This time grow chillies and hit the bumper lottery: Kalajnana Swami,

ವರದಿ : ಪಂಚಯ್ಯ ಹಿರೇಮಠ,,,
ಕೊಪ್ಪಳ : ಈ ಬಾರಿ ಮೆಣಸಿನಕಾಯಿ ಹಾಕಿ ನಿನ್ಯಾರು ಕಾಯೇ ಕೆಂಪು ಗುಲಾಬಿ ಕಾಯೇ ಬ್ಯಾಡಗಿ ಮೆಣಸಿನಕಾಯಿ 1 ಲಕ್ಷ ರೂಪಾಯಿಗೆ ನಾನು ಮಾರುತ್ತೇನೆ ನೀನು ಕಾಯೇ ಅನ್ನುತ್ತೆ ಆದ್ದರಿಂದ ಈ ಬಾರಿ ಮೆಣಸಿನಕಾಯಿ ಹಾಕಿ ಬಂಪರ್ ಲಾಟರಿ ಹೊಡೆಯಿರಿ ಎಂದು ಗಜೇಂದ್ರಗಡ ಕೋಡಿಮಠದ ಶರಣಬಸವೇಶ್ವರ ಕಾಲಜ್ಞಾನ ಮಹಾಸ್ವಾಮಿಗಳು ತಮ್ಮ ಕಾಲಜ್ಞಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಅವರು ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಬುಧವಾರದಂದು ರೇಣುಕಾಚಾರ್ಯ ಭಗವತ್ಪಾದರ ಮೂರ್ತಿ ಪ್ರತಿಷ್ಠಾಪನೆ ಹಾಗೂ ರೇಣುಕಾಚಾರ್ಯ ವೃತ್ತ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತುಂಗಭದ್ರಾ ಜಲಾಶಯ 10 -20 ದಿನಗಳಲ್ಲಿ ರೆಡಿ ಆಗುತ್ತದೆ, ಹಿಂಗಾರು ಬೆಳೆ ಆ ಭಾಗದಲ್ಲಿ ಮತ್ತೆ ಎರಡು ಫಸಲು ಬರುತ್ತೆ, ಮಹಾನವಮಿಯ ಮುಂದೆ ಮಲೆನಾಡು ಭಾಗಗಳಲ್ಲಿ ಹತ್ತು ದಿನಗಳ ಕಾಲ ಹೆಚ್ಚು ಮಳೆಯಾಗಿ ಮತ್ತೆ ತುಂಗಭದ್ರ ಒಡಲಾಳ ಸಂಪೂರ್ಣ ತುಂಬುತ್ತದೆ.
ಈ ಬಾರಿ ಹಿಂಗಾರು ಮಳೆ ಒಳ್ಳೆಯ ಉತ್ತಮವಾಗುತ್ತವೆ ಎಕರೆಗೆ 10 ಚೀಲ ಬೆಳೆಯುವವರು 20 ಚೀಲ ಬೆಳೆಯುತ್ತಾರೆ, ದೀಪಾವಳಿಯವರೆಗೆ ಮಳೆ ಇದ್ದು, ದೀಪಾವಳಿಯ ನಂತರ ಕ್ರೀಮಿ ಕೀಟ ಬಾಧೆ, ರೋಗ ರುಜುನಗಳ ಭಾದೆ ಕಡಿಮೆಯಾಗುತ್ತದೆ.
ಕಾರ್ತಿಕ ಮಾಸದಲ್ಲಿ ತಮಿಳುನಾಡು ಭಾಗಕ್ಕೆ ಭೂಕಂಪ ಸಂಭವಿಸಲಿದ್ದು, ಪಾಕಿಸ್ತಾನ ಗಡಿ ಭಾಗದ ನಮ್ಮ ಯೋಧರು ಧ್ವಜ ಹಾರಿಸುವಲ್ಲಿ ಸ್ವಲ್ಪ ತಾಗುತ್ತದೆ ಎಂದರು.
ಕ್ರೀಡೆಯಲ್ಲಿ ನಮ್ಮ ದೇಶ ಚೀನಾ ಜಪಾನ್ ಹಿಮ್ಮೆಟ್ಟಿಸಿ ಪದಕಗಳ ಸಾಲಿನಲ್ಲಿರುತ್ತೆ, ಅದರಲ್ಲೂ ಕರ್ನಾಟಕ ಮುಂದೆ ಇರುತ್ತೆ.
ವಿಶ್ವಸಂಸ್ಥೆಯಲ್ಲಿ ಮಾನ್ಯತೆ ತರುವಂತವರಿದ್ದರೇ ಅದು ಐಎಎಸ್ ಕೆಎಎಸ್ ನಲ್ಲಿ ಶೇಕಡ 62 ರಿಂದ ಶೇಕಡ 92 ರಷ್ಟು ಕರ್ನಾಟಕದ ವಿದ್ಯಾರ್ಥಿಗಳದೇ ಸಿಂಹ ಪಾಲು. ಅವರೇ ದೇಶವನ್ನು ಮುನ್ನಡೆಸುವ ವ್ಯಕ್ತಿಗಳಾಗುತ್ತಾರೆ ಎಂದರು.
ಈ ಬಾರಿ ಕರ್ನಾಟಕ ಕನ್ನಡ ಚಿತ್ರರಂಗಕ್ಕೆ ಕಂಟಕವಿದೆ ಹಾಗೂ ಕಾವಿ ಬಟ್ಟೆಯವರಿಗೆ, ಸ್ವಾಮಿಗಳಿಗೆ ಯತಿಗಳಿಗೆ ಸನ್ಯಾಸಿಗಳಿಗೆ ಕಂಟಕವಿರುವದರಿಂದ ಜಾಗೃತರಾಗಿರಬೇಕು ಎಂದು ಕಾಲಜ್ಞಾನ ನುಡಿದರು.
ನಂತರದಲ್ಲಿ ಕುಕನೂರು ಅನ್ನದಾನೇಶ್ವರ ಮಠದ ಮಹಾದೇವ ಸ್ವಾಮೀಜಿ ಮಾತನಾಡಿ ನಾವು ಅಳಿದರು ನಮ್ಮ ಹೆಸರು ಅಳಿಯದಂತೆ ಬದುಕಿದಾಗ ಜೀವನಕ್ಕೆ ಒಂದು ಅರ್ಥ ಬರುತ್ತದೆ.
ಅದರಂತೆ ಕವಲೂರು ಗ್ರಾಮದ ಶಾರದಮ್ಮ ಬಸವರಾಜ ಅಕ್ಕಿಯವರು ಈ ಗ್ರಾಮದ ರೇಣುಕರ ಮೂರ್ತಿ ಪ್ರತಿಷ್ಠಾಪನೆಗೆ ಮೂರ್ತಿಯನ್ನು ಮಾಡಿಸಿಕೊಡುವ ಮೂಲಕ ತಾವು ಚಿರಾಯು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ ಇದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಜಂಗಮರು ಹೋಗುವ ಮನೆಯ ಭಕ್ತರು ಶ್ರೀಮಂತರಿದ್ದಾರೆಯೇ ಹೊರತು, ಜಂಗಮರು ಶ್ರೀಮಂತರಿಲ್ಲ, ಅದಕ್ಕೆ ಕಾರಣ ಜಂಗಮನ ಆಶೀರ್ವಾದವೇ ಕಾರಣ.
ನಮ್ಮ ಜಂಗಮ ಸಮಾಜದಲ್ಲಿ ವೈದಿಕ ವೃತ್ತಿ ಕಡಿಮೆಯಾಗುತ್ತಿರುವುದು ವಿಷಾದನೀಯ, ನಮ್ಮ ವೈದಿಕ ವೃತ್ತಿಯನ್ನು ಬಿಟ್ಟು ನಾವು ನಡೆಯಬಾರದು ಆದ್ದರಿಂದ ಪ್ರತಿಯೊಬ್ಬ ಜಂಗಮರು ತಮ್ಮ ಮನೆಯಲ್ಲಿನ ವಟುಗಳಿಗೆ ವೈದಿಕ ಪರಂಪರೆಯನ್ನು ಬೆಳೆಸಲು ಮುಂದಾಗಬೇಕು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ರೇಣುಕರ ಮೂರ್ತಿ ಪ್ರತಿಷ್ಠಾಪನೆ, ಹಾಗೂ ಗ್ರಾಮದ ಮಹಿಳೆಯರಿಂದ ಕುಂಭೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದ ವೇದಿಕೆಯಲ್ಲಿ ಅಳವಂಡಿ ಕಟ್ಟಿಮನಿ ಸಂಸ್ಥಾನ ಮಠದ ಮರುಳಾರಾಧ್ಯ ಸ್ವಾಮಿಜೀ, ಮೈನಹಳ್ಳಿ ಸಿದ್ದೇಶ್ವರ ಸ್ವಾಮಿಜೀ, ವೀರುಪಾಪೂರ ಹಿರೇಮಠದ ಮುದುಕೇಶ್ವರ ಸ್ವಾಮಿಜೀ, ಸೊರಟೂರ ಶಿವಯೋಗಿಶ್ವರ ಸ್ವಾಮಿಜೀ, ಕಂಪ್ಲಿ ಪ್ರಭು ಮಹಾ ಸ್ವಾಮಿಜೀ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಯ್ಯ ಹಿರೇಮಠ, ಬಿ. ಎಂ ಭೂಸನೂರ ಮಠ, ಕಾಶಯ್ಯ ಮಾಸ್ತರ ಅಳವಂಡಿ, ಜಗದೀಶ ಹಿರೇಮಠ, ಬಸವರಾಜ ಮುಗುಂಡಮಠ, ಮಹಾಂತೇಶ ಸಿಂದೋಗಿಮಠ, ತಿಮ್ಮಣ್ಣ ಸಿದ್ನೇಕೊಪ್ಪ, ಹನುಮಪ್ಪ ಹೊಸಮನಿ, ಹನುಮ ರೆಡ್ಡಪ್ಪ ವರಕನಹಳ್ಳಿ, ಮಹೇಶ ಯರಾಶಿ, ಪ್ರದೀಪ್ ಗೌಡ ಮಾಲಿಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಸವಿತಾ ಶಂಕ್ರಯ್ಯ, ಜೀವನ್ ಸಾಬ ವಡ್ರಟ್ಟಿ ಹಾಗೂ ಸರ್ವ ಸಮಾಜದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು. ಬಸಯ್ಯ ಎಲಿಗಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.