Inspection of Koram – Koracha Jayanti celebrations; Chief Minister Siddaramaiah
ಬೆಂಗಳೂರು, ಜು, 29; ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಘೋಷಣೆಯಾದ ಕೊರಮ–ಕೊರಚ ಸಮುದಾಯದ ಅಭಿವೃದ್ಧಿ ನಿಗವನ್ನು ಆದಷ್ಟು ಬೇಗ ಅಸ್ಥಿತ್ವಕ್ಕೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಪಿಸಿಸಿ ಸಂಯೋಜಕರಾದ ಜಿ. ಪಲ್ಲವಿ ಮತ್ತು ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಶಿವಾನಂದ ಎಂ. ಭಜಂತ್ರಿ ನೇತೃತ್ವದ ನಿಯೋಗದ ಮನವಿ ಸ್ವೀಕರಿಸಿ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ.
ಶರಣ ಕುಳುವ ನುಲಿಯ ಚಂದಯ್ಯ ಜಯಂತಿಯನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಆಚರಿಸುವಂತೆ ತಿದ್ದುಪಡಿ ಆದೇಶ ಹೊರಡಿಸುವ ಮತ್ತು ಕುಳುವ ನುಲಿಯಚಂದಯ್ಯ ಭವನ ನಿರ್ಮಾಣಕ್ಕೆ ಬೆಂಗಳೂರು ನಗರದಲ್ಲಿ ನಿವೇಶನ ಮಂಜೂರಾತಿ, ಶಹನಾಯಿ ಮಾಂತ್ರಿಕ ಸನಾದಿ ಅಪ್ಪಣ್ಣ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಬೀಳಗಿಯಲ್ಲಿ ಅವರ ಸಮಾಧಿಯನ್ನು ಅಭಿವೃದ್ಧಿಪಡಿಸಿ ಸ್ಮಾರಕ ಭವನ ಮತ್ತು ಸಂಗೀತ ವಸ್ತುಸಂಗ್ರಹಾಲಯ ಸ್ಥಾಪನೆ ಬಗ್ಗೆಯೂ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಅಳಿವಿನ ಅಂಚಿನಲ್ಲಿರುವ ಕೊರಮ-ಕೊರಚರ ಕುಳುವ ಭಾಷೆ ಸಂರಕ್ಷಿಸಲು ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಭಾಷಾ ಸಂಶೋಧನಾ ಅಧ್ಯಯನ ಕೇಂದ್ರ ತೆರೆಯಬೇಕು. ವಿಜಯಪುರ ಜಿಲ್ಲೆಯ ಹೀರೆ ಶಿವಣಗಿ ಗ್ರಾಮದಲ್ಲಿ ನುಲಿಚಂದಯ್ಯ ಜನ್ಮ ಸ್ಥಳವನ್ನು ಜೀರ್ಣೋದ್ದಾರ ಮಾಡುವ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.
ಭಾರತೀಯ ಕುಳುವ ಮಹಾಸಂಘದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಆದರ್ಶ್ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಆನಂದ್‍ಕುಮಾರ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.