Breaking News

ಅಲ್ಪಸಂಖ್ಯಾತ ಹಿರಿಯ ಕುಶಲ ಕಾರ್ಮಿಕರುಗಳಿಗೆ ಸನ್ಮಾನ

A tribute to minority senior artisans

ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ರಾಯಚೂರು ರಸ್ತೆಯಲ್ಲಿರುವ ಆಟೋನಗರದಲ್ಲಿ ಇಂದು ೭೬ನೇ ಸ್ವಾತಂತ್ರö್ಯ ದಿನೋತ್ಸವದ ಅಂಗವಾಗಿ ಅಲ್ಪಸಂಖ್ಯಾತ ಕುಶಲಕರ್ಮಿಗಳಿಗೆ ಸನ್ಮಾನ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ವ್ಯಾಪಾರಗಳಲ್ಲಿ ದೌರ್ಜನ್ಯ ನಡೆದು, ಅವರುಗಳು ಭಯಭೀತರಾಗಿದ್ದಾರೆ. ಬಹುತ್ವ ಕರ್ನಾಟಕ ಸಂಘಟನೆ ಇವರ ಪರವಾಗಿ ನಿಂತು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಹತ್ತು ಜನ ದುಡಿಯುವ ವರ್ಗದ ಕುಶಲಕರ್ಮಿಗಳನ್ನು ಗುರುತಿಸಿ ಸನ್ಮಾನ ಮಾಡಲಿದೆ. ಅಲ್ಪಸಂಖ್ಯಾತ ಕುಶಲಕರ್ಮಿಗಳನ್ನು ದೇಶದ್ರೋಹಿಗಳೆಂದು ಹಾಗೂ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಸನಾತನವಾದಿಗಳು ತಮ್ಮಲ್ಲಿರುವ ಪ್ರಾಮಾಣಿಕ ಕುಶಲಕರ್ಮಿಗಳ ಬಗ್ಗೆ ಹೇಳಲಿ.
ಅಕ್ಕಿಗಿರಣಿಗಳು, ಹೋಟಲ್‌ಗಳು, ಬೀದಿ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ಪಂಚರ್ ಹಾಕುವವರು, ಹಮಾಲರುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಇವರನ್ನು ಪ್ರೀತಿಸುವ ಮನುವಾದಿಗಳು ತಮ್ಮಲ್ಲಿರುವ ಪ್ರಾಮಾಣಿಕ ಕಾರ್ಮಿಕರ ಬಗ್ಗೆ ತಿಳಿಸಲಿ. ಇನ್ನುಮುಂದೆ ಬಹುತ್ವ ಕರ್ನಾಟಕ ಸಂಘಟನೆ ಪ್ರತಿ ತಿಂಗಳು ೫ನೇ ತಾರೀಖಿನಂದು ಹತ್ತು ಜನರಿಗಿಂತ ಹೆಚ್ಚು ಪ್ರಾಮಾಣಿಕ ಕುಶಲಕರ್ಮಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ.
ಈ ವಿಷಯದಲ್ಲಿ ಸಾರ್ವಜನಿಕರು ದುಡಿಯುವ ವರ್ಗಗಳ ಜೊತೆಗೆ ನಿಲ್ಲಬೇಕೆಂದು ಕೋರಿದ್ದಾರೆ. ಈ ಸಂದರ್ಭದಲ್ಲಿ ಆಟೋನಗರದ ಶಿವಣ್ಣ, ಬಷೀರ್‌ಸಾಬ್, ಹರಿ, ವಿಜಯ್ ದೊರೆರಾಜು ಮೆಕ್ಯಾನಿಕ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಇಂದು ಸನ್ಮಾನಿಸಿದ ಆರು ಜನ ಕುಶಲಕರ್ಮಿಗಳ ವಿವರಗಳು:
ಅಬ್ದುಲ್ ರೌಫ್‌ಸಾಬ ತಂ. ಖಾದರಸಾಬ್ (೬೫ ವರ್ಷ), ೪೦ ವರ್ಷಗಳಿಂದ ಲಾರಿಮೆಕ್ಯಾನಿಕ್ ಕೆಲಸ.
ಶೇಖ್ ದಸ್ತಗಿರಿಸಾಬ ತಂ. ಅಬ್ದುಲ್ ರೆಹಮಾನ್ (೭೫ ವರ್ಷ), ಟರ್ನರ್ & ವೆಲ್ಡರ್
ಖಾಜಸಾಬ್ ತಂ. ಖಾದರಸಾಬ್, (೭೦ ವರ್ಷ), ಸ್ಪಿçಂಗ್‌ಸೆಟ್ (ಕಟ್ಟೆ) ವರ್ಕ್ಸ್,
ಬಾಬುಸಾಬ್ ತಂ. ಅಬ್ದುಲ್ ರೌಫ್‌ಸಾಬ, (೭೦ ವರ್ಷ), ಟ್ರಾö್ಯಕ್ಟರ್ ಮೆಕ್ಯಾನಿಕ್
ಹುಸೇನಸಾಬ್ ತಂ. ಕಾಶೀಮಸಾಬ್, (೭೦ ವರ್ಷ), ಟ್ರಾö್ಯಕ್ಟರ್ ಮೆಕ್ಯಾನಿಕ್
ಅಬ್ದುಲ್ ರೌಫ್‌ಸಾಬ ತಂ. ದಾದಾಸಾಬ್, (೭೨), ಲಾರಿಮೆಕ್ಯಾನಿಕ್
ಭಾರಧ್ವಾಜ್
ರಾಜ್ಯಾಧ್ಯಕ್ಷರು, ಕ್ರಾಂತಿಚಕ್ರ ಬಳಗ

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.