Loyal activists fall prey to money and fail. Hosahalli block contestant A Chitresh
ಕೂಡ್ಲಿಗಿ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕನಸು ಯುವ ಶಕ್ತಿಯನ್ನು ಒಗ್ಗೂಡಿಸಿ ಪಕ್ಷವನ್ನು ಸುಭದ್ರಗೊಳಿಸುವದಾಗಿತ್ತು, ಆದರೆ ನಿಷ್ಠಾವಂತ ಯುವ ಕಾರ್ಯಕರ್ತರು ಇಂದು ಹಣದ ಆಮಿಷಕ್ಕೆ ಬಲಿಯಾಗಿ ಸೋಲುವಂತಾಗಿದೆ ಎಂದು ಹೊಸಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಸ್ಪರ್ಧಾಳು ಎ.ಚಿತ್ರೇಶ್ ಆರೋಪಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2024 ನೇ ಸಾಲಿನ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆ ಇದಾಗಿದ್ದು, ರಾಜ್ಯಾದ್ಯಂತ ಏಕ ಕಾಲಕ್ಕೆ ನಡೆಯಲಿದೆ. ಅದರಂತೆ ಕೂಡ್ಲಿಗಿ ಕ್ಷೇತ್ರದಲ್ಲಿಯೂ ಸಹ ಯುವ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಚುನಾವಣೆ ನಡೆಯಲಿದೆ. ಆದರೆ ಈ ಬಾರಿ ಪ್ರಭಾವಿಗಳ ಕಪಿ ಮುಷ್ಟಿಗೆ ಸಿಲುಕಿರುವ ಚುನಾವಣೆ, ಹಣದ ಆಮಿಷದಿಂದ ಚುನಾವಣೆ ದಿಕ್ಕುತಪ್ಪುತ್ತಿದೆ. ದಿವಂಗತ ರಾಜೀವ್ ಗಾಂಧಿಯವರ ಆಶಯ ಸಕ್ರಿಯ ಸಾಮಾನ್ಯ ಯವ ಕಾರ್ಯಕರ್ತನು ಈ ಚುನಾವಣೆಯಲ್ಲಿ ಸ್ಪರ್ಧೆಮಾಡಿ, ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಬಲಪಡಿಸುವ ದೂರದರ್ಶಿತ್ವವಾಗಿತ್ತು. ಆದರೆ ಕೂಡ್ಲಿಗಿ ಕ್ಷೇತ್ರದಲ್ಲಿ ಕಳೆದ ಎಂಟು ವರ್ಷಗಳಿಂದ ನಾನು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡಿ, ಪಕ್ಷದ ಗೆಲುವಿಗೆ ಕಾರಣಿಭೂತನಾಗಿರುವೆ. ಅದರಂತೆ ಯುವ ಕಾಂಗ್ರೆಸ್ ಹೊಸಹಳ್ಳಿ ಬ್ಲಾಕ್ ಗೆ ನಾನು ಸ್ಪರ್ಧೆ ಮಾಡಿದ್ದೆನೆ. ಆದರೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಪುತ್ರ ಅಶೋಕ್ ಬಿ.ನಾಯ್ಕ್ ಸ್ಪರ್ಧೆ ಮಾಡಿದ್ದು, ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆ ಮಾಡುವುದು ಬಿಟ್ಟು, ಮತದಾರರಿಗೆ ಹಣದ ಆಮಿಷವೊಡ್ಡಿ ಮತಗಳನ್ನು ಸೆಳೆಯುತ್ತಿದ್ದಾರೆ. ಇದು ಅಸಂವಿಧಾನಿಕ ಕಾರ್ಯ, ಹಾಗೂ ಪಕ್ಷದ ಅಜೆಂಡಾಕ್ಕೆ ವಿರುದ್ದವಾದ ಕಾರ್ಯವಾಗಿದೆ. ಈ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಪಕ್ಷದ ಜಿಲ್ಲಾಧ್ಯಕ್ಷರಿಗೂ ದೂರು ಸಲ್ಲಿಸಿರುವೆ ಎಂದು ತಿಳಿಸಿದರು. ಇದು ಪಕ್ಷದ ಆತಂರಿಕ ಚುನಾವಣೆ ಇಲ್ಲಿ ಯಾವ ಶಾಸಕರು ಹಾಗೂ ಪ್ರಭಾವಿ ಮುಖಂಡರು ಹಸ್ತಕ್ಷೇಪ ಮಾಡಬಾರದು ಸಕ್ರಿಯ ಸಾಮಾನ್ಯ ಕಾರ್ಯಕರ್ತ ಸ್ವಂತ ಬಲದಿಂದ ಗೆಲ್ಲಬೇಕು ಎಂದು ಹೈ ಕಮಾಂಡ್ ತಿಳಿಸಿದರು ಸಹ ಪ್ರಭಾವಿಗಳು ಹಣಬಲ, ತೋಳ್ಬಲದಿಂದು ಅಧಿಕಾರ ಪಡೆಯಲು ಹವಣಿಸುತ್ತಿದ್ದಾರೆ. ಬಂಡವಾಳ ಶಾಹಿಗಳು ಮತ್ತು ವಂಶ ಪಾರಂಪರ್ಯ ರಾಜಕಾರಣಕ್ಕೆ ಪ್ರಾಮಾಣಿಕ ಕಾರ್ಯಕರ್ತರು ಬಲಿಯಾಗಿತ್ತಿರುವುದು ದುರಂತ. ಆದ್ದರಿಂದ ಕಾಂಗ್ರೆಸ್ ಶಾಸಕರು, ಜಿಲ್ಲಾ ಹಾಗೂ ಬ್ಲಾಕ್ ಅಧ್ಯಕ್ಷರು ಈ ಬಗ್ಗೆ ಕ್ರಮವಹಿಸಿ ನ್ಯಾಯ ಸಮ್ಮತ ಚುನಾವಣೆ ನಡೆಸಿ ಸಾಮನ್ಯ ಕಾರ್ಯಕರ್ತರು ಗೆಲ್ಲುವಂತೆ ಮಾಡಬೇಕು ಎಂದು ತಿಳಿಸಿದರು. ಕೂಡ್ಲಿಗಿ ಬ್ಲಾಕ್ ಯುವ ಕಾಂಗ್ರೆಸ್ ಸ್ಪರ್ಧಾಳು ಮಂಜುನಾಥ ಉಕ್ಕಡದ ಇದ್ದರು.