Breaking News

ಬೀದಿನಾಯಿಗಳಿಗೆ ಆಂಟಿ ರೆಬೀಸ್ ಚುಚ್ಚುಮದ್ದು:ಗಂಗಾಧರ

Anti-rabies vaccination for stray dogs: Gangadhar

ಜಾಹೀರಾತು

ಮಾನ್ವಿ: ಪಟ್ಟಣದಲ್ಲಿ ಪುರಸಭೆ ಹಾಗೂ ಪಶುಚಿಕಿತ್ಸಾಲಯ ವತಿಯಿಂದ ಬೀದಿನಾಯಿಗಳಿಗೆ ಆಂಟಿ ರೆಬೀಸ್ ಚುಚ್ಚುಮದ್ದು ನೀಡಲಾಯಿತು. ಸಿಂಧನೂರಿನ ನಾಯಿ ಹಿಡಿಯುವ ತಂಡದವರು ಇಂದು ಬೆಳಿಗ್ಗೆ ಯಿಂದಲೇ ರಾಯಚೂರು ಸಿಂಧನೂರು ಮುಖ್ಯರಸ್ತೆಯಲ್ಲಿನ ಬೀದಿಗಳಲ್ಲಿ ಕಾರ್ಯಚಾರಣೆ ನಡೆಸಿ ನೂರಾರು ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚುಮದ್ದು ನೀಡಿ ಪಟ್ಟಣದ ಹೋರವಲಯದಲ್ಲಿ ಬೀಡಲಾಯಿತು.
ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ವಿಪರಿತವಾಗಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಾಯಿಗಳಿಗೆ ಮಾರಕ ರೋಗಗಳು ಬರದಂತೆ ಪಶು ಇಲಾಖೆಯವರು ಅಗತ್ಯವಾದ ಲಸಿಕೆಗಳನ್ನು ನೀಡಿ ಸುರಕ್ಷಿತ ಪ್ರದೇಶಗಳಿಗೆ ನಾಯಿಗಳನ್ನು ಬಿಡಲಾಯಿತು.
ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಅರೋಗ್ಯ ನಿರೀಕ್ಷಕರಾದ ಮಹೇಶ್ , ಪಶು ಚಿಕಿತ್ಸಾಲಯದ ತಾ.ಸಹಾಯಕ ನಿರ್ದೇಶಕರಾದ ರಾಜು ಕಂಬ್ಳೆ ,ಪುರಸಭೆ ಸಿಬ್ಬಂದಿ, ಪಶು ಇಲಾಖೆಯ ಸಿಬ್ಬಂದಿಗಳು ಇದ್ದರು.

About Mallikarjun

Check Also

ಲಯನ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಅಂತ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

National Democracy Day celebration in the premises of Lions Educational Institution ಗಂಗಾವತಿ: ವಿಕಲಚೇತನರ ಹಾಗೂ ಹಿರಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.