Distribution of Param No. 03 from Kukanur papam to the wards.

ಸಾರ್ವಜನಿಕರು ಸಪ್ತಾಹ ಸದುಪಯೋಗ ಪಡಿಸಿಕೊಳ್ಳಿ : ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ,,
ಕೊಪ್ಪಳ : ಕುಕನೂರು ಪಟ್ಟಣದ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಪಟ್ಟಣ ಪಂಚಾಯತನಿಂದ ನವೆಂಬರ್ 25.11.2024ರಿಂದ ಡಿಸೆಂಬರ್ 03.12.2024ರ ವರೆಗೆ ಫಾರಂ ನಂ.03 ವಿತರಿಸಲು ವಿವಿಧ ವಾರ್ಡ್ ಗಳಲ್ಲಿ ಸಪ್ತಾಹ ಹಮ್ಮಿಕೊಂಡಿದ್ದು ಇದರ ಸದುಪಯೋಗವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೇಳಿದರು.
ಅವರು ಪಟ್ಟಣದ 17ನೇ ವಾರ್ಡ್ ಇಟಗಿ ಭೀಮಾಂಬಿಕಾ ದೇವಸ್ಥಾನದ ಆವರಣದಲ್ಲಿ ಸೋಮವಾರದಂದು 1ಮತ್ತು 2ನೇ ವಾರ್ಡ್ ನವರಿಗೆ ಇ- ಆಸ್ತಿ ನೀಡುವ ಕಾರ್ಯ ಹಾಗೂ ತೆರಿಗೆ ಬಾಕಿ ವಸೂಲಾತಿ, ನೀರಿನಕರ, ಬಾಕಿ ವಸೂಲಾತಿ ಸಪ್ತಾಹ ಕಾರ್ಯ ಪ್ರಾರಂಭ ಮಾಡಲಾಗಿದ್ದು, ಪಟ್ಟಣದ ಪ್ರತಿಯೊಬ್ಬರೂ ಮುಂದಿನ ಒಂದು ತಿಂಗಳ ಒಳಗಾಗಿ ಕಡ್ಡಾಯವಾಗಿ ಅರ್ಜಿ ನಮೂನೆ ಜೊತೆ ದಾಖಲಾತಿಗಳನ್ನು ನೀಡಿ ಇ- ಆಸ್ತಿಯನ್ನು ಪಡೇಯಬೇಕು ಎಂದು ತಿಳಿಸಿದರು.
ನಂತರದಲ್ಲಿ 17 ನೇ ವಾರ್ಡ್ ಬಸವೇಶ್ವರ ನಗರದ ನಿವಾಸಿ ಅಣ್ಣಿಗೇರಿ ವೀರಣ್ಣ ಮಾತನಾಡಿ ಸರಕಾರದಿಂದ ನೀಡಿರುವ ಪ್ಲಾಟ್ ಗಳಿಗೆ ಸಂಬಂಧಿಸಿದಂತೆ ಪಾರಂ ನಂ.03 ಕೊಡುತ್ತಿದ್ದು ಎನ್ಎ ಆಗಿ 25-30 ವರ್ಷ ಆದಂತಹ ಪ್ಲಾಟ್ ಕೆಜೆಪಿ ಇಲ್ಲಾ ಎಂದು ರಾಜ್ಯದೆಲ್ಲೆಡೆ ಸಮಸ್ಯೆಯಾಗುತ್ತಿದ್ದು, ಈ ಸಮಸ್ಯೆ ಬಗೆ ಹರಿಸಿದಲ್ಲಿ ಪಂಚಾಯತಿಗಳಿಗೆ ಆದಾಯವು ಹೆಚ್ಚುವುದಲ್ಲದೇ ಗ್ರಾಹಕರಿಗೂ ಅನೂಕೂಲವಾಗಲಿದೆ. ಎಲ್ಲಾ ಪ್ಲಾಟುಗಳಿಗೂ ಪಾರಂ ಪಾರಂ ನಂ-03 ಕೋಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾರ್ಡ್ ನಿವಾಸಿಗಳಾದ ಬಸಪ್ಪ ದಿವಟರ್, ವೀರಪ್ಪ ನವಲಗುಂದ, ಶೇಖರಡ್ಡಿ ಸಿದ್ದರಡ್ಡಿ, ಸೋಮಣ್ಣ ಮೂಲಮನಿ, ಮಹಾಂತೇಶ ಅಂಗಡಿ, ಯಮನಪ್ಪ ಆರ್ಯರ್ ಇನ್ನಿತರರು ಇದ್ದರು.