Breaking News

ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡು ಮಕ್ಕಳ ಜೀವಕ್ಕೆ ಕುತ್ತು

Government school building is dilapidated and children’s lives are endangered

ಜಾಹೀರಾತು

ಗಂಗಾವತಿ ,ಆ-23: ಸರ್ಕಾರಿ ಶಾಲಾ ಕಟ್ಟಡ ಶಿಥಿಲಗೊಂಡು ಮಕ್ಕಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ -ಪರಶುರಾಮ್ ಒಡೆಯರ್ ವಕೀಲರು.

2004-05 ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಕಟ್ಟಡವು ಪೂರ್ಣವಾಗಿ ಶಿಥಿಲಗೊಂಡಿದ್ದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೀವಕ್ಕೆ ಕುತ್ತು ಬರುವಂತಾಗಿದೆ.ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪಾಠಗಳನ್ನು ಆಲಿಸುವ ಸ್ಥಿತಿ ಆಗಿದೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಮರ್ ಭಗತ್ ಸಿಂಗ್ ನಗರ್,

ಗಂಗಾವತಿಯ ಶಾಲೆಯು ಕೇವಲ 15 ರಿಂದ 20 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು, ಈ ಶಾಲೆಯು ಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಆಗಿರುವುದು ಇಲ್ಲಿ ಕಂಡುಬರುತ್ತಿದೆ. ಕೇವಲ 15 ವರ್ಷಗಳಲ್ಲಿ ಈ ಶಾಲೆಯ ಮೇಲ್ಚಾವಣಿಯು ಬೀಳುವ ಸ್ಥಿತಿಯಲ್ಲಿ ನಿರ್ಮಾಣವಾಗಿದೆ. ಈ ಶಾಲೆಯಲ್ಲಿ ಸುಮಾರು 80 ರಿಂದ 100 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಜೀವವನ್ನೂ ಕೈಯಲ್ಲಿ ಹಿಡಿದು ಕೂಡುವಂತಾಗಿದೆ ಎಂದು ಪರಶುರಾಮ್ ಒಡೆಯರ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಶಿಥೀಲ ಕಟ್ಟಡವು ಯಾವಾಗ ಬೀಳುತ್ತದೆಯೋ ತಿಳಿಯದು. ಇಲ್ಲಿರುವ ಎಸ್ ಡಿ ಎಂ ಸಿ ಸದಸ್ಯರುಗಳೆಲ್ಲರೂ ಈಗಾಗಲೇ ಮನವಿ ಸಲ್ಲಿಸಿದರು ಸಹ ಸಾರ್ವಜನಿಕ ಶಿಕ್ಷಣ ಇಲಾಖೆ ಇತ್ತ ಕಡೆ ಗಮನ ಹರಿಸದೆ ಇರುವುದು ಸೂಚನೆಯ ಸಂಗತಿ.

ಈ ವರ್ಷದಲ್ಲಿ ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಆದರೆ ಈ ಶಾಲೆಯಲ್ಲಿ ಕೇವಲ ಎರಡು ಕೊಠಡಿಗಳಿಗೆ ಮಾತ್ರ ಇರುವುದು ಕಂಡು ಬಂದಿದೆ. ಸುಮಾರು 80 ರಿಂದ 100 ವಿದ್ಯಾರ್ಥಿಗಳು ಇರುವ ಈ ಶಾಲೆಯ ಪಕ್ಕದಲ್ಲಿರುವ ದೇವಸ್ಥಾನ ಮುಂಭಾಗದಲ್ಲಿ ಪಾಠಗಳನ್ನು ಮಾಡುವ ದುಸ್ಥಿತಿ ಉಂಟಾಗಿದೆ.

ಈ ಶಾಲೆಯಲ್ಲಿ ಒಬ್ಬ ಮುಖ್ಯ ಶಿಕ್ಷಕ ಹಾಗೂ ಒಬ್ಬರು ಸಹ ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರವು ಶಿಕ್ಷಣಕ್ಕೆ ತುಂಬಾ ಒತ್ತು ಕೊಡುತ್ತಿದ್ದು ಆದರೆ ಅದು ಯಾವುದು ಕೂಡ ಈ ಬಡ ಸರ್ಕಾರಿ ಶಾಲೆಗಳಿಗೆ ದೊರಕದೆ ಅನ್ಯಾಯವಾಗುತ್ತಿದೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಇಲ್ಲಿನ ಪರಿಸ್ಥಿತಿಯನ್ನು ಅರಿತು ಈ ಶಾಲೆಗೆ ಅನುದಾನಗಳನ್ನು ಬಿಡುಗಡೆ ಮಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.

ಇಂದಿನ ವರ್ಷಗಳಲ್ಲಿ ಈ ಶಾಲೆಯಲ್ಲಿ ಸುಮಾರು 150 ರಿಂದ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು ಎಂದು ಒಬ್ಬ ಎಸ್‌ಡಿಎಂಸಿ ಸದಸ್ಯರು ತಿಳಿಸಿದರು. ಆದರೆ ಇಂತಹ ಬೀಳುವ ಸ್ಥಿತಿಯಲ್ಲಿರುವ ಕಟ್ಟಡವನ್ನು ನೋಡಿ ಇಲ್ಲಿರುವ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಉಂಟಾಗುತ್ತಿದೆ ಎಂದು ಹೇಳಿದರು.
ಈ ಶಾಲೆಗೆ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಬಂದು ಇತ್ತಕಡೆ ಗಮನ ಹರಿಸಬೇಕೆಂದು ಇಲ್ಲಿನ ಸ್ಥಳೀಯರು ಕೇಳಿಕೊಂಡರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.