Breaking News

ಸರ್ಕಾರ 5-K.G ಅಕ್ಕಿ ಬದಲುಹಣಕೊಡುವುದನ್ನುವಿರೋಧಿಸಿಪಡಿತರ ವಿತರಕರ ಸಂಘ ಪ್ರತಿ ಭಟನೆ

Ration Dealers Association Prati Bhatane Against Govt 5-K.G Rice Substitution


ಗಂಗಾವತಿ,೦೪: ಇಂದು ಕರ್ನಾಟಕ ಸರ್ಕಾರವು 5-K.G ಅಕ್ಕಿ ಬದಲು ಹಣ ನೀಡುವ ಸಂಬಂಧ ಎಲ್ಲಾ ತಾಲೂಕು ಪಡಿತರ ವಿತರಕರ ಸಂಘದಿಂದ ವಿರೋಧಿಸಿ ನ್ಯಾಯಬೆಲೆ ಅಂಗಡಿಗಳು ಈ ಹಿಂದೆ 10-K.G ಅಕ್ಕಿ ಕೊಟ್ಟಾಗಲೂ ವಿತರಣೆ ಮಾಡಲಾಗುತ್ತಿತ್ತು ಹಾಗೂ ಕೋವಿಡ್-19 ರ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪಡಿತರದಾರರಿಗೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ವಿತರಣೆ ಮಾಡಲಾಗಿರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಪ್ರಸ್ತುತ ಸರ್ಕಾರವು 5-K.G ಹೆಚ್ಚುವರಿ ಅಕ್ಕಿಯನ್ನು ಕೊಡುವ ಬದಲು ರೂ.170 ರೂಪಾಯಿಗಳಂತೆ ಕಾರ್ಡುದಾರರ ಖಾತೆಗಳಿಗೆ ಹಾಕುತ್ತಿರುವುದರಿಂದ ನ್ಯಾಯಬೆಲೆ ಅಂಗಡಿಗಳು ವಿನಾಶದತ್ತ ಸಾಗುತ್ತಿವೆ ಎಂದು ಹಾಗೂ ಸದರಿ ನ್ಯಾಯಬೆಲೆ ಅಂಗಡಿಕಾರರ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಲಿಕ್ಕೆ ಮತ್ತು ಜೀವನ ನಡೆಸಲಿಕ್ಕೆ ಕಷ್ಟಕರವಾಗುತ್ತಿರುವುದರಿಂದ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷರಾದ ಟಿ.ಕೃಷ್ಣಪ್ಪ ಇವರ ನೇತೃತ್ವದಲ್ಲಿ ಮುಂದಿನ ದಿನಮಾನವಾದ ದಿನಾಂಕ: 07-11-2023 ರಂದು ಮಂಗಳವಾರ ಬೆಂಗಳೂರಿನಲ್ಲಿ ಪ್ರೀಡಮ್ ಪಾರ್ಕ ಮೈದಾನದಲ್ಲಿ ರಾಜ್ಯದ ಎಲ್ಲಾ ಪಡಿತರ ವಿತರಕರ ಸಂಘದಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮತ್ತು 07ನೇ ತಾರೀಕಿನೊಳಗೆ ಆಹಾರ ದಾನ್ಯಗಳನ್ನು ಎತ್ತುವಳಿ ಮಾಡದಿರಲು ತೀರ್ಮಾನಿಸಿ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಮತ್ತು ಎಲ್ಲಾ ನ್ಯಾಯಬೆಲೆ ಅಂಡಿಕಾರರು ಸಭೆ ನಡೆಸಿ ತೀರ್ಮಾನ ಕೋಗೊಂಡು ಮಾನ್ಯ ತಹಶೀಲ್ದಾರರು ಗಂಗಾವತಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಮತಿ ಹೊನ್ನಮ್ಮ ನಾಯಕ, ರಾಜ್ಯ ಸಮಿತಿ ಸದಸ್ಯರು ಕನಕಗಿರಿ, ನಾಗರಾಜ ಕುಲಕರ್ಣಿ, ತಾಲೂಕು ಅಧ್ಯಕ್ಷರು ಕಾರಟಗಿ, ದಾನನಗೌಡ, ಹೇರೂರು, ಗಂಗಾವತಿ ಗ್ರಾಮೀಣ ಅಧ್ಯಕ್ಷರು, ಸತೀಶ, ವಡ್ಡರಹಟ್ಟಿ, ಶ್ರೀ ಪಂಪನಗೌಡ ಡಣಾಪುರ, ಹೆಚ್.ಬದ್ರಿನಾಥ, ಮೊಹ್ಮದ್ ಫಯಾಜ್, ಹೆಚ್.ಎಮ್.ಶಾಸ್ತ್ರೀ, ವಸಂತಗೌಡ, ನಾಗರಾಜ, ವಿರುಪಾಕ್ಷಿ ಕಂಬ್ಳಿ, ರಾಜಣ್ಣ, ಮೊಹ್ಮದ್, ಹನುಮಂತಪ್ಪ ಗಚ್ಚಿನಮನಿ, ಶ್ಶಬ್ಬೀರ ಸಣಾಪುರ, ಸೈಯದ್ ಜಿಲಾನಿ ಸಿದ್ದಾಪೂರ, ಅಬೂಬ್ ಅಕ್ತರ್, ಪ್ರವೀಣ ಹಾಗೂ ಇನ್ನು ಮುಂತಾದವರು ಪಾಲ್ಗೊಂಡು ಮನವಿ ಪತ್ರವನ್ನು ಸಲ್ಲಿಸಿದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.