Inspection of gray water drainage works at Sri Ramanagara

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಸೂಚನೆ
ಗಂಗಾವತಿ : ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯತ್ ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಶುಕ್ರವಾರ ಭೇಟಿ ನೀಡಿ ಬೂದು ನೀರು ನಿರ್ವಹಣೆ ಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಶ್ರೀರಾಮನಗರದ 4 ಮತ್ತು 5ನೇ ವಾರ್ಡ್ ಗಳಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಬೂದು ನೀರು ನಿರ್ವಹಣೆ ಚರಂಡಿ ಕಾಮಗಾರಿಗಳನ್ನು ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು, ಮಾದರಿ ಗ್ರಾಮವನ್ನಾಗಿ ಮಾಡುವಂತೆ ಅಧಿಕಾರಿಗಳಿಗೆ ಜಿಪಂ ಸಿಇಓ ಅವರು ಸೂಚಿಸಿದರು.
ಆರ್ ಡಬ್ಲ್ಯು ಎಸ್ ಇಇ ಮಹೇಶ ಶಾಸ್ತ್ರಿ,
ಎಇಇ ವಿಜಯ ಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ನಾಗೇಶ ಕುರಡಿ, ತಾಂತ್ರಿಕ ಸಹಾಯಕ ಮಹೇಶ ಸೇರಿ ಗ್ರಾಪಂ ಸಿಬ್ಬಂದಿಗಳು ಇದ್ದರು.
Kalyanasiri Kannada News Live 24×7 | News Karnataka
