Power outage on 13
ಗಂಗಾವತಿ12 ಮಲ್ಲಾಪುರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 13 ರಂದು ಬುಧವಾರ 110 ಕೆವಿ 11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ದುರಸ್ತಿ ಕಾರ್ಯ ನಿಮಿತ್ಯವಾಗಿ ಬೆಳಿಗ್ಗೆ 9, ರಿಂದ ಸಂಜೆ ನಾಲ್ಕು ಗಂಟೆಯವರೆಗೆ ವಿದ್ಯುತ್
ಸರಬರಾಜು ಸ್ಥಗಿತ ಗೊಳಿಸಲಾಗುತ್ತಿದ್ದು ಆನೆಗುಂದಿ ಸಂಗಾಪುರ್ ಮಲ್ಲಾಪುರ್ ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಭಾಗಗಳಲ್ಲಿ ವಿದ್ಯುತ್ ಸ್ಥಗಿತ ಗೊಳಿಸಲಾಗುತ್ತಿದ್ದು ಗ್ರಾಹಕ ಸಹಕಾರ ನೀಡಬೇಕೆಂದು ಕೋರುವುದರ ಜೊತೆಗೆ ಯಾವುದೇ ಸಂದರ್ಭದಲ್ಲಿ ಸಾರ್ವಜನಿಕರು ಜೆಸ್ಕಾಂ ಇಲಾಖೆಯ ಅನುಮತಿ ಇಲ್ಲದೆ ಖಾಸಗಿಯಾಗಿ ವಿದ್ಯುತ್ ಕಂಬ ಹತ್ತುವುದು ದುರಸ್ತಿಗೆ ಮುಂದಾಗುವುದು ಕಾನೂನುಬಾಹಿರವಾಗಿದ್ದು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ, ಆದೇಶಕ್ಕೂ ಮೀರಿ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಬೆಸ್ಕಾಂ ಇಲಾಖೆ ಹೊಣೆಗಾರಿಕೆ ಹೋರುವುದಿಲ್ಲ ಎಂದು ಗಂಗಾವತಿ ಜೆಸ್ಕಾಂ ಇಲಾಖೆಯ ಉಪವಿಭಾಗಾಧಿಕಾರಿ ಕಾರ್ಯನಿರ್ವಹ ಕ ಅಭಿಯಂತರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ,