
Demand to fix pension of retired Gram Panchayat secretaries
ನಿವೃತ್ತ. ಗ್ರಾಪಂ ಕಾರ್ಯದರ್ಶಿಗಳ ಪಿಂಚಣಿ ಸರಿಪಡಿಸಲು ಒತ್ತಾಯ


ಗಂಗಾವತಿ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಕಾರ್ಯದರ್ಶಿ ಮತ್ತು ಪಿಡಿಒ ಇತರರಿಗೆ ಸರಕಾರ ವೈಜ್ಞಾನಿಕವಾಗಿ ಪರಿಗಣಿಸಿ ಸೂಕ್ತ ಪಿಂಚಣಿ ನೀಡಬೇಕೆಂದು ನಿವೃತ್ತ ಕಾರ್ಯದರ್ಶಿ ಬಿ.ವಿರುಪಣ್ಣ ಢಣಾಪುರ ಒತ್ತಾಯಿಸಿದರು.
ಅವರು ಮಾತನಾಡಿ ಹಲವಾರು ವರ್ಷ ಹೋರಾಟದ ಬಳಿಕ ಅರೆಕಾಲಿಕ ಗ್ರಾಮಪಂಚಾಯಿತಿ ನೌಕರರನ್ನು ಖಾಯಂಗೊಳಿಸಿದ್ದು ನಮ್ಮ ಹಿಂದಿನ ಹತ್ತಿಪ್ಪತ್ತು ವರ್ಷಗಳ ಸೇವಾ ಅವಧಿಯನ್ನು ಪರಿಗಣಿಸದೆ ತಮ್ಮ ವಿವೇಚನೆಗೆ ಬಂದಂತೆ ಸರಕಾರಗಳು ೨೦೧೬ ರ ಆದೇಶ ಗಮನದಲ್ಲಿಟ್ಟುಕೊಂಡು ನೌಕರರಿಗೆ ಅನ್ಯಾಯ ಎಸಗಿದ್ದು, ಕೆಲವರಿಗೆ ನಿವೃತ್ತಿ ವೇತನ ನೀಡುತ್ತಿದ್ದು, ಇನ್ನು ಕೆಲವರನ್ನು ಹೊರಗಿಟ್ಟಿರುವ ಸರಕಾರಗಳ ಇಬ್ಬಗೆಯ ನೀತಿ ತಾರತಮ್ಯ ನೀತಿ ಕೊನೆಗಾಲದಲ್ಲಿ ನಮ್ಮನ್ನು ಅಭದ್ರತೆಯತ್ತ ದೂಡುತ್ತಿದೆ ಎಂದು ಅವರು ಕಿಡಿಕಾರಿದರು.
ಗ್ರಾಮ ಪಂಚಾಯಿತಿ ನಿವೃತ್ತ ಕಾರ್ಯದರ್ಶಿಗಳನ್ನು ಸರಿಸಮವಾಗಿ ಪರಿಗಣಿಸಬೇಕು, ನಿವೃತ್ತರು ಅನುಭವಿಸುವ ಸಂಕಷ್ಟ ಅರಿಯಬೇಕು, ಸೇವಾ ಅವಧಿಯನ್ನು ಪರಿಗಣಿಸಿ ಅವರಿಗೆ ನ್ಯಾಯಯುತವಾಗಿ ದೊರಕಬೇಕಾದ ಪಿಂಚಣಿ ನೀಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ೨೦ – ೨೫ ವರ್ಷ ಸೇವೆ ಸಲ್ಲಿಸಿ ನಂತರ ಬಡ್ತಿ ಹೊಂದಿದ ನೌಕರರು ನಿವೃತ್ತರಾಗಿದ್ದು ಇವರಿಗೆ ಸರಕಾರಿ ಸೇವೆಗೆ ಸಿಕ್ಕ ಅವಧಿ ಕೆಲವೆ ವರ್ಷಗಳು, ಹಿಂದಿನ ಸೇವಾ ಅವಧಿಯನ್ನು ಪರಿಗಣಿಸದೆ ಇರುವುದು ವ್ಯರ್ಥವಾದಂತಾಗಿದ್ದು, ಈಗ ನಿವೃತ್ತ ಕಾರ್ಯದರ್ಶಿಗಳು ಪಿಂಚಣಿ ರೂಪದಲ್ಲಿ ರು.೫೦೦ ರಿಂದ ೩೦೦೦ ರು ವರೆಗೆ ಮಾತ್ರ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದು, ನೌಕರರು ಎನ್ನುವ ಕಾರಣಕ್ಕೆ ರೇಷನ್ ಕಾರ್ಡ್ ಇಲ್ಲ, ಸರಕಾರಿ ಹಿರಿಯ ನಾಗರೀಕರ ಸಂಬಳ ಇಲ್ಲ, ಅನೇಕ ನಿವೃತ್ತ ನೌಕರರು ಚಿಕಿತ್ಸೆಗೆ ಹಣ ಇಲ್ಲದೆ ಮಲಗಿದಲ್ಲೇ ಮಲಗಿ ಜೀವ ಬಿಟ್ಟ ಉದಾಹರಣೆಗಳು ನಮ್ಮ ಕಣ್ಣಾ ಮುಂದೆ ಇದ್ದು ಜನಪ್ರತಿನಿಧಿಗಳು ಸರಕಾರದ ಗಮನ ಸೆಳೆದು ಸೂಕ್ತ ಪಿಂಚಣಿ ಒದಗಿಸಬೇಕೆಂದು ವಿರುಪಣ್ಣ ಅಗ್ರಹಿಸಿದರು.
ಗ್ರಾಪಂ ನಿವೃತ್ತ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಜಿ.ಎಲಿಗೇರಿ, ಮಲ್ಲಪ್ಪ ಗವಿಸಿದ್ದಪ್ಪ ಜಟ್ಟಿ ಕೆ.ರಾಜಶೇಖರ್ ಗೌಡ, ವಿರುಪಣ್ಣ ಮಡಿವಾಳ, ಮಲ್ಲಪ್ಪ ಕಂಬಾರ ಹಾಗು ಡಿ.ಎಲ್ಲನಗೌಡ ಇತರರಿದ್ದರು.
