Breaking News

ಕೇಂದ್ರ ಸರಕಾರ ತಿರಸ್ಕಾರ ಅಥವಾ ಕಾರಣ ಕೇಳಿ ವಾಪಸ, ಗೊಂದಲ:

Central government rejects or asks for reasons, confusion:

ಜಾಹೀರಾತು


*ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆಗೆ ಕಳಿಸಿದ್ದ ಕರ್ನಾಟಕ ರಾಜ್ಯ ಸರಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿತ್ತು ಆದರೂ ಲಿಂಗಾಯತರು ವಿರೋಧ ಮಾಡಿಲ್ಲ: ವಿಶ್ರಾಂತ ನ್ಯಾಯಮೂರ್ತಿ ಸನ್ಮಾನ್ಯ ಶ್ರೀ ನಾಗಮೋಹನದಾಸ. ( ಶರಣ ಕಮ್ಮಟ ಬಸವಕಲ್ಯಾಣ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣ)* *ನಾನು ಜಸ್ಟಿಸ್ ನಾಗಮೋಹನದಾಸ್ ಅವರ ಜೊತೆ ಚರ್ಚೆ ಮಾಡಿದ್ದೆ, ಅವರು ಹೇಳಿದ್ದು ಮಾನ್ಯತೆ ಕೇಂದ್ರ ಸರಕಾರ ವಾಪಿಸ ಕಳಿಸಿಲ್ಲಾ ಅದು ಮೃದುವಾಗಿ " it may not be possible for the Ministry to acced the request of Government of Karnataka" ಎಂದು ಹೇಳಿದೆ ಅಂದರೆ ನಿಮ್ಮ ಪ್ರಸ್ತಾವ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ, ಅಂದರೆ ಇದರ ಅರ್ಥ ತಿರಸ್ಕಾರ ಆಗುತ್ತದೆ.* *ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ತಿರಸ್ಕಾರ ಆಗಿದೆ ಎಂದು ನಾವು ದಿಲ್ಲಿಯಲ್ಲಿ ರಾಲಿ ಮಾಡುತ್ತಿದ್ದಾಗ ಸನ್ಮಾನ್ಯ ಶ್ರೀ ಡಾ ಎಂ ಬಿ ಪಾಟಿಲ ಫೋನ್ ಮುಖಾಂತರ ಹೇಳಿದರು, ಕೂಡಲೇ ನಾನು ಪೂಜ್ಯ ಜಗದ್ಗುರು ಡಾ ಮಾತೆ ಮಹಾದೇವಿ ಅವರಿಗೆ ವೇದಿಕೆ ಮೇಲೆ ತಿಳಿಸಿದ್ದೆ, ಹಾಗು ಆಘಾತ ಮಾಡಿಕೊಳ್ಳ ಬೇಡಿ ನಾವು ಹೋರಾಟ ಮಾಡೋಣ ಎಂದು ಧೈರ್ಯ ತುಂಬಿದ್ದೆ. ಮಾತಾಜಿ ನೀವೇ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿ ಹಾಗು ಈ ಸುದ್ದಿ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲರಿಗು ತಿಳಿಸಿ ಎಂದು ಸೂಚಿಸಿದ್ದರು. ನಾನು ಕೇಂದ್ರ ಸರಕಾರದ ಪತ್ರವನ್ನು ಓದಿದ್ದೆ, ಅದರಲ್ಲಿಯೂ ನಯವಾಗಿಯ ಒಪ್ಪುವುದಿಲ್ಲ ಎಂದು ಹೇಳಿದ್ದಲ್ಲದೆ, ಕೆಲವು ಕಾರಣಗಳು ತಿಳಿಸಿದ್ದರು.*
ಅದೇನೆಂದರೆ:
1) ಸರಕಾರವು ಇದಕ್ಕಿಂತ ಮೊದಲು ಲಿಂಗಾಯತ ವೀರಶೈವ ಧರ್ಮಕ್ಕೆ ಮಾನ್ಯತೆ ಪ್ರಸ್ತಾವ ಪರಿಗಣನೆ ಮಾಡಿತ್ತು, ಆದರೆ ಭಾರತ ದೇಶದ 1871ಜನಗಣತಿ ಹಾಗು ದೇಶದ ಪ್ರಥಮ ಜನಗಣತಿಯಲ್ಲಿ ಕೂಡ ಲಿಂಗಾಯತವನ್ನು ಹಿಂದೂ ಧರ್ಮದಲ್ಲಿ ವರ್ಗೀಕರಿಸಲಾಗಿತ್ತು ಹಾಗು ಲಿಂಗಾಯತವನ್ನು ಹಿಂದೂ ಧರ್ಮದ ಒಳಪಂಗಡ ಎಂದು ಪರಿಗಣಿಸಲಾಗಿತ್ತು.
2) ಒಂದು ವೇಳೆ ಲಿಂಗಾಯತ ವೀರಶೈವ ಹಿಂದೂ ಧರ್ಮ ಪಂಗಡ ಅಲ್ಲದೆ ಪ್ರತೆಕ ಧರ್ಮ ಎಂದು ಒಪ್ಪಿದರೆ, ಲಿಂಗಾಯತ ವೀರಶೈವದಲ್ಲಿ ಬರುವ ಪರಿಶಿಷ್ಟ ಜಾತಿ ಒಳಪಂಗಡಗಳು ತಮ್ಮ ಪರಿಶಿಷ್ಟ ಜಾತಿ ಮೀಸಲಾತಿಯಿಂದ ವಂಚಿತರಾಗುತ್ತಾರೆ, ಅವರ ಮೇಲೆ ಅನ್ಯಾಯ ಆಗುತ್ತದೆ.
ಉಲ್ಲೇಖಗಳು
a) ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕೇಂದ್ರ ಗೃಹ ಸಚಿವಾಲಯದ ಪತ್ರ ಸಂಖ್ಯ ದಿನಾಂಕ 14/11/2013 ರ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ಅವರ ಪತ್ರವನ್ನು ಪರಿಗಣನೆ ಮಾಡುತ್ತದೆ.
b) ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಆದೇಶ ಪರಿಗಣಿಸಲಾಗಿ, ಆದರಿಂದ ಸಚಿವಾಲಯ ಕರ್ನಾಟಕ ಸರಕಾರದ ಪ್ರಸ್ತಾವವನ್ನು ಒಪ್ಪಲ್ಲು ಸಾಧ್ಯ ಇಲ್ಲ.
*ಇಷ್ಟು ಸರಳವಾಗಿ ಮೃದುವಾಗಿ ಕೆಲವು ಕಾರಣಗಳನ್ನು ಕೊಟ್ಟು ಕರ್ನಾಟಕ ಸರಕಾರದ ಲಿಂಗಾಯತ ಮತ್ತು ವೀರಶೈವ ಬಸವ ತತ್ವ ಪಾಲಿಸುವವರನ್ನು ಅಲ್ಪಸಂಖ್ಯಾತ ಮೀಸಲಾತಿ ಒಪ್ಪಲು ಆಗಲ್ಲ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ತಿರಸ್ಕಾರ ಮಾಡಿದ್ದಾರೆ, ಇದು ವಾಪಸ ಕಳಿಸಿಲ್ಲ.* *ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರಕಾರ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಲುವಾಗಿ ನ್ಯಾಯಮೂರ್ತಿ ಸನ್ಮಾನ್ಯ ಶ್ರೀ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ವರದಿ ನೀಡಲು ಆಗ್ರಹಿಸಿತ್ತು. ಸಮಿತಿಗೆ ಲಿಂಗಾಯತ ಧರ್ಮ ಬಗ್ಗೆ ಮತ್ತು ವೀರಶೈವ ಪಂಗಡದವರು ತಮ್ಮಲ್ಲಿ ಇರುವ ಮಾಹಿತಿಗಳು ಮತ್ತು ಪುರಾವೆ ಒದಗಿಸಿ ಕೊಟ್ಟಿದ್ದರು, ಅದರಂತೆ ಜಸ್ಟಿಸ್ ನಾಗಮೋಹನದಾಸ ಅವರು ವರದಿ ಸಲ್ಲಿಸಿ, ಲಿಂಗಾಯತ ಮತ್ತು ವೀರಶೈವ ಬಸವ ತತ್ವ ಪಾಲಿಸುವವವರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡ ಬಹುದು ಎಂದು ಸೂಚಿಸಿತ್ತು. ಅದರಂತೆ ಸಿದ್ದರಾಮಯ್ಯವರು ಸಂಪುಟ ಸಭೆಯಲ್ಲಿ ಪ್ರಸ್ತಾವ ಸರ್ವಾನುಮತಿಯಿಂದ ಒಪ್ಪಿಗೆ ನೀಡಿ ಮಾನ್ಯತೆಗೆ ಕೇಂದ್ರ ಸರ್ಕಾರಕೆ ಸಲ್ಲಿಸಿತ್ತು.* *ಜಸ್ಟಿಸ ನಾಗಮೋಹನದಾಸ ಅವರು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ್ದಾರೆ ಎಂದು ಘಂಟಾಘೋಷವಾಗಿ ಹೇಳಿದರು, ಕೆಲವು ಲಿಂಗಾಯತ ಸಂಘಟನೆಗಳು ಹಾಗು ಲಿಂಗಾಯತ ನಾಯಕರು ಒಪ್ಪುತ್ತಿಲ್ಲ, ಏಕೆ? ಇದರಿಂದ ಲಾಭ ನಷ್ಟ ಏನಾಗುತ್ತದೆ? ಜಸ್ಟಿಸ್ ನಾಗಮೋಹನದಾಸ ಸತ್ಯ ಹೇಳುತ್ತಿದ್ದಾರೆ ಅದನ್ನು ಒಪ್ಪದೇ ಇರುವದು ನಮ್ಮ ಲಿಂಗಾಯತರ ತಿಳುವಳಿಕೆ ಕೊರತೆ ಎದ್ದು ಕಾಣುತ್ತದೆ . 2018ರಲ್ಲಿಯೇ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದ್ದಾರೆ ಆದರೆ 6 ವರ್ಷ ಆದರೂ ಅದರ ಬಗ್ಗೆ ನಾವು ಪರಾಮರ್ಶೆ ಮಾಡುತ್ತಿಲ್ಲ, ಇನ್ನು ಪ್ರಸ್ತಾವ ವಾಪಸ ಆಗಿದೆ ಅಥವಾ ತಿರಸ್ಕಾರ ಆಗಿದೆ ಎನ್ನುವ ಗೊಂದಲದಲ್ಲಿ ಇದ್ದೆವು. ಲಿಂಗಾಯತರಲ್ಲಿ ಹಲವಾರು ಜ್ಞಾನಿಗಳು, ಪರಿಣಿತರು, ಉಚ್ಚ ನ್ಯಾಯಾಲಯದ ಪ್ರತಿಷ್ಠಿತ ವಕೀಲರು ಇದ್ದಾರೆ, ಐಎಎಸ್ ಐಪಿಎಸ್ ಅಧಿಕಾರಿಗಳು ಇದ್ದಾರೆ, ಆದರೂ ಒಂದು ಪತ್ರದ ಅರ್ಥ ತಿಳಿದುಕೊಳ್ಳಲು ಆಗುತ್ತಿಲ್ಲ.* *ಇವಾಗದರು ಗೊಂದಲದಿಂದ ಹೊರಬಂದು ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಬಗ್ಗೆ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಅನ್ನೋದು ಎಲ್ಲರೂ ಸೇರಿ ನಿರ್ಧಾರ ಮಾಡಬೇಕು.*


ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Lingayat religion -an over view

Basaveshwara established Lingayat religion in the 12th century in order to free the society from certain ill practices prevalent in the Hindu religion at that time. As such, it is  entirely different  from the Hindu religion.  The structure of  Lingayat religion, suggests that it is intrinsically an Independent religion like Christianity, Sikhism, Jainism, Buddhism, Islam and Parsi.
The Lingayats, under Basavanna’s leadership, were the first to establish Anubhava Mantapa, an open forum for free thinking. This can be now recognised and regarded as the first democratic parliament of the world.
It is moulded on free thinking, liberty, equality, fraternity, kindness towards all beings, empathy and all democratic principles, right from its inception, and thus has all the merits to be recognised as a religion on par with the best religions of the world.
However, it is strange and unfortunate that the Lingayat religion, an altogether reform based movement started by Sri Basavanna, couldn’t get the official status of a religion. This is in spite of the fact that several executive, judicial and public institutions at the Governmental level have unanimously agreed to regard this as a religion and have even recommended to the Governments to grant the religion status at various times.
It is also discouraging and disappointing to know that the demand for separate religion status for Lingayats is leading to divergent views within the community from religious heads and political leaders.
It may be worth mentioning here the supporting evidences and facts related to the demands made earlier at different levels.
During pre-independent days, the Chief Census Officer of the Bombay Province under the British rule, Reginald Edward Enthoven, had explained how Lingayats were different from Hindus.
“In the fifth edition of ‘Encyclopaedia of Religion of Ethics’ by R.E. Enthovan published in 1951, pages 69 to 75 have information on Lingayats, where the author says Lingayats are not Hindus,”
“In the book ‘Hindu manners, customs and ceremonies’ written by Abbe J.A. Dubois, published in 1821, it is mentioned that Lingayats’ philosophy is different from Hindus. A British Survey committee (on fixing age limit for electorate) headed by Lord South Borough had listed Lingayats as a separate community in 1919.”
Supreme Court judgement (AIR 1966. SC 1190: 1966-1 SCR 134 dated 14/1/1966) delivered by Justice Gajendragadkar P.V. in which the judge has said “Buddha started Buddhism, Mahaveera founded Jainism, Basava became the founder of Lingayat religion….” (in paragraph 264).
“In Bombay High Court Case No. (1943) 45 UMLR 992 dated 12/2/1943 Judge Divatia has said: Lingayat faith is altogether independent of Hindu religion, which is primarily based on the authoritativeness of the Vedas and Varnashrama. And Lingayat religion does not accept Vedas and Varnashrama and repudiates the distinction of castes. It is said to be non-Hindu,”
The Akhila Bharata Veerashaiva Mahasabha, Davangere in 1940, passed a resolution saying “Lingayats are not Hindus”. Slain researcher M.M. Kalburgi has mentioned it in his “Marga” series of research works. Kalburgi.
Barristor M S Sardar was happened to be the president of Akhil Bharat *Veerashaiva Mahasabha 1940 -1941 .He strongly urged to change the name of organisations from Veerashaiva to Lingayat       
In addition to these sincere attempts in the past steretching to several decades, it is significant to note that the state level highest body Veerashaiva Mahasabha in Karnataka made serious repeated attempts to get Veerashaiva/Lingayat mentioned as a separate religion during the census. However these pleas were rejected by the Registrar General of India in 2013. However, at times the Government of Karnataka did respond in a proactive way. It appointed Justice Sri Nagamohandas, Commissioner in 2018  to submit the report for the Independent religion status and monority status for Lingayats. Accordingly, Justice Sri. Nagamohandas  submitted the report. The then Govt of Karnataka called cabinet meeting and took decision to recommend Central Govt and Minority Authority to grant minority status to Lingayats. While keeping its promise, the state Government submitted its cabinet decision and recommendations,  the Central Govt and Minority Authority  rejected  the request.
In the last 6 years, there are no further efforts to appeal or to continue the movement . Officials have kept saying to all Lingayats that Cabinet decision has not refused the submitted application. It seems, the Central Govt has also asked for modification in the submitted application.
In the war of ego between terry the officials and the activists of the Lingayat organisations, the officials may apear to be the the rulers though in true sense the activists  are the winners.
In the present context, there is a need to support the appeal and the movement fighting for  the religion status for Lingayat with relevant  documents. There is also a need for also supporting the demand for minority status for Lingayat religion.


DR SHASHIKANT  PATTAN   Basava understanding and research centre Ramdurg Pune

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.