Breaking News

ಕಲಿಕೆಯ ಭವಿಷ್ಯ: ಸಾಮರ್ಥ್ಯ ಆಧಾರಿತ ಶಿಕ್ಷಣ ಮತ್ತು ಕೌಶಲ್ಯ ಪಾಂಡಿತ್ಯ

The future of learning: Competency-based education and skill mastery


ಗಂಗಾವತಿ: ನಗರದ ಪ್ರತಿಷ್ಟಿತ ಎಸ್. ಕೆ. ಎನ್. ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿಯ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗ ಮತ್ತು ಎಂ.ಎಸ್.ಎಂ.ಎಸ್ ವೃತ್ತಿಪರ ತರಬೇತಿ ಕೇಂದ್ರ, ಮರಳಿ ಹಾಗೂ ಕಾಲೇಜಿನ ಆಂತರಿಕ ಭರವಸೆ ಕೋಶ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ರಾಜ್ಯ ಮಟ್ಟದ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿ ಮತ್ತು ಉದ್ಘಾಟಕರಾಗಿ ಆಗಮಿಸಿದ ವಿರೂಪಾಕ್ಷಯ್ಯ ಸ್ವಾಮಿ ಎಚ್.ಎಂ, ವ್ಯವಸ್ಥಾಪಕ ನಿರ್ದೇಶಕರು, ಎಂ.ಎಸ್.ಎಂ.ಎಸ್. ವೃತ್ತಿಪರ ತರಬೇತಿ ಕೇಂದ್ರ, ಮರಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕೌಶಲ್ಯ ತರಬೇತಿ ತೊರಿಕೆಯಾಗದೆ ಅದರ ಸಿದ್ದಾಂತದ ಪರಿಚಯದಂತೆ ಮುನ್ನೆಡೆಯಬೇಕು ಮತ್ತು ಕೇಂದ್ರ ಸರ್ಕಾರದ ಕೌಶಲ್ಯ ಬಾರತ ಯೊಜನೆಯಡಿಯಲ್ಲಿ ಬರುವ ವೃತ್ತಿಪರ ಕೋರ್ಸ್ ಅನ್ನು ತೆಗೆದುಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಕೊಳ್ಳಬೇಕು ಹಾಗೂ “ಕಲಿಕೆಯ ಭವಿಷ್ಯ: ಸಾಮರ್ಥ್ಯ ಆಧಾರಿತ ಶಿಕ್ಷಣ ಮತ್ತು ಕೌಶಲ್ಯ ಪಾಂಡಿತ್ಯದಿಂದಲೆ ಎಂದು ತಮ್ಮ ಉದ್ಘಾಟಣ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾಲೇಜಿನ ಹಿರಿಯ ಪ್ರಾದ್ಯಪಕರಾದ ಶ್ರೀಮತಿ ಜಗದೇವಿ ಕಲಶೆಟ್ಟಿ ರವರ ಅಧ್ಯಕ್ಷತೆಯ ನುಡಿಯಲ್ಲಿ, ಆದಿಕಾಲದಿಂದಲು ಮನುಕುಲಕ್ಕೆ ಕೌಶಲ್ಯ ಪರಿಚಯವಿತ್ತು ಅದರ ಸದ್ಬಲಕೆ ಕ್ರೆಮೆಣ ಕಡಿಮೆಯಾಗಿದೆ ಆದುದರಿಂದ ವಿದ್ಯಾರ್ಥಿಗಳು ಇಂತಹ ತರಬೇತಿಯೊಂದಿಗೆ ಕಲಿಕೆ ಆರಂಭಿಸಬೇಕು ಎಂದು ಹೇಳಿದರು. ವೇದಿಕೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ.ವೈ.ಎಸ್,ವಗ್ಗಿ ಆಂತರಿಕ ಭರವಸೆ ಕೋಶ ಸಂಚಾಲಕರು ತಮ್ಮ ನುಡಿಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮ ಭಹಳ ಮುಖ್ಯ ಅದರ ಜೊತೆಗೂಡಿ ಸಾಗಿದಲ್ಲಿ ವಿದ್ಯಾರ್ಥಿಗಳ ಜೀವನ ಯಶಸ್ವಿಗೆ ಕಾರಣವಾಗುತ್ತದೆ ಎಂದು ಹೇಳಿದರು. ಡಾ.ಸೆಲ್ವರಾಜ ಸಿ, ಮುಖ್ಯಸ್ಥರು ಗ್ರಂಥಾಲಯ ವಿಬಾಗ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ವಿದ್ಯಾರ್ಥಿನಿ ಪುಷ್ಪ ಮತ್ತು ಬಸುವರಾಜ ಎಲ್ಲರಿಗೂ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಜಾಜಿ ದೆವೇಂದ್ರಪ್ಪ, ಡಾ.ಇಮ್ಮಾನುವೇಲ್ ಸಂಜಯಾನಂದ, ಶ್ರೀ ಶಿವಕುಮಾರ, ಡಾ.ಶಿವರಾಜ ಗುರಿಕಾರ, ಇತರ ಪ್ರಾದ್ಯಾಪಕರು ಇದ್ದರು. ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

About Mallikarjun

Check Also

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಕಿರುಕುಳ ತಪ್ಪಿಸಿ..!

12೦೦ ಗ್ರಾಹಕರಿಗೆ ಜೀವ ಭದ್ರತೆ ಒದಗಿಸಬೇಕೆಂದು ರಕ್ಷಣಾ ವೇದಿಕೆ ಮನವಿ: ಗಂಗಾವತಿ: 2018ನೇ ಸಾಲಿನಲ್ಲಿ lಗಂಗಾವತಿ ತಾಲೂಕು ಕರ್ನಾಟಕ ಗ್ರಾಮೀಣ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.