ಹನುಮ ಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಬೇಕು: ಸಂಸದ ಹಿಟ್ನಾಳ್

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
District administration should make all preparations for Hanuman Mala immersion: MP Hitnal
  1. ಹನುಮ ಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಬೇಕು: ಸಂಸದ ಹಿಟ್ನಾಳ್
  2. ಡಿ.02.03 ರಂದು ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ.

ಗಂಗಾವತಿ: ಡಿ.02 ಮತ್ತು03ರಂದು ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಜರುಗುವ ಹನುಮಾನಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸರ್ವ ಸಕಲ ಸಿದ್ಧತೆಯನ್ನು ಕೈಗೊಳ್ಳುವಂತೆ ಸಂಸದ ಕೆ. ರಾಜಶೇಖರ ಹಿಟ್ನಾಳ್ ಹೇಳಿದರು.
ಅವರು ತಾಲೂಕಿನ ಹನುಮನಹಳ್ಳಿಯಲ್ಲಿರುವ ಡೆಲ್ ಮಾರ್ಟ್
ಹೋಟೆಲ್ ನಲ್ಲಿ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮದ ಪೂರ್ವ ಸಿದ್ಧತಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅವರ ವಾಹನಗಳ ಪಾರ್ಕಿಂಗ್, ವಸತಿ, ಸ್ನಾನಗ್ರಹ, ಅಂಜನಾದ್ರಿ ಬೆಟ್ಟಕ್ಕೆ ವಿದ್ಯುತ್ ಅಲಂಕಾರಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ಪಂಪಾಸರೋವರ,ಆದಿಶಕ್ತಿ ದೇವಾಲಯಗಳು, ಋಷ್ಯಮುಖ ಪರ್ವತ, ವಿರೂಪಾಪೂರಗಡ್ಡಿಯ ಹಳೆಯ ಸೇತುವೆ(ಆಕ್ವಿಡೆಕ್ಟ್) ಸ್ಮಾರಕಗಳಿಗೆ ವಿದ್ಯುತ್ ದೀಪ ಅಳವಡಿಸುವ ಕುರಿತು ಜಿಲ್ಲಾಡಳಿತ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು.
ಅಂಜನಾದ್ರಿ ಸುತ್ತಲಿರುವ ಪ್ರವಾಸಿ ತಾಣಗಳನ್ನು ಸಹ ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಮುಕ್ತ ಮಾಡಬೇಕು.ಹನುಮಮಾಲಾ ವಿಸರ್ಜನೆಗೆ ಆಗಮಿಸುವ ಭಕ್ತರು ಆನೆಗೊಂದಿ ಮತ್ತು ಅಂಜನಾದ್ರಿಯ ಸುತ್ತಲಿನ ಪ್ರವಾಸಗಳಿಗೆ ಹೋಗುವುದರಿಂದ ಸೂಕ್ತ ಸುರಕ್ಷತೆಯನ್ನು ಸಹ ಒದಗಿಸಬೇಕು. ಕಾರ್ಯಕ್ರಮಕ್ಕೆ ರಾಜ್ಯದಿಂದ ಸಚಿವರುಗಳು ಮತ್ತು ಉನ್ನತ ಅಧಿಕಾರಿಗಳು ಆಗಮಿಸುವುದರಿಂದ ಅವರ ಸ್ವಾಗತಕ್ಕೆ ಸೂಕ್ತ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು.ಡಿ.02,03 ರಂದು ಗಂಗಾವತಿ ಹೊಸಪೇಟೆ, ಕೊಪ್ಪಳ ಮಾರ್ಗವಾಗಿ ಪಾದಯಾತ್ರೆ ಮೂಲಕ ಕಿಷ್ಕಿಂಧಾ ಅಂಜನಾದ್ರಿಗೆ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಭದ್ರತೆ ವ್ಯವಸ್ಥೆಯನ್ನು ಮಾಡಬೇಕು. ಹೊಸಪೇಟೆ, ಕಂಪ್ಲಿ, ಕೊಪ್ಪಳ ಮತ್ತು ಗಂಗಾವತಿ .ಮಾರ್ಗದಿಂದ ಕಲ್ಯಾಣ ಕರ್ನಾಟಕ ಸಾರಿಗೆ ಅಧಿಕಾರಿಗಳು ಬಸ್ ಸಂಚಾರ ವ್ಯವಸ್ಥೆ ಮಾಡಬೇಕು. ಗಂಗಾವತಿ ಹುಲಿಗಿ ಬಸ್ ಸಂಚಾರ ಮಾರ್ಗ ಬದಲಿಸುವ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಆನೆಗೊಂದಿ ರಾಜಮನೆತನದ ಲಲಿತರಾಣಿ ಶ್ರೀರಂಗದೇವರಾಯಲು, ವಿನಯ್ ಪಾಟೀಲ್, ಸಂತೋಷ ಕೆಲೋಜಿ,ಅಮರೇಶ ಗೋನಾಳ,ಮನೋಹರಸ್ವಾಮಿ,ಆನೆಗೊಂದಿ ಗ್ರಾ.ಪಂ.ಅಧ್ಯಕ್ಷೆ ಹುಲಿಗೆಮ್ಮ ನಾಯಕ,ತಹಸೀಲ್ದಾರ್ ಯು.ನಾಗರಾಜ, ಇಒ ರಾಮರೆಡ್ಡಿ ಪಾಟೀಲ್,ಸಿಪಿಐ ರಂಗಪ್ಪ ದೊಡ್ಮನಿ,ವಿಷ್ಣು ಜೋಶಿ,ಕೆ.ತಿರುಕಪ್ಪ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು

ಜಾಹೀರಾತು
Total Views: 0
Share This Article