Breaking News

ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿಯನ್ಯಾಯಬೆಲೆ ಅಂಗಡಿಗಳಿಗೆ ನಿಯಮಾನುಸಾರ ಪಡಿತರಸಗಟುಸರಬರಾಜು ಮಾಡದಿರುವುದಕ್ಕೆ ಖಂಡನೆ.

Haji Global Raichur condemned for non-supply of wholesale ration as per rules to fair price shops in Gangavati.

ಗಂಗಾವತಿ: ಗಂಗಾವತಿ ತಾಲೂಕ ಪಡಿತರ ಸಗಟು ಗೋದಾಮುನಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಗಟು ಸರಬರಾಜು ಮಾಡಲು ಹಾಜಿ ಗ್ಲೋಬಲ್ ರಾಯಚೂರು ಇವರು ಗಂಗಾವತಿ ಏಈಅSಅ ಗೊದಾಮುನಲ್ಲಿ ೧೪ ಲಾರಿಗಳಿಂದ ಪಡಿತರ ಸಗಟು ಸರಬರಾಜು ಮಾಡಲು ಟೆಂಡರ್ ಪಡೆದಿರುತ್ತಾರೆ. ಆದರೆ ಗಂಗಾವತಿ ಸಗಟು ಗೋದಾಮುನಲ್ಲಿ ಪ್ರಸ್ತುತವಾಗಿ ಕೇವಲ ೬ ರಿಂದ ೭ ಲಾರಿಗಳಿಂದ ಮಾತ್ರ ಪಡಿತರ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಇವರಿಗೆ ನ್ಯಾಯಬೆಲೆ ಅಂಗಡಿಗಳಿಗೆ ಸರಿಯಾದ ಸಮಯಕ್ಕೆ ಪಡಿತರ ಆಹಾರಧಾನ್ಯಗಳನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಸಂದರ್ಭಗಳಲ್ಲಿ ಇವರು ಕಳುಹಿಸಿದ ಲಾರಿಗಳಿಗೆ ಆಹಾರಧಾನ್ಯಗಳು ಲೋಡ್ ಆಗಿ ಸಂಜೆಯಾಗುತ್ತಾ ಬಂದರೂ ಸಹ ಚಾಲಕರು ಇಲ್ಲದಿರುವುದು ಕಂಡುಬAದಿರುತ್ತದೆ. ನಾವು ಕೇಳಿದರೆ ವಿನಾಕಾರಣ ನೆಪ ಹೇಳುವುದು ಮತ್ತು ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು ಕಂಡುಬರುತ್ತಿದೆ ಎಂದು ತಾಲೂಕಾ ಪಪಡಿತರ ವಿತರಕರ ಸಂಘದ ಅಧ್ಯಕ್ಷರಾದ ಕೆ. ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದರು. ಅವರು ಪಡಿತರ ಸರಬರಾಜು ಟೆಂಡರ್ ಪಡೆದ ಹಾಜಿ ಗ್ಲೋಬಲ್ ರಾಯಚೂರು ಇವರು ಸರಿಯಾದ ಸಮಯಕ್ಕೆ ಪಡಿತರ ಸಗರು ಸರಬರಾಜು ಮಾಡದೇ, ನ್ಯಾಯಬೆಲೆ ಅಂಗಡಿಕಾರರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಇಂದು ದಿನಾಂಕ: ೧೧.೦೯.೨೦೨೩ ರಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡುತ್ತಿದ್ದರು. ಆಹಾರಧಾನ್ಯಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆದ ಮಾಲಿಕರಾದ ಮಹ್ಮದ್ ಹಾಜಿ ಗ್ಲೋಬಲ್ ರಾಯಚೂರು ಇವರು ಇಲ್ಲಿಯವರೆಗೂ ಸಗಟು ಗೋದಾಮುಗೆ ಬಂದಿರುವುದೇ ಇಲ್ಲ. ಇಲ್ಲಿಯವರೆಗೆ ಕೇವಲ ಫೋನ್ ಮುಖಾಂತರ ಸಂಪರ್ಕಕ್ಕೆ ಸಿಕ್ಕಿದ್ದು, ನನಗೆ ಯಾವುದೇ ಸಂಬAಧವಿಲ್ಲ ಗಂಗಾವತಿಯಲ್ಲಿ ಇರುವ ನಮ್ಮ ಸಹಾಯಕರಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ ಎಂದು ಹೇಳುತ್ತಿದ್ದಾರೆ. ಆದರೆ ಇಲ್ಲಿ ಅವರ ಸಹಾಯಕರಾದ ಶಿವರಾಜ ಹಿರೇಮಠ ಇವರು ನ್ಯಾಯಬೆಲೆ ಅಂಗಡಿಕಾರರ ಸಮಸ್ಯೆಗಳಿಗೆ ಸ್ಪಂದಿಸಿದೆ, ಅಸಭ್ಯವಾಗಿ ವರ್ತಿಸಿ, ಉಡಾಫೆ ಮಾತುಗಳಿಂದ ನಿರ್ಲಕ್ಷö್ಯ ತೋರುತ್ತಿದ್ದಾರೆ. ಈ ವಿಷಯವನ್ನು ದಿನಾಂಕ: ೦೬.೧೨.೨೦೨೨ ರಂದು ಮಾನ್ಯ ಆಯುಕ್ತರು ಆಹಾರ ಇಲಾಖೆ ಬೆಂಗಳೂರು ಇವರಿಗೆ ಮೌಖಿಕವಾಗಿ ತಿಳಿಸಿರುತ್ತೇವೆ. ಈ ಕುರಿತು ಮಾನ್ಯ ಉಪನಿರ್ದೇಶಕರು ಕೊಪ್ಪಳ ಇವರು ದಿನಾಂಕ: ೦೭.೧೨.೨೦೨೨ ರಂದು ಗಂಗಾವತಿಯ ತಹಶೀಲ್ದಾರ್‌ರ ಕಾರ್ಯಾಲಯದಲ್ಲಿ ತುರ್ತುಸಭೆ ಕರೆದು ಸದರಿ ವಿಷಯದ ಕುರಿತು ಹಾಜಿ ಗ್ಲೋಬಲ್ ಟ್ರಾನ್ಸ್ಪೋರ್ಟ್ ರಾಯಚೂರು ಇವರಿಗೆ ಏಚ್ಚರಿಕೆ ನೀಡಿದಾಗ್ಯೂ ಸಹ ಗುತ್ತಿಗೆದಾರರು ಎಚ್ಚೆತ್ತುಕೊಂಡಿರುವುದಿಲ್ಲ. ನ್ಯಾಯಬೆಲೆ ಅಂಗಡಿಗಳಿಗೆ (ಸಬ್ ಪಾಯಿಂಟ್/ಉಪ ಶಾಖೆ) ಅಂದರೆ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ೩ ಅಥವಾ ೪ ಗ್ರಾಮಗಳು ಸೇರ್ಪಡೆಯಾಗಿರುತ್ತದೆ. ಆದರೆ ಸ್ಥಳೀಯ ಸಾರ್ವಜನಿಕರ ಒತ್ತಡದಿಂದ ಮಾನ್ಯ ಸಂಬAಧಪಟ್ಟವರಿಗೆ ಶಾಸಕರು ಮೌಖಿಕವಾಗಿ ಸಾರ್ವಜನಿಕರ ತಿಳಿಸಿರುತ್ತಾರೆ. ಕುಂದು ಮಾನ್ಯ ಕೊರತೆಗಳಿಗೆ ತಹಶೀಲ್ದಾರರು ಅನುಗುಣವಾಗಿ ಸಹ ಆದೇಶ ಮಾಡಿರುತ್ತಾರೆ. ಆದ್ದರಿಂದ ಇಲ್ಲಿಯವೆರೆಗೆ ಪರ್ಯಾಯವಾಗಿ ಇರುವ ಗ್ರಾಮದ ಮಳಿಗೆಯಲ್ಲಿ ಆಹಾರ ಧಾನ್ಯಗಳನ್ನು ಇಳಿಸುತ್ತಿದ್ದು ಹಾಗೂ ಹಂಚಿಕೆ ಮಾಡಲಾಗುತ್ತಿದೆ. ನಾವು ದಿನಾಂಕ ೦೬.೦೯.೨೦೨೩ ರಂದು ಗಂಗಾವತಿ ಸಗಟು ಗೋದಾಮುಗೆ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಲು ಬಂದಾಗ ಇನ್ನೂ ಮುಂದೆ ನಾವು ಮುಖ್ಯ ನ್ಯಾಯಬೆಲೆ ಅಂಗಡಿಗೆ ಮಾತ್ರ ಆಹಾರಧಾನ್ಯಗಳನ್ನು ಇಳಿಸುತ್ತೇವೆ ಮತ್ತು ಸಬ್ ಪಾಯಿಂಟ್‌ಗಳಿಗೆ ನಾವು ಆಹಾರಧಾನ್ಯಗಳನ್ನು ಇಳಿಸುವುದಿಲ್ಲಾ ಎಂದು ಗುತ್ತಿಗೆದಾರರ ಸಹಾಯಕರಾದ ಶ್ರೀ ಶಿವರಾಜ ಹಿರೇಮಠ ಆಗೋಲಿ ಇವರು ಹೇಳುತ್ತಾ, ಇನ್ನುಮುಂದೆ ಅಂದರೆ ಸೆಪ್ಟೆಂಬರ್ ಮಾಹೆಯಿಂದ ಪ್ರಾಧಿಕಾರದ ವಿಳಾಸ ಹೊಂದಿದ ನ್ಯಾಯಬೆಲೆ ಅಂಗಡಿಗಳಿಗೆ ಮಾತ್ರ ಇಳಿಸುತ್ತೇವೆ ಎಂದು ಉಡಾಫೆ ಮಾತುಗಳಿಂದ ತಿಳಿಸಿರುತ್ತಾರೆ. ಆದರೆ ಗುತ್ತಿಗೆಯ ಆದೇಶದ ಪ್ರಕಾರ ತೂಕದ ಯಂತ್ರದ (ವೇಯಿಂಗ್ ಬ್ರಿಡ್ಜ್) ಫೀ ಗುತ್ತಿಗೆದಾರರೇ ಭರಿಸತಕ್ಕದ್ದು. ಇಲ್ಲಿಯವರೆಗೂ ಇದನ್ನು ನಾವೇ ಪಾವತಿಸುತ್ತಿದ್ದೇವೆ. ಅಲ್ಲದೇ ಸಬ್ ಪಾಯಿಂಟ್‌ಗಳಿಗೆ ಬೇರೆ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ವಿತರಣೆ ಮಾಡಿ ಎಂದು ಗುತ್ತಿಗೆದಾರರು ನಮಗೆ ತಿಳಿಸಿರುತ್ತಾರೆ. ಸದರಿ ಸಬ್ ಪಾಯಿಂಟ್ ತೆರೆಯಲು ನ್ಯಾಯಬೆಲೆ ಅಂಗಡಿಯವರು ಯಾವುದೇ ಬೇಡಿಕೆಗಳನ್ನು ಇಟ್ಟಿರುವುದಿಲ್ಲ. ಸಬ್‌ಪಾಯಿಂಟ್‌ಗಳು ಮಾನ್ಯ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯ ಕಾರ್ಯಕ್ರಮಗಳಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭಗಳಲ್ಲಿ ಸ್ಥಳೀಯ ಪಡಿತರದಾರರು ಗುಡ್ಡಗಾಡು ಪ್ರದೇಶಗಳಲ್ಲಿ ಕರಡಿ, ಚಿರತೆ, ಇತರೆ ಕಾಡುಪ್ರಾಣಿಗಳ ಹಾವಳಿಯಿಂದ ಸರಿಯಾದ ಸಮಯದಲ್ಲಿ ಬಸ್ ವ್ಯವಸ್ಥೆ ಇ್ಲದಿರುವುದರಿಂದ ಹಾಗೂ ರೇಷನ್ ಪಡೆಯಲು ೩-೪ ಕಿ.ಮೀ ದೂರ ಹೋದ ಸಮಯದಲ್ಲಿ ಸರ್ವರ್ ಸಮಸ್ಯೆಯಿಂದ ಪದೇ ಪದೇ ಶಾಲಾ ಮಕ್ಕಳು, ವಯೋವೃದ್ಧರು ಅಲೆದಾಡುವ ಪರಿಸ್ಥಿತಿ ಇರುವುದಾಗಿ ಸಬ್ ಪಾಯಿಂಟ್‌ನ್ನು ತೆರೆಯಲು ಅಥವಾ ಪ್ರತ್ಯೇಕ ಅಂಗಡಿಯನ್ನು ತೆರೆಯಲು ಬೇಡಿಕೆ ಇಟ್ಟಿರುವ ಮೇರೆಗೆ ಅಧಿಕಾರಿಗಳಿಂದ ಸಬ್ ಪಾಯಿಂಟ್ ತೆರೆಯಲಾಗಿರುತ್ತದೆ. ಅದರ ಆದೇಶದಂತೆ ಸುಮಾರು ವರ್ಷಗಳಿಂದ ಸಬ್‌ಪಾಯಿಂಟ್‌ಗಳಿಗೆ ಸಾಗಾಣಿಕೆ ಗುತ್ತಿಗೆದಾರರು ಪಡಿತರ ಸರಬರಾಜು ಮಾಡುತ್ತಾ ಬಂದಿದ್ದು, ಈಗ ಏಕಾಏಕಿ ಕೇವಲ ಮೂಲ ನ್ಯಾಯಬೆಲೆ ಅಂಗಡಿ ಸ್ಥಳಕ್ಕೆ ಮಾತ್ರ ಸಾಗಾಣಿಕೆ ಮಾಡುವುದಾಗಿ ತಿಳಿಸಿ, ಮುಂದಿನ ಗ್ರಾಮಗಳಿಗೆ ಮಾಲಿಕರೇ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಈ ರೀತಿಯ ನಿರ್ಧಾರದಿಂದ ಜನಪ್ರತಿನಿಧಿಗಳ ಹಾಗೂ ರಾಜಕಾರಣಿಗಳ ಕೆಂಗಣ್ಣಿಗೆ ನ್ಯಾಯಬೆಲೆ ಅಂಗಡಿಕಾರರು ಗುರಿಯಾಗುತ್ತಿದ್ದಾರೆ ಅಲ್ಲದೇ ಸದರಿ ಸಾಗಾಣಿಕೆ ಗುತ್ತಿಗೆದಾರರಾದ ಗ್ಲೋಬಲ್ ಟ್ರಾನ್ಸ್ಪೋರ್ಟ್ರವರು ರಾಯಚೂರುನಲ್ಲಿದ್ದು, ಸದರಿಯವರು ಸಾಗಾಣಿಕೆ ಮಾಡಲು ಸ್ಥಳೀಯ ಲಾರಿಗಳನ್ನು ಲೀಜ್‌ಗೆ ಪಡೆದು ಸಾಗಾಣಿಕೆ ನಡೆಸುತ್ತಿದ್ದು, ಆದರೂ ಸದರಿಯವರ ಸಹಾಯದಿಂದಲೇ ಪಡಿತರ ಸಾಗಾಣಿಕೆ ಮಾಡುತ್ತಿರುವ ಗ್ಲೋಬಲ್ ಟ್ರಾನ್ಸ್ಪೋರ್ಟ್ರವರು ಇವರ ಕೈಗೊಂಬೆಯಾಗಿ ತಾವು ಗಂಗಾವತಿಗೆ ಬಾರದೇ ಅಕ್ರಮವಾಗಿ (ಕಾನೂನುಬಾಹಿರವಾಗಿ) ಸಬ್‌ಟೆಂಡರ್ ನೀಡಿ ಸಾಗಾಣಿಕೆ ಮಾಡುತ್ತಿದ್ದಾರೆ. ಸದರಿಯವರು ಒಂದೇ ಲಾರಿಯಲ್ಲಿ ೨-೩ ಅಂಗಡಿಗಳ ಪಡಿತರವನ್ನು ಓವರ್ ಲೋಡ್ ಮಾಡುವುದಲ್ಲದೇ, ವೇಯಿಂಗ್ ಬ್ರಿಡ್ಜ್ ಸ್ಲಿಪ್ ನೀಡುತ್ತಿಲ್ಲ. ಇದರಿಂದಾಗಿ ಸರಿಯಾದ ತೂಕ ನಮಗೆ ಸಿಗುತ್ತಿಲ್ಲ ಹಾಗೂ ಗುತ್ತಿಗೆದಾರರು ಗುತ್ತಿಗೆ ಆದೇಶದ ಮಾನದಂಡಗಳನ್ನು ನಿಯಾಮನುಸಾರವಾಗಿ ಪಾಲಿಸದೇ ನಿರ್ಲಕ್ಷಿಸಿರುತ್ತಾರೆ. ಪೊರ್ಟಿಬಿಲಿಟಿ ಕಾರ್ಡ್ಗಳಿಗೆ ಪಡಿತರ ಹಂಚಿದ ಹೆಚ್ಚುವರಿ ಅಲಾಟ್‌ಮೆಂಟ್‌ನ್ನು ಸಹ ತರಲು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿ, ನಮ್ಮ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ, ಸಾಗಾಣಿಕೆ ಗುತ್ತಿಗೆದಾರರ ಸಹಾಯಕ ಶಿವರಾಜ್ ಹಿರೇಮಠ ಆಗೋಲಿ ಇವರನ್ನು ಹುದ್ದೆಯಿಂದ ಬಿಡಿಸಿ ಮೂಲ ಗುತ್ತಿಗೆದಾರರನ್ನು ಬಂದು ಸಾಗಾಣಿಕೆ ಮಾಡುವಂತೆ ಆಗ್ರಹಿಸಿ ಸಚಿವರಿಗೆ, ಶಾಸಕರಿಗೆ, ತಹಶೀಲ್ದಾರರಿತಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಹೊನ್ನಮ್ಮ ನಾಯಕ, ದಾನನಗೌಡ ಹೇರೂರು, ನಾಗರಾಜ ಕಾರಟಗಿ, ಮಹಮ್ಮದ್ ಫಯಾಜ್ ಶರೀಫ್, ಸತೀಶ ವಡ್ಡರಹಟ್ಟಿ, ವಾಜೇಂದ್ರರಾವ್ ದೇಶಪಾಂಡೆ, ಹೆಚ್. ವೀರಭದ್ರಪ್ಪ, ಮಹಮ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.