The demands of some farmers will be addressed locally: Secretary Guruswami S. Goody

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಸ್ಥಳೀಯವಾಗಿ ಕೇಲವೊಂದು ರೈತರ ಬೇಡಿಕೆಗಳನ್ನು ಬಗೆ ಹರಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ಗುರುಸ್ವಾಮಿ ಎಸ್. ಗುಡಿ ರೈತರಿಗೆ ತಿಳಿಸಿ ಮನ ಒಲಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಹಮ್ಮಿಕೊಂಡ ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಎಚ್ ಪ್ರಾಣೇಶ್, ಪಿಐ ಟಿ ಗುರುರಾಜ ಇವರ ನೇತೃತ್ವದಲ್ಲಿ ರೈತರೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಗುರುಸ್ವಾಮಿಯವರು ಚರ್ಚಿಸಿ ಮಾತನಾಡಿದರು.
ರೈತರ ವಿವಿಧ ಬೇಡಿಕೆಗಳಲ್ಲಿ ಕೆಲವೊಂದಿಷ್ಟು ಬೇಡಿಕೆಗಳಾದ ಟೆಂಡರ್ ಪ್ರಕ್ರಿಯೆ, ಕಾಟನ್ ಚೀಲದಲ್ಲಿ ತೂಕ ಮಾಡುವುದು, ರೈತರಿಂದ ಹಮಾಲರು ಒತ್ತಡ ಹಾಕಿ ಯಾವುದೇ ಧಾನ್ಯವನ್ನು ತೆಗೆದುಕೊಳ್ಳದಂತೆ ಸೂಕ್ತ ಕ್ರಮ, ಎಪಿಎಂಸಿ ಪ್ರಾಂಗಣದಲ್ಲಿ ಟೆಂಡರ್ ಪ್ರಕ್ರಿಯೆ ಮಾಡದಿದ್ದರೆ ದಲ್ಲಾಳಿ ಅಂಗಡಿಯ ಹಾಗೂ ಖರೀದಿದಾರ ಲೈಸೆನ್ಸ್ ರದ್ದುಗೊಳಿಸಲಾಗುವುದು ಸೇರಿದಂತೆ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಕ್ರಮ ಕೈಗೊಳ್ಳಲಾಗುವುದು, ಉಳಿದಂತೆ ಅಧಿಕಾರಿಗಳೊಂದಿಗೆ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಬೇಡಿಕೆ ಈಡೇರಿಸಲಾಗುವುದು ಎಂದು ರೈತ ಮುಖಂಡರಿಗೆ ತಿಳಿಸಿದರು.
ಎಪಿಎಂಸಿ ನಿಯಮದಂತೆ ಸೋಮವಾರದಿಂದ ಟೆಂಡರ್ ಪ್ರಕ್ರಿಯೇ ಮಾಡಲು ವರ್ತಕರ ಗಮನಕ್ಕೆ ತರಲಾಗುವುದು.ಎಪಿಎಂಸಿ ನಿಯಮದಂತೆ ರೈತರ ಬೆಳೆಗಳನ್ನು ಖರೀದಿಸಲಾಗುವುದು.
ಈ ಮೊದಲು ವರ್ತಕರಿಂದ ಹಣ ಪಡೆದ ರೈತರ ಬೆಳೆಗಳನ್ನು ಎಪಿಎಂಸಿಯಲ್ಲಿಯೇ ಪಡೆಯುವಂತೆ ಸೂಚಿಸಲಾಗುವುದು ಎಂದರು.
ಮಂಗಳವಾರದಂದು ಬೆಳಗ್ಗೆ11.30ಕ್ಕೆ ಪ್ರಾರಂಭಗೊಂಡ ಪ್ರತಿಭಟನೆ ಕೋಳಿಪೇಟಿ ದುರ್ಗಾದೇವಿ ದೇವಸ್ಥಾನದಿಂದ ವೀರಭದ್ರಪ್ಪ ವೃತ್ತದ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಸಾಗಿ ಮರಳಿ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ಜರುಗಿತು. ಈ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕುಕನೂರ್ ಠಾಣಾ ಪಿಎಸ್ಐ ಬಿಗಿ ಪೊಲೀಸ್ ಬಂದ ಬಸ್ತನ್ನು ನಿಯೋಜನೆಗೊಳಿಸಿದ್ದರು.
ಈ ಸಂದರ್ಭದಲ್ಲಿ ಎಲ್ಲಾ ರೈತ ಮುಖಂಡರು ಹಾಜರಿದ್ದರು.