To transferred associate teacher Basavaraj Children bid farewell with a heavy heart
ಗಂಗಾವತಿ: ತಾಲೂಕಿನ ಸೂರ್ಯನಾಯಕನ ತಾಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಹೊಸಕೆರೆ ಡಗ್ಗಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿರುವ ಸಹ ಶಿಕ್ಷಕರಾದ ಬಸವರಾಜ್ ಅವರನ್ನು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಬಾಲಾಜಿ ಮೇಸ್ತಿç, ಅಧ್ಯಕ್ಷರಾದ ಅಂಬರೀಶ್, ವಿದ್ಯಾರ್ಥಿಗಳ ಪಾಲಕರಾದ ವೆಂಕಟೇಶ್, ಶಿವಪ್ಪ, ದಾವಲ್‌ಸಾಬ್, ತಾರಾಸಿಂಗ್ ಪವರ್, ಬಾಲಾಜಿ, ಗುಂಡಪ್ಪ, ಶಿವಪ್ಪ, ಯಮನೂರ ಹಾಗೂ ವಿದ್ಯಾರ್ಥಿಗಳು ಭಾರವಾದ ಹೃದಯದಿಂದ ಸನ್ಮಾನಿಸಿ ಬಿಳ್ಕೊಟ್ಟು, ಸಹ ಶಿಕ್ಷಕರಾದ ಬಸವರಾಜ್ ಅವರ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು.
ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ಹಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೂರ್ಯನಾಯಕನ ತಾಂಡಾದ ಸಮಸ್ತ ನಾಗರಿಕರು ಪಾಲ್ಗೊಂಡು ವರ್ಗಾವಣೆಗೊಂಡ ಶಿಕ್ಷಕರಾದ ಬಸವರಾಜ್ ಅವರ ಸೇವೆಯನ್ನು ಸ್ಮರಿಸಿ ಕೊಂಡಾಡಿದರು.