Let everyone live a cultured life: Basavalingeshwar Swamiji.

ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಬಾಲ್ಯವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ನೀಡಿದಾಗ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಲು ಸಾಧ್ಯ ಎಂದು ಮೈನಳ್ಳಿಯ ಸಿದ್ದೇಶ್ವರ ಸ್ವಾಮೀಗಳು ತಮ್ಮ ಆಶಿರ್ವಚನದಲ್ಲಿ ಹೇಳಿದರು.
ರವಿವಾರದಂದು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾ ಮಠದಲ್ಲಿ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವಟುಗಳ ಶಿವದೀಕ್ಷಾ ಕಾರ್ಯಕ್ರಮ, ಹಾಗೂ ಯಲಬುರ್ಗಾ ಶ್ರೀಧರ ಮುರಡಿಮಠದ ಬಸವಲಿಂಗೇಶ್ವರ ಸ್ವಾಮೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ವಟುಗಳಿಗೆ ಶಿವದೀಕ್ಷೆ ನೀಡಿ ಮಾತನಾಡಿದರು.
ಮಕ್ಕಳು ಚಿಕ್ಕಂದಿನಿಂದಲೇ ಸಂಸ್ಕಾರವನ್ನು ಹೊಂದಿದಾಗ ಮಾತ್ರ ಇಂತಹ ಸಮಾಜ ಮುಖಿ ಕಾರ್ಯವನ್ನು ಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಇಂದಿನ ವೈಜ್ಞಾನಿಕ ಯುಗದಲ್ಲಿ ಜಂಗಮ ವಟುಗಳಿಗೆ ಆಚಾರ, ವಿಚಾರ ಮಹತ್ವವಾದದು.
ಇಂದು ಜಂಗಮ ಸಮಾಜದಲ್ಲಿ ಪೌರೋಹಿತ್ಯ ಮಾಡುವ ಯುವಕರ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊರೆದ ಯುಗದಲ್ಲಿ ಜಂಗಮರು ತಮ್ಮ ಕುಲ ವೃತ್ತಿ ಮಾಡಿ ಜೀವನ ಕಟ್ಟಿಕೊಳ್ಳುವದು ತುಂಬಾ ಕಷ್ಟಕರವಾಗಿದ್ದು, ಎಲ್ಲರು ಸರಕಾರಿ ಕೆಲಸದತ್ತ ವಾಲುತ್ತಿರುವದರಿಂದ ನಮ್ಮ ಸಮಾಜದಲ್ಲಿ ಪೌರೋಹಿತ್ಯ ಕಡಿಮೆಯಾಗುತ್ತಿದೆ ಎಂದರು.
ಗ್ರಾಮದ ಪ್ರತಿಯೊಬ್ಬ ಜಂಗಮರ ಮನೆತನದಲ್ಲಿ ಒಬ್ಬರಾದರೂ ಈ ನಮ್ಮ ಪರಂಪರೆಯ ಮಂತ್ರ, ವೇದ, ಘೋಷಗಳನ್ನು, ವೈದಿಕ, ಪೌರೋಹಿತ್ಯವನ್ನು ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ನಂತರದಲ್ಲಿ ಕುಕನೂರಿನ ಅನ್ನದಾನೀಶ್ವರ ಮಠದ ಮಹಾದೇವ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ 101 ಮಹಿಳೆಯರಿಗೆ ಉಡಿ ತುಂಬಲಾಯಿತು, ನಂತರದಲ್ಲಿ ಗ್ರಾಮದ ಪ್ರಮುಖ ರಾಜ ಬೀದಿಗಳಲ್ಲಿ ಮಹಿಳೆಯರ ಕುಂಭ, ಕಳಸ ಕನ್ನಡಿ, ಭಾಜಾ ಭಜೇಂತ್ರಿಯೊಂದಿಗೆ ಬಸವಲಿಂಗೇಶ್ವರ ಸ್ವಾಮೀಗಳ ಅಡ್ಡ ಪಲ್ಲಕ್ಕಿ ಕಾರ್ಯಕ್ರಮ ನಡೆಸಲಾಯಿತು ನಂತರ ಮಧ್ಯಾಹ್ನ ಅನ್ನಸಂತರ್ಪಣಾ ಕಾರ್ಯಕ್ರಮ ಜರುಗಿತು.
ವಟುಗಳ ಶಿವದಿಕ್ಷಾ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯ ಹಿರೇಮಠ ಪೌರೋಹಿತ್ಯ ನಡೆಸಿಕೊಟ್ಟರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಕಂಪ್ಲಿ ಕಲ್ಮಠದ ಪ್ರಭು ಮಹಾಸ್ವಾಮಿಗಳು, ಸೊರಟೂರಿನ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮಠದ ಸಮಿತಿಯ ವೀರಯ್ಯ ಉಳ್ಳಾಗಡ್ಡಿ, ಗದಿಗೆಪ್ಪ ಪವಾಡಶೆಟ್ರ, ವೀರಯ್ಯ ತೊಂಟದಾರ್ಯಮಠ, ಸಂಗಮೇಶ ಕಲ್ಮಠ, ಮಹೇಶ ಕಲ್ಮಠ, ಕಾಶಯ್ಯ ಕಾಶಿಮಠ, ಚಂದ್ರಶೇಖರ್ ಸರಗಣಾಚಾರ, ಶಿವಕುಮಾರ ಭಾವಿಕಟ್ಟಿ, ಯಲ್ಲಪ್ಪ ಹೊಸ್ಮನಿ, ಪ್ರಭು ಶಿವಶಿಂಪರ, ಮೇಘರಾಜ ಜಿಡಗಿ ಇನ್ನಿತರರು ಇದ್ದರು.