Breaking News

ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾನಿರ್ವಾಹಕರಿಗೆ ಬಹು ಕೌಶಲ ತರಬೇತಿ

Multi-skill training for water distribution operators under Nal Jal Mitra scheme

ಜಾಹೀರಾತು


ರಾಯಚೂರು ಜ.06,(ಕರ್ನಾಟಕ ವಾರ್ತೆ):-
ಜಿಲ್ಲೆಯಲ್ಲಿ ಸಂಜೀವಿನಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿವಿಧ ತರಬೇತಿ ನೀಡಿ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಅವರು ಹೇಳಿದರು.
ಜ.04ರಂದು ನಗರದ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ಜಿಲ್ಲಾ ಪಂಚಾಯತಿ ರಾಯಚೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಲ್ ಜಲ್ ಮಿತ್ರ ಯೋಜನೆಯಡಿ ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ಪಡೆಯುತ್ತಿರುವ ಮಹಿಳೆಯರು ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತರಬೇತಿಯಲ್ಲಿ ವಿತರಿಸಲಾಗುವ ಕಿಟ್ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸುವಾಗ ಸಹಕಾರಿಯಾಗುತ್ತದೆ. ಮಹಿಳೆಯರಿಗೆ ನಲ್ಲಿ ನೀರಿನ ವಿತರಣಾ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆಯ ಪ್ರಾತ್ಯಕ್ಷಿಕೆ, ನೀರಿನ ಪಂಪುಗಳ ಕಾರ್ಯ, ಪಂಪಗಳ ಅಳವಡಿಕೆ, ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯತಿಯಿಂದ ನಲ್ ಜಲ್, ಮಿತ್ರ ಸದಸ್ಯರನ್ನು ಸ್ವ ಸಹಾಯ ಗುಂಪಿನ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಈ ಸದ್ಯಸರಿಗೆ ಹದಿನೇಳು ದಿನದ ಬಹು ಕೌಶಲ್ಯ ತರಬೇತಿಯನ್ನು ನೀಡಿ ಗ್ರಾಮ ಪಂಚಾಯತ್ ನಿಯೋಜನೆ ಮಾಡಲಾಗುವುದು. ತಾವುಗಳು ಕೆಲಸ ನಿರ್ವಹಿಸುವ ವೇಳೆಯಲ್ಲಿ ಸಮಸ್ಯೆ ಕಂಡು ಬಂದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಬಹುದು. ಸಮಸ್ಯೆ ಬಗೆಹರಿಯದೇ ಹೋದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜಿ.ಯು.ಹುಡೇದ್, ಸಂಸ್ಥೆಯ ಪ್ರಾರ್ಚಾಯರಾದ ನಾಗೋಜಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರಾದ ಬಸವರಾಜ್, ಎನ್.ಆರ್.ಎಲ್.ಎಮ್.ಜಿಲ್ಲಾ ವ್ಯವಸ್ಥಾಪಕ ವಿಜಯ ಕುಮಾರ, ಸಂಪನ್ಮೂಲ ಅಧಿಕಾರಿಗಳಾದ ನಾಗರಾಜ್, ಕಾರ್ಯಕ್ರಮದ ಉಸ್ತುವಾರಿಗಳಾದ ಸದಾಶಿವಪ್ಪ, ನರಸಿಂಹಮೂರ್ತಿ, ಪ್ರಕಾಶ, ಅಬ್ದುಲ್, ಹಮೀದ್ ಸೇರಿದಂತೆ ಮಾನವಿ, ಸಿರವಾರ, ರಾಯಚೂರು ತಾಲ್ಲೂಕು ನಲ್ ಜಲ್ ಮಿತ್ರ ಸದಸ್ಯರು ಭಾಗವಹಿಸಿದ್ದರು.

About Mallikarjun

Check Also

ಚಾಮರಾಜಪೇಟೆ ಚಂದ್ರ ಸ್ಪಿನಿಂಗ್ ಎಂಡ್ ವಿವಿಂಗ್ ಮಿಲ್ಸ್ ಜಾಗದ ಭೂ ಸ್ವಾಧೀನಕ್ಕೆ ಕರ್ನಾಟಕ ಸರ್ಕಾರ ಹೊರಡಿಸಿದಅಧಿಸೂಚನೆ ರದ್ದುಗೊಳಿಸಿ ಹೈಕೋರ್ಟ್ ತೀರ್ಪು*

High Court verdict quashes Karnataka government’s notification for land acquisition of Chandra Spinning and Weaving …

Leave a Reply

Your email address will not be published. Required fields are marked *