Breaking News

ಹಳಿಯಾಳ ಹೊಸ ಬಸ್ ನಿಲ್ದಾಣದಲ್ಲಿ ಬಾಕಿ ಇರುವ ಕಾಮಗಾರಿ ಪೂರೈಸಿ ಪ್ರಯಾಣಿಕರಿಗೆ ಅನುಕೂಲ ಮಾಡಿ : ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಮನವಿ

Complete the pending work on the new bus stand at Haliya and facilitate the passengers: Journalist and activist Basavaraju appeals

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕು ಕೇಂದ್ರದ ಹೊಸ ಬಸ್ ನಿಲ್ದಾಣದ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೇ ಕಣ್ರೀ..!

ಜಾಹೀರಾತು

ಹೊಸ ಬಸ್ ನಿಲ್ದಾಣದ ಕಾಮಗಾರಿ ಸಂಪೂರ್ಣವಾಗಿ ಪೂರೈಸಿಲ್ಲ, ಅದಾಗಲೇ ಹೊಸ ಬಸ್ ನಿಲ್ದಾಣಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿರೋದು ನೋಡಿದ್ರೆ ಸಾಕಷ್ಟು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಬಸ್ ನಿಲ್ದಾಣದಲ್ಲಿ ನಿಲುಗಡೆಯಾಗಲು ನಿರ್ಮಾಣ ಮಾಡುವ ಸಿಮೆಂಟ್ ಕಾಂಕ್ರೀಟ್ ನೆಲಹಾಲು ಮಾಡಿಲ್ಲ, ಸುತ್ತ ಮುತ್ತಾ ಬೆಳಕು ವ್ಯವಸ್ಥೆ ಇಲ್ಲಾ, ರಾತ್ರಿ ವೇಳೆ ಪ್ರಯಾಣಿಕರಿಗೆ ಈ ಬಸ್ ನಿಲ್ದಾಣದಲ್ಲಿ ಕೂರಲು ಸಮರ್ಪಕವಾಗಿ ವ್ಯವಸ್ಥೆಯೇ ಇಲ್ಲಾ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಹೊಸ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿರೋದು ನೋಡಿದ್ರೆ ಸಾಕಷ್ಟು ಅನುಮಾನಗಳು ಕಾಡುತ್ತಿವೆ, ಇನ್ನೂ ರಾಜ್ಯದ ಪ್ರಭಾವಿ ರಾಜಕಾರಣಿಗಳು ಆದ ಆರ್.ವಿ ದೇಶಪಾಂಡೆ ಯವರ ಸ್ವಕ್ಷೇತ್ರ ಹಾಗೂ ಸ್ವಗೃಹ ಸಹ ಈ ನಿಲ್ದಾಣದಿಂದ ಕೇವಲ 200 ಹೆಜ್ಜೆಗಳ ಅಂತರದಲ್ಲಿದೆ. ಇನ್ನೂ ಇದನ್ನು ಪೂರೈಸಿದ ಗುತ್ತಿಗೆದಾರರು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲಾ, ಆದ್ದರಿಂದ ಪತ್ರಕರ್ತ ಬಸವರಾಜು ಭೇಟಿಕೊಟ್ಟು ಈ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಸಮಸ್ಯೆ ಬಗೆಹರಿಯುವುದೇ ಎಂಬುದನ್ನು ಕಾದುನೋಡಬೇಕಿದೆ.

About Mallikarjun

Check Also

ಕೆಸರಹಟ್ಟಿ:ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ

Kesarhatti: Health awareness program for students ಗಂಗಾವತಿ.‌ 24 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯ …

Leave a Reply

Your email address will not be published. Required fields are marked *