Breaking News

ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆ

Nirmala Tungabhadra campaign poster release

ಜಾಹೀರಾತು


ಗಂಗಾವತಿ: ಇಂದು ಲಯನ್ಸ್ ಕ್ಲಬ್‌ನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಘ-ಸಂಸ್ಥೆಗಳೊಂದಿಗೆ ನಡೆದ ಸಂವಾದ ಅತ್ಯಂತ ಯಶಸ್ವಿಯಾಯಿತು. ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರಾದ ಮಾಧವನ್ ಸಿ.ಪಿ ಹಾಗೂ ರಾಘವ್ ಗೋ-ಸಿರಿ ಅವರು ತುಂಗಭದ್ರಾ ಅಭಿಯಾನದ ಪಾದಯಾತ್ರೆ ಬಗ್ಗೆ ಮಾಹಿತಿ ಹಂಚಿಕೊAಡರು.
ಈ ಸಂದರ್ಭದಲ್ಲಿ ಹಿರಿಯ ವೈದ್ಯರು, ಪರಿಸರವಾದಿಗಳಾದ ಡಾ|| ಎ. ಸೋಮರಾಜು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ|| ಜಿ. ಚಂದ್ರಪ್ಪ ಅವರು ನಿರ್ಮಲ ತುಂಗಭದ್ರಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.
ಗಂಗಾವತಿಯ ಪ್ರಮುಖ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಸುಬ್ರಹ್ಮಣ್ಯೇಶ್ವರರಾವ್, ರೋಟರಿ ಕ್ಲಬ್ ಅಧ್ಯಕ್ಷರಾದ ಟಿ. ಆಂಜನೇಯ, ಸ್ನೇಹಬಳಗದ ಅಧ್ಯಕ್ಷರಾದ ಶ್ಯಾಮಮೂರ್ತಿ ಐಲಿ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ನೂಲ್ವಿ, ದಲಿತ ಸಾಹಿತ್ಯ ಪರಿಷತ್ತಿನ ಛತ್ರಪ್ಪ ತಂಬೂರಿ, ಶರಣ ಸಾಹಿತ್ಯ ಪರಿಷತ್ತಿನ ಜೆ. ನಾಗರಾಜ, ಜೈನ ಸಮಾಜದ ಉಗಮರಾಜ ಬಂಬ್, ಆಯುಷ್ ಅಧ್ಯಕ್ಷರಾದ ಡಾ|| ಬಸವರಾಜ, ಕಾರ್ಯದರ್ಶಿ ಡಾ|| ಸುನೀಲ್ ಅರಳಿ, ಬಸವಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಸೌಹಾರ್ಧ ಸಹಕಾರಿ ಒಕ್ಕೂಟದ ಸುಧಾಕರ, ಸತೀಶ್, ಕ್ಲೀನ್ ಗ್ರೀನ್ ಶ್ರೀರಾಮನಗರದ ಎಂ.ಡಿ ರಫಿ, ಮೌಲಾಸಾಬ್, ನೌಕರ ಸಂಘದ ಅಧ್ಯಕ್ಷರಾದ ಶಿವಶಂಕರ ಹಾಗೂ ನಿವೃತ್ತ ನೌಕರರ ಸಂಘದ ಶರಭಣ್ಣ, ಅಲೆಮಾರಿ ಸಮುದಾಯದ ಅಧ್ಯಕ್ಷ ಆರ್. ಕೃಷ್ಣ, ಭಾರತೀಯ ಪ್ರಜಾಸೇನೆಯ ಬಸವರಾಜ ಮ್ಯಾಗಳಮನಿ, ಭಾರತೀಯ ವಿಕಾಸ ಪರಿಷತ್ ಅಧ್ಯಕ್ಷರಾದ ಜಂಬಣ್ಣ ಐಲಿ, ಸೇಂಟ್ ಫಾಲ್ಸ್ ಶಿಕ್ಷಣ ಸಂಸ್ಥೆಯ ಸರ್ವೇಶ್ ವಸ್ತçದ್, ಶರಣ ಕಲಾಬಳಗದ ರಮೇಶ ಗಬ್ಬೂರು, ಹೀಗೆ ೩೫ ಕ್ಕಿಂತ ಹೆಚ್ಚಿನ ಸಂಘ-ಸAಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಡಾ|| ಶಿವಕುಮಾರ ಮಾಲಿಪಾಟೀಲ್ ಸ್ವಾಗತಿಸಿದರು. ಪವನಕುಮಾರ ಗುಂಡೂರು ವಂದನಾರ್ಪಣೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರಾದ ಮಂಜುನಾಥ ಕಟ್ಟಿಮನಿ, ವಿನಯ ಪಾಟೀಲ್ ಹಾಗೂ ಗಂಗಾವತಿ ಚಾರಣ ಬಳಗದ ಮಂಜುನಾಥ ಗುಡ್ಲಾನೂರು, ಮೈಲಾರಪ್ಪ ಬೂದಿಹಾಳ. ಉಲ್ಲಾಸ್, ಕೆ.ವೈ.ಟಿ.ಸಿ ಪ್ರಮುಖರಾದ ಅರ್ಜುನ್, ಸೌಮ್ಯ, ಪಂಪಾಪತಿ, ಪ್ರಕಾಶ, ಗ್ರಾಮೀಣ ಭಾರತೀಯ ರೆಡಿಯೋ ದ ರಾಘವೇಂದ್ರ ತೂನಾ ಭಾಗವಹಿಸಿದ್ದರು.

About Mallikarjun

Check Also

ಕೋಟ್ಯಾಂತರ ರೂ ತೆರಿಗೆ ಪಾವತಿಸುವಂತೆ ನೋಟೀಸ್‌ ನೀಡುತ್ತಿರುವ ಕೇಂದ್ರದ ವಿರುದ್ಧ ಜು. 23 ರಿಂದ ಎರಡು ದಿನ ರಾಜ್ಯ ವ್ಯಾಪಿ ಹಾಲು, ಬೇಕರಿ ಉತ್ಪನ್ನಗಳ ಮಾರಾಟ ಬಂದ್‌ : ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ ಎಚ್ಚರಿಕೆ

ತೆರಿಗೆ  ನೋಟೀಸ್‌  ವಿರುದ್ಧ- ಜು. 23 ರಿಂದ ಹಾಲು, ಬೇಕರಿ ಉತ್ಪನ್ನಗಳು, ಬೀಡಿ, ಸಿಗರೇಟು ಮಾರಾಟವನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ  ಬೆಂಗಳೂರು,ಜು.15: ವಾರ್ಷಿಕ …

Leave a Reply

Your email address will not be published. Required fields are marked *