Breaking News

ಅನ್ಸಾರಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆ

ಸಿದ್ದ ರಾಮಯ್ಯ ನವರ ಸರಕಾರ ಮುಂದುವರಿಕೆಗೆ ಲೋಕ ಸಮರದ ಟಾಸ್ಕ್ ನೀಡಿದ ಹೈಕಮಾಂಡ್ :ಇಕ್ಬಾಲ್ ಅನ್ಸಾರಿ



ಗಂಗಾವತಿ: ಈ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದರೆ ಅವರು ಸಿಎಂ ಆಗಿ ಮುಂದುವರಿಯಲಿದ್ದು ಇದಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ತಾವು ಹಳೆಯದನ್ನು ಮರೆತು ಬೆಂಬಲಿಸಿ ಅಧಿಕ ಮತ ಹಾಕಿಸುವುದಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ಲೋಕ ಚುನಾವಣೆಯ ನಿಮಿತ್ತ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮಾಜಿ ಸಂಸದ ಎಚ್.ಜಿ.ರಾಮುಲು ನಿವಾಸ ಒಂದು ಮಠವಾಗಿ ಪರಿವರ್ತನೆಗೊಂಡಿದೆ.ಈ ಮಠಕ್ಕೆ ಎಲ್ಲಾ ಪಕ್ಷದವರು ಭೇಟಿ ನೀಡುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರು ಅಲ್ಲಿಗೆ ಹೋಗಿ ಕಾಲು ಮುಗಿಯುವುದರಿಂದ ಮತ ಬೀಳುವುದಿಲ್ಲ. ಚುನಾವಣೆ ಮಾಡುವ ಕಲೆ ನನಗೆ ಕರಗತವಾಗಿದೆ. ಸಿದ್ದರಾಮಯ್ಯನವರು ಕಳೆದೆ ವಾರ ಬೆಂಗಳೂರಿಗೆ ಕರೆಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವ ಭರವಸೆ ನೀಡಿದ್ದಾರೆ.ನಾನು ಸಿದ್ದರಾಮಯ್ಯನವರ ಪರಮ ಆಪ್ತ ಅವರು ಹೇಳಿದಂತೆ ಕಾಂಗ್ರೆಸ್ ಅಭ್ಯರ್ಥಿಗೆ ನನ್ನ ಹಾಗೂ ನನ್ನವರ ಬೆಂಬಲವಿರುತ್ತದೆ. ಎಚ್.ಆರ್.ಶ್ರೀನಾಥ ಸೇರಿ ನಮ್ಮ ಕಾಂಗ್ರೆಸ್ ಬಹುತೇಕ ಮುಖಂಡರು ಬಳ್ಳಾರಿ ರೆಡ್ಡಿಯಿಂದ ಹಣ ಪಡೆದು ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿಗೆ ಬೆಂಬಲಿಸಿದ್ದಾರೆ. ನಾನು ನೇರ ನಿಷ್ಠುರ ವ್ಯಕ್ತಿ ಜನ ಸಾಮಾನ್ಯರ ಕಷ್ಟ ಸುಖ ನನಗೆ ಗೊತ್ತು. ಆದ್ದರಿಂದ ರಾಜಶೇಖರ ಹಿಟ್ನಾಳ ಗೆದ್ದರೆ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರಿಯಲಿದ್ದಾರೆ. ಆದ್ದರಿಂದ ಮೋಸ ಮಾಡುವವರ ಮನೆಗೆ ಹೋಗಿ ನಮಸ್ಕಾರ ಮಾಡಬೇಡಿ, ನನ್ನನ್ನು ನಂಬಿ ಗೆಲ್ಲಿಸಿಕೊಂಡು ಬರುತ್ತೇನೆ.ಗೆದ್ದ ನಂತರ ನಮ್ಮ ಕೆಲಸ ಮಾಡಿಕೊಡಬೇಕು. ಬಿಜೆಪಿಯವರ ಮಾತು ಕೇಳ ಬಾರದು. ಲೋಕ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ನನ್ನನ್ನು ಭೇಟಿಯಾಗಲು ಸಮಯ ಕೇಳಿದ್ದರು. ನಾನು ಕೊಟ್ಟಿಲ್ಲ.ನೀವು ಸಹ ಬೇರೆಯವರ ಮನೆಗಳಿಗೆ ಹೋಗುವ ಸಂದರ್ಭದಲ್ಲಿ ನನ್ನ ಗಮನಕ್ಕೆ ತರಬೇಕು.ಜನಾರ್ದನರೆಡ್ಡಿಯವರ ಆಟ ಬಳ್ಳಾರಿಯಲ್ಲಿ ನಡೆಯಬಹುದು ಗಂಗಾವತಿಯಲ್ಲಿ ಅವರ ಆಟ ನಡೆಯುವುದಿಲ್ಲ.ಕೇಸ್ ಗಳ ಖುಲಾಸೆಗಾಗಿ ಆಮಿತಾ ಶಾ ಮೂಲಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಗಂಗಾವತಿ ಜನರನ್ನು ಭ್ರಮಾಲೋಕದಲ್ಲಿ ತೇಲಿಸಿ ಮಂಗಮಾಯ ಮಾಡಿ ಈಗ ಊರು ಬಿಡುತ್ತಿದ್ದಾರೆ. ಗೆಲ್ಲಿಸಿದ ತಪ್ಪಿಗೆ ಜನರು ಪರಿತಪಿಸುತ್ತಿದ್ದಾರೆ. ಇದುವರೆಗೂ ನಗರ ಗ್ರಾಮೀಣ ಭಾಗದಲ್ಲಿ ಶಾಸಕ ರೆಡ್ಡಿ ಏನು ಕೆಲಸ ಮಾಡಿಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವುದು ದೊಡ್ಡ ಸಾಧನೆಯಾಗಿದೆ. ಎಚ್.ಆರ್.ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ, ಶಾಮೀದ್ ಮನಿಯಾರ್, ಹನುಮಂತಪ್ಪ ಅರಸಿನಕೇರಿ ಹಾಗೂ ಆಸೀಫ್ ಹಾಗೂ ನಗರಸಭೆಯ ಕೆಲ ಸದಸ್ಯರ ಹೆಸರು ಪ್ರಸ್ತಾಪಿಸಿ ರೆಡ್ಡಿಯಿಂದ ಲಾಭ ಮಾಡಿಕೊಂಡವರು ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ, ಸಚಿವ ಶಿವರಾಜ್ ತಂಗಡಗಗಿ, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ, ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಹುಸೇನಸಾಬ ದೋಟಿಹಾಳ್, ಧುರೀಣೆ ಲಲಿತಾರಾಣಿ ಶ್ರೀರಂಗದೇವರಾಯಲು, ಸಿದ್ದಪ್ಪ ನೀರಲೂಟಿ, ಕೆ.ವಿ.ಬಾಬು, ಇಲಿಯಾಸ್ ಬಾಬಾ, ಕಾಸಿಂಸಾಬ ಗದ್ವಾಲ್,ನೀಲಪ್ಪ ಸಣ್ಣಕ್ಕಿ, ಯಮನಪ್ಪ ವಿಠಲಾಪೂರ, ರ‍್ಹಾಳ ರುದ್ರೇಶ, ಯಮನಪ್ಪ ದಳಪತಿ, ಎಫ್.ರಾಘವೇಂದ್ರ, ಫಕೀರಪ್ಪ ಎಮ್ಮಿ, ಅಮರೇಶ ಗೋನಾಳ,ಟಿ,ಜನಾರ್ದನ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ, ವಿಶ್ವನಾಥ ಪಾಟೀಲ್ ಕೇಸರಟ್ಟಿ, ಆನಂದ, ಮನೋಹರ ಸ್ವಾಮಿ, ನೀಲಕಂಠ ಹೊಸಳ್ಳಿ, ಗಿರೀಶ ಗಾಯಕವಾಡ, ಪರಶುರಾಮ ಕಿರಿಕಿರಿ ಮುಂತಾದವರಿದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.