On the occasion of Vishwakarma Jayanti, MLA M R Manjunath.
ವರದಿ :ಬಂಗಾರಪ್ಪ ಸಿ .
ಹನೂರು :ನಮ್ಮ ಕ್ಷೇತ್ರದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷವು ವಿಶ್ವ ಕರ್ಮ ಜಯಂತಿ ಯನ್ನು ಅ.1ರಂದು ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ಅರ್ಥಪೂರ್ಣ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತೀಥಿ ಗೃಹದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಮಹನೀಯರ ಹಾಗೂ ಹಿರಿಯರನ್ನು ಗೌರವಿಸುವುದು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಇದೀಗ ವಿಶ್ವಕರ್ಮ ಜಯಂತಿಯನ್ನು ಸಹ ಆಚರಣೆ ಮಾಡಲಾಗುತ್ತಿದ್ದು ಸಮುದಾಯದ ಮುಖಂಡರುಗಳ ಜೊತೆ ಚರ್ಚೆ ನಡೆಸಿ ನಿಗದಿಪಡಿಸಲಾಗಿರುವ ದಿನಾಂಕದಂದು ಬೆಳಿಗ್ಗೆ 9ಗಂಟೆಗೆ ಆರ್. ಎಂ. ಸಿ ಆವರಣದಲ್ಲಿ ಚಾಲನೆ ನೀಡಲಾಗುವುದು. ಬಳಿಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಪಟ್ಟಣದಲ್ಲಿ ವೇದಿಕೆ ಕಾರ್ಯಕ್ರಮ ಮೂಲಕ
ಜಯಂತಿಯಲ್ಲಿ ಯಾವುದೇ ರೀತಿಯ ಲೋಕದೋಷವಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಬೇಕು ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗುರು ಪ್ರಸಾದ್, ಸಿ.ಡಿ.ಪಿ.ಓ ನಂಜಮಣಿ ಗ್ರಾಮ ಆಡಳಿತ ಅಧಿಕಾರಿ ಶೇಷಣ್ಣ, ದೈಹಿಕ ಪರಿವೀಕ್ಷಕ ಮಹದೇವ್, ಅಗ್ನಿ ಶಾಮಕ ದಳ ಸಿಬ್ಬಂದಿ ಮಹೇಶ್,ಮುಖಂಡರಾದ ಮುತ್ತು, ವೀರಚಾರಿ, ಆರ್. ರಾಚಪ್ಪಾಜಿ, ತಮ್ಮಯಚಾರಿ, ಮುತ್ತುರಾಜು, ದೊರೆ, ರಾಮಾಚಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.