Breaking News

ರಂಜಾನ್ ಇಫ್ತಾರ್‌ ಕೂಟ, ಹಿಂದೂ,,!ಮುಸ್ಲಿಂ  ಭಾವೈಕ್ಯತೆಗೆ ಸಾಕ್ಷಿ ..!

Ramadan Iftar gathering, a testament to Hindu, Muslim unity..!

ಜಾಹೀರಾತು

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕಿನ್ನಾಳ : ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಪವಿತ್ರ ರಂಜಾನ್‌ ಮಾಸದ ನಿಮಿತ್ಯ ಮುಸ್ಲಿಂ ಸಮುದಾಯದವರು (ರೋಜಾ) ಉಪವಾಸ ಇದ್ದು ಧಾರ್ಮಿಕ ಆಚರಣೆ ಮಾಡುತ್ತಾರೆ.

ರೋಜಾ ಇರುವ ಮುಸ್ಲಿಂ ಭಾಂದವರಿಗೆ ಮಸೀದಿಯಲ್ಲಿ ಹಿಂದೂ ಸಮುದಾಯದಿಂದ ಇಫ್ತಾರ್‌ ಕೂಟ ಆಯೋಜಿಸಲಾಯಿತು. ಮುಸ್ಲಿಂ ಧರ್ಮದ ಪವಿತ್ರ ಹಬ್ಬ ರಂಜಾನ್. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ದಿನವಿಡಿ ಉಪವಾಸ ಆಚರಿಸುತ್ತಾರೆ. ಸಾಯಂಕಾಲ ಉಪವಾಸ ಮುಕ್ತಾಯದ ನಂತರ ಅವರಿಗೆ ಹಿಂದೂ‌ ಧರ್ಮವರು ಇಫ್ತಾರ್‌ ಕೂಟ ಆಯೋಜನೆ ಮಾಡುವ ಮೂಲಕ ಭಾವೈಕ್ಯತೆ ಮೆರೆದರು.

ಹೌದು, ಇಂತಹದೊಂದು ಧಾರ್ಮಿಕ ಭಾವೈಕ್ಷತೆಯ ಕ್ಷಣಕ್ಕೆ ಕಿನ್ನಾಳ ಸಾಕ್ಷಿಯಾಗಿದೆ. ಜಾಮಿಯಾ ಮಸೀದಿಯಲ್ಲಿ ಆಯೋಜಿಸಲಾದ ಇಫ್ತಾರ ಕೂಟದಲ್ಲಿ ಹಿಂದೂ ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗಿ ಆಚರಣೆ ಮಾಡಿದರು.

ಇಫ್ತಾರ್ ಕೂಟ ಆರಂಭಕ್ಕೂ ಮೊದಲು ಸ್ಥಳೀಯ ಜಾಮಿಯಾ ಮಸ್ಜಿದನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿಗುತ್ತದೆ. ನಂತರ ಹಿಂದೂ ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಇಫ್ತಿಯಾರ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆಯನ್ನ ಮೆರೆದರು.

ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಭಾಂದವರು ರೋಜಾ ನಿಮಿತ್ತ ಉಪವಾಸ ಇದ್ದ ಸಮಯದಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ , ಆಹಾರ ಸೇವನೆ ಮಾಡಿ ಉಪವಾಸ ಬಿಡುತ್ತಾರೆ. ಹೀಗೆ ರೋಜಾ ಆಚರಣೆ ಮಾಡುತ್ತಾರೆ. ಪ್ರಾರ್ಥನೆ ಸಲ್ಲಿಸುತ್ತಾರೆ ಎಂಬುದನ್ನು‌ ಹಿಂದೂ ಸಮುದಾಯವರಿಗೆ ತಿಳಿಯುವ ದೃಷ್ಟಿಯಿಂದ ಹಾಗೂ ಸಾಮೂಹಿಕ ಪ್ರಾರ್ಥನೆ ಮಾಡುವ ಜೊತೆಗೆ ಉಪವಾಸದಿಂದ ಏನೆಲ್ಲಾ ಲಾಭ ಆಗುತ್ತದೆ ಎಂದು ಮುಸ್ಲಿಂ ಸಮುದಾಯ ಧಾರ್ಮಿಕ ಗುರುಗಳಿಂದ ಪ್ರವಚನ ಮಾಡಿದರು.

ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರನ್ನು ಕರೆಯಿಸಿ, ಹಣ್ಣು ಹಂಪಲು, ತಂಪು ಪಾನೀಯ ಜೊತೆಗೆ ಭೋಜನ ವ್ಯವಸ್ಥೆ ಮಾಡಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಮುಸ್ಲಿಮರ ಪವಿತ್ರ ಹಬ್ಬ ರಂಜಾನ ತಿಂಗಳಿನಲ್ಲಿ ಉಪವಾಸ ಇರುವ ಮುಸ್ಲಿಂ ಬಾಂಧವರಿಗೆ ಹಿಂದೂ ಯುವ ಮುಖಂಡರಾದ ಬಸವರಾಜ ಚಿಲವಾಡಗಿ, ಅನಿಲ್ ಕುಮಾರ್ ಬೋರಟ್ಟಿ,  ಗುಡುದಪ್ಪ ಗುಂಡದ, ನಾಗರಾಜ್ ಕಲಾಲ, ಸೇರಿದಂತೆ ಇನ್ನೂ ಹಲವಾರು ಹಿಂದೂ ಬಾಂಧವರು ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟ ಏರ್ಪಡಿಸಿ ಹಿಂದೂ ಮುಸ್ಲಿಂ ಭಾವೈಕ್ಯ ಗ್ರಾಮ ಎಂಬುವ ಸಂದೇಶ ಸಾರಿದ್ದಾರೆ. ಈ ವರ್ಷ ಕಾಮನಕಟ್ಟೆ ಗೆಳೆಯರ ಬಳಗದವರು ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮುಸ್ಲಿಂ ಭಾಂದವರಿಗೆ ಹಣ್ಣಿನ ಜ್ಯೂಸ್, ತಂಪು ಪಾನೀಯ ನೀಡಿ ಬಾವೈಕ್ಯತೆ ಮೆರೆದರು.

ಈ ವೇಳೆ ಮುಖಂಡರಾದ ಮಾಬೂಸಾಬ್ ಹೀರಾಳ್, ಇಮಾಮ್ ಸಾಬ್ ತಟಗಾರ್ ಬಾಷಾ ಹಿರೇಮನಿ ಷರೀಫ್ ಸಾಬ್ ಹೀರಾಳ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಕ್ಸ್,,,
ಜಾಮಿಯಾ ಮಸ್ಜಿದನಲ್ಲಿ  ಒಂದು ತಿಂಗಳ ಕಾಲ ನಡೆಯುವ ಉಪವಾಸ ಹಿನ್ನಲೆ ಪ್ರತಿ ನಿತ್ಯ ರಾತ್ರಿ ಸಾಮೂಹಿಕ ಭೋಜನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಒಬ್ಬರಂತೆ ರೋಜಾ ಉಪವಾಸ ಮಾಡಿರುವವರಿಗೆ ಆಹಾರ ವ್ಯವಸ್ಥೆ ಮಾಡಲಾಗುತ್ತದೆ. ಹಿಂದೂ ಮುಸ್ಲಿಮರು ಸೇರಿಕೊಂಡು ಈ ರೀತಿಯಾಗಿ ಆಚರಣೆ ಮಾಡುವುದರಿಂದ ಭಾವೈಕ್ಯತೆ ಸಾರುತ್ತಿರುವುದರು ಇತರರಿಗೆ ಮಾದರಿಯಾಗಿದೆ.

ಮಾಬುಸಾಬ ಹೀರಾಳ.ಜಾಮಿಯಾ ಮಸ್ಜಿದ ಅಧ್ಯಕ್ಷರು. ಕಿನ್ನಾಳ

About Mallikarjun

Check Also

ಶಾಸಕ ಕೆ ಷಡಕ್ಷರಿ ಅವರಿಂದ ಕಾರ್ಮಿಕರಿಗೆ ಕಿಟ್ ವಿತರಣೆ

MLA K Shadakshari distributes kits to workers ತಿಪಟೂರು.ಇಂದು ಕಾರ್ಮಿಕ ಇಲಾಖೆ, ಹಾಗೂ ದೇವರಾಜು ಅರಸು ನಿಗಮದ ವತಿಯಿಂದ …

Leave a Reply

Your email address will not be published. Required fields are marked *