Sociable, thoughtful young politician
Jyoti Gondaba needs a better platform
ರಾಜಕಾರಣದಲ್ಲಿ ಯುವಜನರಿಗೆ ಅವಕಾಶ ತೀರಾ ಕಷ್ಟ. ಅವರು ಒಂದೋ ರಾಜಕೀಯ ಮನೆತನದವರು ಆಗಿರಬೇಕು ಇಲ್ಲವೇ ಯಾವುದೋ ಮೂಲದಿಂದ ಹಣಬಲ ಹೊಂದಿದವರು, ಆಕಸ್ಮಿಕವಾಗಿಯೋ ಬಂದವರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲೂ ಸಹ ಗಮನಿಸಿದರೆ ರಾಜಕೀಯದಲ್ಲಿ ಇರುತ್ತಾರೆ ಆದರೂ ಅವರಿಗೆ ಸಮಾಜಮುಖಿ ಕಾಳಜಿ ಇರುವದಿಲ್ಲ. ಒಂದೋ ಅವರಿಗೆ ಶಿಕ್ಷಣದ ಕೊರತೆ ಇಲ್ಲವೇ ಹಣ ಮಾಡಲು ಅಥವಾ ಶೋಕಿ ಮಾಡಲು ರಾಜಕೀಯಕ್ಕೆ ಬಂದರೆ ಅವರಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಅಂದರೆ ಮೂರು ಬಿಟ್ಟವರು ಎಂದು ಅಂದುಕೊಂಡ ಸಮಾಜದ ಮುಂದೆ ಒಂದು ವಿಭಿನ್ನ ರಾಜಕೀಯ ಶೈಲಿಯ ಜ್ಯೋತಿ ಗೊಂಡಬಾಳ ಹೊಸತಾಗಿ ಕಾಣುತ್ತಾರೆ. ಕೆಲಸ ತಮ್ಮನ್ನು ಗುರುತಿಸಬೇಕು ಎಂದುಕೊಮಡವರು ಅದನ್ನು ಮಾಡಿ ತೋರಿಸಿದರು.
ಹೌದು, ಜ್ಯೋತಿ ಗೊಂಡಬಾಳ ಮೂಲತಃ ಹುಬ್ಬಳ್ಳಿಯ ಪಕ್ಕದ ಹೆಬಸೂರ ಗ್ರಾಮದವರು, ಬೆಳಗಾವಿಗೆ ಪ್ರಿಂಟಿಂಗ್ ಬುಕ್ ಬೈಂಡಿಂಗ್ ಕೆಲಸದ ಉದ್ಯೋಗಿಯಾದ ಸೋದರ ಮಾವನ ಜೊತೆಗೆ ಬೆಳಗಾವಿಗೆ ವಲಸೆ ಹೋದವರು. ಅಲ್ಲಿಯೇ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿಕೊಂಡ ಅವರು ಸಣ್ಣ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡು ವಕೀಲಿ ವೃತ್ತಿ ಮಾಡುತ್ತಿದ್ದ ಚಿಕ್ಕಮ್ಮ ಗೌರಮ್ಮರ ಜೊತೆಗೆ ಸಿಂಧನೂರಿಗೆ ಬಂದು ನೆಲೆಸಿದರು. ಮುಂದೆ ಹೈಸ್ಕೂಲ್ ನಿಂದ ಪದವಿವರೆಗೆ ಶಿಕ್ಷಣ ಮಾಡಿಕೊಂಡು ಅಲ್ಲಿಯೇ ನೆಲೆಸಿದರು. ಈ ಅಲೆದಾಟ ಅವರ ವಿದ್ಯೆಗೆ ಪೂರಕವಾಗಿ ಬಹುಭಾಷೆಯ ಕಲುವಿಕೆಗೆ ದಾರಿಯಾಯಿತು. ಕನ್ನಡ ಹಿಂದಿ ಮತ್ತು ಇಂಗ್ಲೀಷ್ ಜೊತೆಗೆ ಮರಾಠಿ ಮತ್ತು ತೆಲುಗು ಭಾಷೆಗಳನ್ನು ಕಲಿತರು. ಎರಡು ವರ್ಷ ರಾಯಚೂರ ನೆಹರು ಯುವ ಕೇಂದ್ರದ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು ಎಂಟು ವರ್ಷ ಸೇವೆ ಸಲ್ಲಿಸಿದರು.
ಇಲ್ಲಿ ಅನೇಕ ವಿಷಯಗಳ ಕುರಿತು ತರಬೇತಿ ನೀಡುತ್ತಾ ಅನೇಕ ತರಬೇತಿ ಪಡೆದ ಇವರು ಜಲ ನಿರ್ಮಲ, ಹೆಚ್.ಐ.ವಿ., ಪಂಚಾಯತ್ ರಾಜ್, ಕಸ ವಿಲೇವಾರಿ ಕುರಿತು ತರಬೇತಿ ನೀಡಿದರು. ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಸದಸ್ಯರಿಗೆ, ಅನೇಕ ಬಗೆಯ ಅಧಿಕಾರಿಗಳಿಗೂ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದರು.
ಕೊಪ್ಪಳದ ಯುವ ಪತ್ರಕರ್ತ, ಸಮಾಜ ಸೇವಕ ಮಂಜುನಾಥ ಗೊಂಡಬಾಳ ಅವರನ್ನು ಬಸವಧರ್ಮದ ಆದರ್ಶದಲ್ಲಿ ವಿವಾಹವಾಗಿ ಕೊಪ್ಪಳಕ್ಕೆ ೨೦೦೭ಕ್ಕೆ ಬಂದ ಇವರು ಮುಂದೆ ಅನೇಕ ವರ್ಷ ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ, ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಮೂಲಕ, ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಮತ್ತು ಇತರೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸೇವಾ ಚಟುವಟಿಕೆಗಳನ್ನು ಮಡುತ್ತ. ಮಹಿಳೆಯರ ಮುಟ್ಟಿನ ಕುರಿತು ಅನೇಕ ಕಾರ್ಯಕ್ರಮ ಮತ್ತು ಉಪನ್ಯಾಸ ನಿಡಿದರು. ಕೊಪ್ಪಳದ ಅಡವಿ ಚೆಂಚರ ಸಮಸ್ಯೆ ಕುರಿತು ಬೆಳಕು ಚಲ್ಲಿ ಅವರಿಗೆ ದಾರಿ ನೀಡುವ ನಿಟ್ಟಿನಲ್ಲಿ ಇವರ ಪ್ರಯತ್ನ ದೊಡ್ಡದು. ಈ ನಡುವೆ ಅವರು ಎಂ.ಎ. ಸಮಾಜ ಶಾಸ್ತ್ರ ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್‌ನಲ್ಲಿ ಸ್ನಾಕೋತ್ತರ ಪದವಿ ಪಡೆದರು. ಹಂಪಿ ವಿವಿಯಲ್ಲಿ ಮಹಿಳಾ ಆದ್ಯಯನ ಡಿಪ್ಲೋಮಾ ಮಾಡಿದರು ಹಾಗೇ ಲಾ ಕಾಲೇಜಿನಲ್ಲಿ ಎಲ್.ಎಲ್.ಬಿ ಮಾಡುತ್ತಿದ್ದಾರೆ.
ಇದಾದ ಬಳಿಕ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸೇರಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿವಹಿಸಿಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರ ಇಲ್ಲದ ವೇಳೆ ರಾಜಕೀಯ ಪಕ್ಷವೊಂದಕ್ಕೆ ಸೇರಿ ಕೆಲಸ ಆರಂಭಿಸುತ್ತಾರೆ. ಅಲ್ಲಿಗೆ ಅವರು ರಾಜಕೀಯಕ್ಕೆ ಬರಲು ಕಾರಣವೇ ಯುವಜನರು ರಾಜಕಾರಣದಲ್ಲಿ ಇರಬೇಕು, ಸಜ್ಜನರೂ ಅಲ್ಲಿ ಅಗತ್ಯ ಜೊತೆಗೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಇಂಗಿತ ಜೊತೆಗೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನೋಡುವದಾದರೆ ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆ ಕಾಂಗ್ರೆಸ್ ಮಾಡುತ್ತದೆ ಎಂಬ ನಂಬಿಕೆಯಿಂದ ಆ ಪಕ್ಷಕ್ಕೆ ಸೇರಿದರು.
ಮಹಿಳಾ ಕಾಂಗ್ರೆಸ್‌ಗೆ ಅವರನ್ನು ಕರೆತಂದಿದ್ದು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮಾಲತಿ ನಾಯಕ ಆದರೂ ಗೊಂಡಬಾಳ ಕುಟುಂಬ ಮೂರು ದಶಕದಿಂದಲೂ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡು ಸ್ಥಳೀಯವಾಗಿ ಕಾಂಗ್ರೆಸ್ ಕಷ್ಟದಲ್ಲಿ ಇದ್ದಾಗಲೆಲ್ಲ ಅದರ ಜೊತೆಗೆ ನಿಂತ ಕುಟುಂಬವಾದ್ದರಿಂದ ಅಲ್ಲಿಯೇ ಏನಾದರೂ ಮಾಡಬೇಕು ಎಂಬ ಛಲ ಹೊಂದಿದರು.
ಗಾಂಧಿ ಜಯಂತಿಯನ್ನು ಕೊಪ್ಪಳದಲ್ಲಿ ಮಧ್ಯರಾತ್ರಿ ಮಾಡುವ ಟಾಸ್ಕ್ ತೆಗೆದುಕೊಂಡು ಅಂದು ನಗರದ ಸಾಹಿತ್ಯ ಭವನದ ಹತ್ತಿರ ಜಯಂತಿ ಮಾಡಿದರು. ಜೋರು ಮಳೆಯಲ್ಲೂ ಅತ್ತ್ಯುತ್ತಮ ಕಾರ್ಯಕ್ರಮ ಸಂಘಟಿಸಿ ಆರಂಭದಲ್ಲಿಯೇ ರಾಜ್ಯ ಮಹಿಳಾ ಕಾಂಗ್ರೆಸ್‌ನವರ ಕಣ್ಣಿಗೆ ಬೀಳುತ್ತಾರೆ, ಅವಕಾಶ ಸಿಕ್ಕರೂ ರಾಜ್ಯಮಟ್ಟದ ಹುದ್ದೆ ಪಡೆಯದೇ ಇಲ್ಲಿಯೇ ಕೆಲಸ ಮಾಡುತ್ತಾರೆ. ಮುಂದೆ ಮೂರು ವರ್ಷ ನಿರಂತರವಾಗಿ ಎಲ್ಲಾ ಹೋರಾಟ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಒಂದು ಉತ್ತಮ ಮಹಿಳಾ ತಂಡವನ್ನೇ ಕಟ್ಟುತ್ತಾರೆ. ಆ ತಂಡದ ಮೂಲಕ ಕಾಂಗ್ರೆಸ್ ಶಿಬಿರ ಸೇರಿದಂತೆ, ಮೊಬೈಲ್ ಆಪ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಮಾಡಿ ಗಮನ ಸೆಳೆಯುತ್ತಾರೆ. ಮುಂದೆ ೨೦೨೩ರ ಚುನಾವಣೆಯಲ್ಲಿ ತಮ್ಮ ಪ್ರಖರ ಮತ್ತು ಉತ್ತಮ ಮಾತಿನ ಶೈಲಿಯ ಮೂಲಕ ಜನಮಾನಸದಲ್ಲಿ ಉಳಿಯುವಂತಹ ಭಾಷಣಗಳನ್ನು ಮಾಡುತ್ತ, ಮಾಧ್ಯಮದವರ ಮೂಲಕ ಜನಜಾಗೃತಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ ಮಾಡಿಕೊಂಡು ಜನರಿಗೆ ಪರಿಚಯವಾಗುತ್ತಾರೆ. ಇವರು ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ ಕಟೀಲ್ ಅವರಿಗೆ ಫಿನಾಯಿಲ್ ಕಳುಹಿಸಿ ಸುದ್ದಿಯಾಗುತ್ತಾರೆ, ಅದೇ ರೀತಿ ಕುಮಾರಸ್ವಾಮಿಯ ಹೇಳಿಕೆ ಉತ್ತರಿಸಿ ಮತ್ತೊಮ್ಮೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾರೆ. ಮಹಿಳಾ ಘಟಕ ನೀಡಿದ ಎಲ್ಲಾ ಟಾಸ್ಕ್ ಪೂರೈಸಿದ್ದಲ್ಲದೇ, ಭಾರತ್ ಜೋಡೊ ಯಾತ್ರೆ, ವಿಧಾನ ಪರಿಷತ್ ಚುನಾವಣೆ, ಬಿಜೆಪಿ ವಿರುದ್ಧದ ಬೆಲೆ ಏರಿಕೆ ವಿರುದ್ಧ ಹೋರಾಟ ಎಲ್ಲದರಲ್ಲೂ ಮುಂಚೂಣಿಯಲ್ಲಿ ಇದ್ದು ಕೆಲಸ ಮಾಡಿದ್ದು ಇವರ ಹೆಗ್ಗಳಿಕೆ. ಭಾಗ್ಯನಗರ ಪಟ್ಟ್ಣ ಪಮಚಾಯತಿ ಟಿಕೆಟ್ ತಪ್ಪಿದರೂ ಕುಗ್ಗದೇ ಕೆಲಸ ಮಾಡಿದ್ದಾರೆ.
ಗಂಡುಗಲಿ ಕುಮಾರರಾಮ ಕುಮ್ಮಟದುರ್ಗೋತ್ಸವ, ಐತಿಹಾಸಿಕ ಕನಕಗಿರಿ ಉತ್ಸವ, ಪುರ ಉತ್ಸವಗಳನ್ನು ತಮ್ಮ ಸಂಸ್ಥೆಗಳ ಮೂಲಕ ಮೊದಲ ಬಾರಿಗೆ ಮಾಡಿದ ಹೆಗ್ಗಳಿಕೆ ಜೊತೆಗೆ ಅನೇಕ ಕ್ರೀಡಾ ಮತ್ತು ಯುವ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಯಲ್ಲಿ ಎತ್ತಿದ ಕೈ, ಅದಕ್ಕಾಗಿ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಯುವ ಪ್ರಶಸ್ತಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ೨೦೦೫-೦೬ನೇ ಸಾಲಿನಲ್ಲಿ ಪಡೆದಿದ್ದು, ಆ ಪ್ರಶಸ್ತಿ ಪಡೆದ ಜಿಲ್ಲೆಯ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಇದೆ. ಇನ್ನು ೨೦೦೩ರಲ್ಲಿ ಇವರ ಸಂಘವೂ ಸಾಂಘಿಕ ಪ್ರಶಸ್ತಿ ಪಡೆದಿದೆ. ರಾಜ್ಯಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಯಶೋಧರಮ್ಮ ದಾಸಪ್ಪ ಉತ್ತಮ ಸಂಸ್ಥೆ ಪ್ರಶಸ್ತಿ ಪಡೆದಿದ್ದಾರೆ. ಕೊಪ್ಪಳದ ಗವಿಮಠದ ಗೌರವ ಸನ್ಮಾನ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಒಟ್ಟಾರೆಯಾಗಿ ಕಾಂಗ್ರೆಸ್ ಮಹಿಳಾ ಶಕ್ತಿಯಾಗಿ ಹೊರಹೊಮ್ಮಿರುವ ಜ್ಯೋತಿ ಗೊಂಡಬಾಳಗೆ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಕೆಲಸ ಮಾಡುವ ಶಕ್ತಿ ಮತ್ತು ಬುದ್ಧಿವಂತಿಕೆ ಇದೆ, ಸೌಜನ್ಯ ಮತ್ತು ಸಂಸ್ಕಾರವಿದೆ, ಸರಕಾರ ಮಟ್ಟದಲ್ಲಿ ಒಂದು ಉತ್ತಮ ರಾಜ್ಯಮಟ್ಟದ ಅವಕಾಶ ಸಿಗಬೇಕಿದೆ. ಅವರ ಜ್ಞಾನವನ್ನು ಬಳಸಿಕೊಂಡು ಪಕ್ಷ ಮತ್ತಷ್ಟು ಸಂಘಟಿತವಾಗಬೇಕಿದೆ. ಏನೂ ಇಲ್ಲದ ಹೊತ್ತಲ್ಲಿ ಪಕ್ಷ ಕಟ್ಟಿದ ಪ್ರಾಮಾಣಿಕರಿಗೆ ಪಕ್ಷ ಬೆಲೆಕೊಟ್ಟಲ್ಲಿ ಇಂತಹ ಕಾರ್ಯಕರ್ತರ ಹಿಂಡು ಮುಂದೆ ಕೈ ಬಲಪಡಿಸುತ್ತಾರೆ ಎಂಬ ನಂಬಿಕೆಯೊಂದಿಗೆ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ರವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಿಲ್ಲಾ ಮಂತ್ರಿ ಶಿವರಾಜ ತಂಗಡಗಿಯವರು ಮತ್ತು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಗಮನಿಸಲಿ ಎಂಬುದು ಈ ಬರಹದ ಆಶಯ.