುಲ್ಲಿಗೇಶ ಕಾಟಾಪುರ ಸೇರಿದಂತೆ ಇತರರು ಯುವಕರು ಭಾಗವಹಿಸಿದ್ದರು