Breaking News

ಶೆಫರ್ಡ್ ಇಂಡಿಯಾ ರಾಷ್ಟ್ರೀಯಸಮಾವೇಶಕ್ಜೆ ಗಂಗಾವತಿಯಿಂದ ೧೦ ಸಾವಿರ ಜನ

Shepherd India National Convention 10 thousand people from Gangavati

ಜಾಹೀರಾತು



ಗಂಗಾವತಿ: ಬೆಳಗಾವಿಯಲ್ಲಿ ಅ.03 ರಂದು ಆಯೋಜಿಸಿರುವ ಶಫರ್ಡ್ ಇಂಡಿಯಾ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳಲು ಗಂಗಾವತಿ ಯಿಂದ10 ಸಾವಿರ ಜನ ತೆರಳುತ್ತಿದ್ದು ಸಮಾವೇಶಕ್ಕೆ ತೆರಳಲು ಸಚಿವ ಶಿವರಾಜ್ ತಂಗಡಗಿ, ಕೊಪ್ಪಳ ಶಾಸಕ ಕೆ
ರಾಘವೇಂದ್ರ ಹಿಟ್ನಾಳ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.
ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಸಮಾವೇಶಕ್ಕೆ ತೆರಳುವ ವಾಹನಗಳನ್ನು ಗಂಗಾವತಿ ತಾಲೂಕು ಕನಕದಾಸ ಕುರುಬರ ಸಂಘದ ಪದಾಧಿಕಾರಿಗಳು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವಿಠಲಾಪೂರ ಯಮನಪ್ಪ ಮಾತನಾಡಿ, ಶೆಫರ್ಡ್ ಇಂಡಿಯಾ ಸಮಾವೇಶದಲ್ಲಿ ದೇಶ,ವಿದೇಶದಲ್ಲಿ ನೆಲೆಸಿರುವ ಹಾಲುಮತ ಕುರುಬ ಸಮಾಜದ ಬಂಧುಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳಲಿದ್ದಾರೆ. ರೇವಣ‌ ಸಿದ್ದೇಶ್ವರ ಮಹಾಸಂಸ್ಥಾನದ ಕಾಗಿನೆಲೆಯ ಪೀಠಾಧಿಪತಿಗಳು,
ಸಮಾಜದ ಗುರುಗಳು, ಅಹಿಂದ ನಾಯಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತದೆ. ಜತೆಗೆ ಹಲವು ದಶಕಗಳ ಬೇಡಿಕೆಯಾಗಿರುವ ಎಸ್ಟಿ ಬೇಡಿಕೆ ಕುರಿತು ಕೇಂದ್ರ ಸರಕಾರಕ್ಕೆ ಒಕ್ಕೊರಲಿನಿಂದ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಣ್ಣಕ್ಕಿ ನೀಲಪ್ಪ,ಮೋರಿ,ವಿರೂಪಾಕ್ಷಪ್ಪ, ಅರ್ಳಾಳ ರುದ್ರೇಶ,ರುದ್ರೇಶ ನವಲಿ,ಶರಣೆಗೌಡ,ಎಸ್ಟಿ ಈರಪ್ಪ ಸೇರಿ ಅನೇಕರಿದ್ದರು.
ಪೊಟೊ02-gvt-10
ಗಂಗಾವತಿ: ಸಮಾವೇಶಕ್ಕೆ ತೆರಳುವ ವಾಹನಗಳನ್ನು ಬೀಳ್ಕೊಡಲಾಯಿತು.

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *