Breaking News

ಕರ್ನಾಟಕದ ಟಿ.ಟಿ.ಡಿ.ಗೆ ಬೇಕಿದೆಕಾಯಕಲ್ಪಮಲ್ಲಿಕಾರ್ಜುನ ವಿ.ಜೋಷಿ

TTD of Karnataka needs a vision Mallikarjuna V. Joshi

ಜಾಹೀರಾತು


ಕೊಪ್ಪಳ: ಇದೇ ಆಗಸ್ಟ್ ೩೧ರಂದು ತಾಲೂಕಿನ ಕೆರೆಹಳ್ಳಿ ಗ್ರಾಮದ ಪೂರ್ವದ ಅಂಚಿನಲ್ಲಿರುವ ಕರ್ನಾಟಕದ ಟಿ.ಟಿ.ಡಿ.ಎಂದೇ ಪ್ರಸಿದ್ಧವಾದ ತಿರುಗಲ್ ತಿಮ್ಮಪ್ಪ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಜರುಗಲಿದ್ದು, ಭಕ್ತರು ತಿಮ್ಮಪ್ಪನ ಗುಡ್ಡಕ್ಕೆ ತೆರಳಲು ಜಿಲ್ಲಾಡಳಿತ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ.
ರಾಷ್ಟಿçÃಯ ಹೆದ್ದಾರಿ-೫೦ರ ಪಕ್ಕದಲ್ಲಿಯೇ ಇರುವ ತಿರುಗಲ್ ತಿಮ್ಮಪ್ಪನ ಬೆಟ್ಟಕ್ಕೆ ತೆರಳಲು ರಸ್ತೆ ಇಲ್ಲದಿರುವುದರಿಂದ ಅಲ್ಲಿಗೆ ತೆರಳಲು ಭಕ್ತರಿಗೆ ಆಸಕ್ತಿ ಇದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಸಮನ್ವಯತೆಯಲ್ಲಿ ರಸ್ತೆ, ವಿದ್ಯುದ್ದೀಪ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಇದೊಂದು ರಾಜ್ಯದ ಅಪರೂಪದ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗುವುದರಲ್ಲಿ ಸಂದೇಹ ಇಲ್ಲ.
ಏನಿದು ಟಿ.ಟಿ.ಡಿ?:


ಭಾರತೀಯ ಸನಾತನ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ವೈಶಿಷ್ಟö್ಯತೆಯನ್ನು ವಿಜಯನಗರ ಸಾಮ್ರಾಜ್ಯವು ಹೊಂದಿತ್ತು. ಹರಿಹರ, ರಾಘವಾಂಕ, ವ್ಯಾಸರಾಜರು, ಪುರಂದರ, ಕನಕದಾಸರು, ವಿಜಯದಾಸರಾದಿಯಾಗಿ ಅನೇಕ ಹರಿದಾಸರು, ವಚನಕಾರರು, ಕನ್ನಡದ ಸಾಹಿತ್ಯವೇತ್ತರು ವಿಜಯನಗರ ಕಾಲಘಟ್ಟದಲ್ಲಿದ್ದರು. ಇವರಿಂದಾಗಿಯೇ ಭಾರತೀಯ ಆಧ್ಯಾತ್ಮಿಕ ಚರಿತ್ರೆಯಲ್ಲಿ ಕರ್ನಾಟಕ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿದೆ. ಭಕ್ತಿ ಪಂಥದ ವಿವಿಧ ಪ್ರಕಾರಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಧಾರ್ಮಿಕ ಪರಂಪರೆ ಸಾವಿರಾರು ವರ್ಷಗಳ ಹಿನ್ನೆಲೆ ಹೊಂದಿದೆ. ಗಂಡುಗಲಿ ಕುಮಾರರಾಮನ ಕಾಲಾವಧಿಯಲ್ಲಿ ಜೈನ ಪರಂಪರೆ ಊರ್ಜಿತಾವಸ್ಥೆಯಲ್ಲಿತ್ತು ಎನ್ನುವುದಕ್ಕೆ ಅಲ್ಲಿನ ಜೈನ ಬಸದಿಗಳು ತಮ್ಮ ಇತಿಹಾಸ ಸಾರಿ ಹೇಳುತ್ತಿವೆ. ಕ್ರಿ.ಶ.೧೦ನೇ ಶತಮಾನದಿಂದ ಜೈನ ಪರಂಪರೆಗೆ ಇಂಬು ನೀಡಲಾಗಿತ್ತು. ಕ್ರಿ.ಶ.೧೨ನೇ ಶತಮಾನದಿಂದ ಶರಣರಿಗೆ, ವಚನಕಾರರಿಗೆ ಆದ್ಯತೆ ನೀಡಲಾಗಿತ್ತು. ಬಳಿಕ ಕ್ರಿ.ಶ.೧೩ನೇ ಶತಮಾನದಿಂದ ಹರಿದಾಸ ಪರಂಪರೆ ಬೆಳೆದುಬಂದಿದೆ. ನರಹರಿ ತೀರ್ಥರು, ಮಧ್ವಾಚಾರ್ಯರ ಬಳಿಕ ವ್ಯಾಸರಾಜರ ಅವಧಿಯಲ್ಲಿ ದಾಸ ಪರಂಪರೆ ಭವ್ಯವಾಗಿ ಬೆಳೆದು ಬಂತು. ಆ ಕಾಲಘಟ್ಟದಲ್ಲಿಯೇ ಇಲ್ಲಿನ ತಿರುಗಲ್ ತಿಮ್ಮಪ್ಪ ದೇವಸ್ಥಾನ ನಿರ್ಮಾಣವಾಗಿದೆ. ಹೀಗಾಗಿ ಇದನ್ನು ಟಿ.ಟಿ.ಡಿ.ಎಂತಲೂ ಕರೆಯುತ್ತಾರೆ.
ತಿಮ್ಮಪ್ಪ-ಲಕ್ಷಿö್ಮದೇವಿ:
ಮಾನವ ಜೀವನದ ಪರಮೋದ್ದೇಶಗಳಲ್ಲಿ ಒಂದಾದ ಆಧ್ಯಾತ್ಮಿಕತೆಯನ್ನು ಜನಸಾಮಾನ್ಯರ ಬಳಿ ಕೊಂಡೊಯ್ಯುವುದು ಆ ಸಮಯದಲ್ಲಿ ಅಗತ್ಯವಾಗಿತ್ತು. ಅಂದಿನ ಅಳರಸರು ಆಶ್ರಯದಾತರಾಗಿದ್ದರಿಂದ ಹರಿದಾಸರು, ವಚನಕಾರರು ಹೀಗೆ ಗುಡ್ಡ, ಗಹ್ವರಗಳಲ್ಲಿದ್ದು ಜನರಿಗೆ ಧರ್ಮ ಬೋಧನೆ ಮಾಡುತ್ತಿದ್ದರು. ವಿಜಯನಗರ ಅವಧಿಯ ಹರಿದಾಸರು ಪರಿಪಕ್ವವಾದ ವಿಚಾರಧಾರೆಗಳಿಂದ, ತಾತ್ವಿಕ ಸಂಪತ್ತಿನಿAದ ಕೀರ್ತನೆ, ಸುಳಾದಿ, ಉಗಾಭೋಗ, ಮುಂಡಿಗೆ, ಅರ್ಥಗರ್ಭಿತ ಒಗಟುಗಳ ಮೂಲಕ ಸಮಾಜೋದ್ಧಾರದ ಅರಿವು ಮತ್ತು ಅಜ್ಞಾನ ತೊಲಗಿಸುವ ಕೆಲಸ ಮಾಡಿದ್ದರು. ಹಂಪಿ-ವಿಜಯನಗರ ಸಾಮ್ರಾಜ್ಯದ ಔನ್ನತ್ಯದಲ್ಲಿರುವ ಕಲ್ಯಾಣ ಕರ್ನಾಟಕ ಹರಿದಾಸರ ಆಡುಂಬೊಲವಾಗಿದ್ದರಿAದ ಇಹ-ಪರವನ್ನು ಹೊರತುಪಡಿಸಿ ಅಲೌಕಿಕ ಅನುಸಂಧಾನದತ್ತ ಹರಿದಾಸರು ಆಧ್ಯಾತ್ಮದತ್ತ ತಮ್ಮ ಚಿತ್ತ ಹರಿಸಿದ್ದರು. ಕನ್ಯಾಕುಮಾರಿಯಿಂದ ಓಡಿಸ್ಸಾ, ಗೋವಾದ ಅರಬ್ಬೀ ಸಮುದ್ರದಿಂದ ಗೋದಾವರಿವರೆಗೂ ವಿಸ್ತರಿಸಿದ್ದ ವಿಜಯನಗರದ ಕಾಲಘಟ್ಟದಲ್ಲಿ ಅಂದು ತಿರುಪತಿ ತಿಮ್ಮಪ್ಪ ಅತ್ಯಂತ ಪ್ರಚಲಿತದಲ್ಲಿದ್ದ ದೇವರು. ಆ ದೈವದ ಪ್ರಭಾವದಿಂದಾಗಿ ಕೆರೆಹಳ್ಳಿ ಬಳಿ ತಿರುಗಲ್ ತಿಮ್ಮಪ್ಪ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿನ ಶಿಥಿಲಗೊಂಡ ದೇವಾಲಯ, ಗೋಪುರ, ಮಂಟಪಗಳು, ನೀರಿನ ಹೊಂಡಗಳು, ನಿವೇಶನ, ಬೃಹತ್ ಗಾತ್ರದ ಮೆಟ್ಟಿಲುಗಳನ್ನು ಗಮನಿಸಿದರೆ ಒಂದೊಮ್ಮೆ ಇದು ವೈಷ್ಣವ ಕೇಂದ್ರವಾಗಿತ್ತು. ವೈಷ್ಣವ ದೇಗುಲದ ಗೋಡೆಯೊಂದರಲ್ಲಿ ಲಿಂಗದಲ್ಲಿ ಶಂಖ ಇದ್ದು ಇದು ಶೈವ-ವೈಷ್ಣವ ಸಾಮರಸ್ಯದ ಕೇಂದ್ರವಾಗಿತ್ತು ಎಂದು ತಿಳಿದು ಬರುತ್ತದೆ.
ಭಕ್ತಿಯ ಕೇಂದ್ರ:
ಹಿಂದೊಮ್ಮೆ ಇದನ್ನು ದಿಂದಿರಿಗಿ ಪಟ್ಟಣ ಎಂದು ಕರೆಯಲಾಗಿತ್ತು. ಇಲ್ಲಿನ ಜನ ವಸತಿ, ಮಂಟಪಗಳ ಸ್ಮಾರಕಗಳು ಮತ್ತು ಗುಡಿ-ಗೋಪುರಗಳು ದಾಳಿಕೋರರ ದಾಳಿಗೆ ಸಿಲುಕಿ ಹಾಳಾಗಿವೆ. ಅಲ್ಲಿಂದ ಕಾಲ್ಕಿತ್ತಿದ್ದ ಅಂದಿನ ಜನರು ಗುಡ್ಡದ ಪಶ್ಚಿಮ ಭಾಗದಲ್ಲಿರುವ ಕೆರೆಹಳ್ಳಿ ಗ್ರಾಮದಲ್ಲಿ ಕ್ರಮೇಣ ನೆಲೆಯೂರಿದ್ದಾರೆ. ಕೆರೆಹಗಳ್ಳಿ ಗ್ರಾಮದಲ್ಲಿ ಕೋಟೆ ಬುರುಜು, ಐತಿಹಾಸಿಕ ಕೆರೆ, ಸ್ಮಾರಕಗಳು ಇವೆ. ಇಲ್ಲಿ ಸಾವಿರಾರು ವರ್ಷಗಳಿಂದಲೂ ಜನವಸತಿ ಇತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಗ್ರಾಮದಲ್ಲಿ ಲಕ್ಷಿö್ಮÃದೇವಿ ನೆಲೆಸಿದ್ದು, ಈಗ ಅನ್ನಪೂರ್ಣೇಶ್ವರಿ ಹೆಸರಿನಲ್ಲಿ ಕರೆಯಲಾಗುತ್ತಿದೆ. ಈ ಗ್ರಾಮ ಭಕ್ತಿ, ಧರ್ಮಶ್ರದ್ಧೆ, ಆತ್ಮೋದ್ಧಾರ, ಸಮಾಜ ಸ್ಪಂದನದ ಕೇಂದ್ರವಾಗಿತ್ತು. ರಕ್ಕಸತಂಗಡಗಿ ಯುದ್ಧಾನಂತರ ಇಲ್ಲಿನ ಇತಿಹಾಸ ಮರೆಮಾಚಿದೆ. ಇತ್ತೀಚೆಗೆ ರಾಷ್ಟಿçÃಯ ಹೆದ್ದಾರಿ-೫೦ ನಿರ್ಮಾಣ ಮಾಡುವ ವೇಳೆ ಈ ಗ್ರಾಮದಲ್ಲಿನ ಲಕ್ಷಿö್ಮÃದೇವಿ ಮಂದಿರ ಅತಿದೊಡ್ಡ ಪವಾಡವನ್ನೇ ಸೃಷ್ಟಿಸಿದ್ದನ್ನು ನಾಡಿನ ಪ್ರಸಿದ್ಧ ಟಿವಿ ವಾಹಿನಿಗಳು, ಪತ್ರಿಕೆಗಳು ಪ್ರಸಾರ ಮತ್ತು ಪ್ರಟಿಸಿವೆ. ಗುರುತರವಾದ ಈ ಗ್ರಾಮ ನಾವು-ನೀವು ಹೇಳಿಕೊಳ್ಳುವಂತೆ ಸರಳ ಇಲ್ಲ. ಇಲ್ಲಿನ ಸ್ಥಳದ ಐತಿಹ್ಯ ಅತ್ಯಂತ ನಿಗೂಢವಾಗಿದೆ. ಈ ಕುರಿತು ಇನ್ನೂ ಸಾಕಷ್ಟು ಅಧ್ಯಯನ ನಡೆದಲ್ಲಿ ಈ ತಿರುಗಲ್ ತಿಮ್ಮಪ್ಪನ ವೃತ್ತಾಂತದ ಧರ್ಮಪ್ರವೃತ್ತಿಯ ಉದ್ದೇಶ ವ್ಯಾಪ್ತಿ ಹೆಚ್ಚಿನ ಮಟ್ಟಿಗೆ ತಿಳಿದೀತು.
ಪ್ರತಿವರ್ಷ ಜಾತ್ರೆ:
ಕೆರೆಹಳ್ಳಿ ಗ್ರಾಮಸ್ಥರು ಈ ತಿರುಗಲ್ ತಿಮ್ಮಪ್ಪ ದೇವರ ಜಾತ್ರೆಯನ್ನು ಶ್ರಾವಣ ಮಾಸದ ಕೊನೆ ಶನಿವಾರ ಆಚರಿಸುತ್ತಾರೆ. ಈ ಬಾರಿ ಆಗಸ್ಟ್ ೩೧ ರಂದು ಕ್ರೋಧಿನಾಮ ಸಂವತ್ಸರದ ಐದನೇ ಶನಿವಾರದಂದು ಶ್ರದ್ಧಾಭಕ್ತಿಯಿಂದ ಜರುಗಲಿದೆ. ಗ್ರಾಮದಿಂದ ಪ್ರಾಣದೇವರ ಪಲ್ಲಕ್ಕಿ ಮೆರವಣಿಗೆ ನಡೆಸಿ, ಇಲ್ಲಿನ ತೇರು ಹನುಮಪ್ಪನಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ತಿರುಗಲ್ ತಿಮ್ಮಪ್ಪ ಮತ್ತು ಲಕ್ಷಿö್ಮÃದೇವಿ ಮಂದಿರಗಳಿಗೆ ತೆರಳಿ ಮಂಟಪಗಳಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಬಂಡೆಯೂಟ ಸವಿದು ಸಂಜೆಯ ಹೊತ್ತು ಹಿಂದಿರುಗುತ್ತಾರೆ. ಇದು ನೂರಾರು ವರ್ಷಗಳಿಂದ ಅನೂಚಾನವಾಗಿ ನಡೆದು ಬಂದಿದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಅಂದು ಕೆರೆಹಳ್ಳಿ ಸೇರಿದಂತೆ ಇಂದರಿಗಿ, ಬೂದುಗುಂಪಾ, ಕೂಕನಪಳ್ಳಿ, ಜಬ್ಬಲಗುಡ್ಡ, ನಾಗೇಶನಹಳ್ಳಿ, ಶಹಪುರ, ಲಿಂಗದಹಳ್ಳಿ, ಬೇವಿನಹಳ್ಳಿ, ಗುಡದಳ್ಳಿ, ಹಿಟ್ನಾಳ, ಅಗಳಕೇರಿ, ಶಿವಪುರ, ಕಂಪಸಾಗರ ಸೇರಿದಂತೆ ಸುತ್ತಮುತ್ತಲ ಹಲವಾರು ಗ್ರಾಮಸ್ಥರು ಇಲ್ಲಿಗೆ ಬಂದು, ಹಣ್ಣು, ಕಾಯಿ, ಫಲ ಅರ್ಪಿಸಿ ಹರಕೆ ಸಲ್ಲಿಸುತ್ತಾರೆ.
ಕಣ್ಸೆಳೆವ ಪ್ರಾಕೃತಿಕ ಸಂಪತ್ತು:
ತಿರುಗಲ್ ತಿಮ್ಮಪ್ಪ ದೇವಸ್ಥಾನದ ಪರಿಸರ ಪ್ರಾಕೃತಿಕ ಸಂಪತ್ತಿನಿAದ ಕೂಡಿದೆ. ಅನೇಕ ರೀತಿಯ ಕುರುಚಲು ಗಿಡ, ಮರ, ಸಸ್ಯಗಳು ಇಲ್ಲಿ ಹೇರಳವಾಗಿವೆ. ಇದರ ಅಡಿ ಕೊಳ್ಳಿನ ಕೆರೆ ಇದೆ. ಇದು ಐತಿಹಾಸಿಕ ಕೆರೆಯಾಗಿದ್ದು, ಮಳೆ ನೀರು ನಿಲ್ಲಿಸಲೆಂದು ಇಲ್ಲಿ ಸಚಿವ ತಂಗಡಿಗಿ ಅವರು ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದರು. ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಈ ಕೆರೆಯಲ್ಲಿ ಮಳೆ ನೀರು ನಿಲ್ಲದೇ ಸೋರಿ ಹೋಗುತ್ತಿದೆ. ಎಲ್ಲ ರೀತಿಯಿಂದಲೂ ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಲಿರುವ ಈ ಅಮೂಲ್ಯವಾದ ದೇವಸ್ಥಾನ ಹಾಗೂ ಸ್ಮಾರಕಗಳನ್ನು ಪುನರ್ ದುರಸ್ಥಿಗೊಳಿಸಿ ನವೀಕರಣಗೊಳಿಸಬೇಕು. ಇಲ್ಲಿ ನೈಸರ್ಗಿಕವಾಗಿರುವ ಎಲ್ಲ ನೀರಿನ ಮೂಲಗಳನ್ನು ಯಥಾವತ್ತಾಗಿ ಕಾಪಾಡಬೇಕು. ಇಲ್ಲಿನ ವನ್ಯಪ್ರಾಣಿಗಳು, ಜೀವರಾಶಿಗಳು, ಕಾಡು ಪ್ರಾಣಿಗಳ ಸಂತತಿ ಉಳಿಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅರಣ್ಯ ಇಲಾಖೆ ಇಲ್ಲಿನ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸಬೇಕು. ಬಹುಮುಖ್ಯವಾಗಿ ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿಪಡಿಸಿ ಕೆರೆಹಳ್ಳಿ, ಶಹಪುರ ಮತ್ತು ಅಗಳಕೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಮಸ್ತ ರೈತರಿಗೆ ನೆರವಾಗಬೇಕಿದೆ.
ರಕ್ಷಣೆಗೆ ನಿಂತ ಟ್ರಸ್ಟ್:
ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷಿö್ಮÃದೇವಿ, ಶ್ರೀ ತೇರಿನ ಹನುಮಪ್ಪ ಟ್ರಸ್ಟ್ ಕಮಿಟಿ(ರಿ).,ಯೊಂದು ಕಳೆದ ಹಲವಾರು ವರ್ಷಗಳಿಂದ ಈ ದೇವಸ್ಥಾನದ ರಕ್ಷಣೆಗೆ ನಿಂತಿದೆ. ಐತಿಹಾಸಿಕವಾದ, ರಮಣೀಯವಾದ ಈ ತಾಣದ ಉಳಿವಿಗೆ ತವಕಿಸುತ್ತಿದೆ. ಸುಮಾರು ೬೫೦ ವರ್ಷಗಳ ಇತಿಹಾಸ ಹೊಂದಿರುವ ಈ ಸ್ಮಾರಕ ಪುಂಡು ಪೋಕರಿಗಳ ದಾಳಿಗೆ ಸಿಲುಕಿ ಶಿಥಿಲಾವಸ್ಥೆಗೆ ತಲುಪಿದೆ. ಆಗಾಗ ಟ್ರಸ್ಟ್ ವತಿಯಿಂದ ದುರಸ್ತಿ ಮಾಡಲಾಗುತ್ತಿದೆ. ಆದರೂ ನಿಧಿ ಚೋರರು ದೇವಸ್ಥಾನದ ಆವರಣವನ್ನೆಲ್ಲ ಬಗೆದು ವಿರೂಪಗೊಳಿಸಿದ್ದಾರೆ. ಗೋಪುರ ವಿನಾಶದ ಅಂಚಿಗೆ ತಲುಪಿದೆ. ಧ್ವಜಸ್ತಂಭ ಸೇರಿದಂತೆ ಕೋಟೆ ಆವರಣ ಸಂಪೂರ್ಣ ಹಾಳುಗೆಡಹಲಾಗಿದೆ. ಇಲ್ಲಿ ಕಾವಲುಗಾರರನ್ನು ನೇಮಕ ಮಾಡುವುದು ಅಗತ್ಯವಾಗಿದೆ.
ಮಲೆನಾಡ ಸೊಬಗು:
ಇಲ್ಲಿ ಸಾವಿರಾರು ಔಷಧೀಯ ಸಸ್ಯಗಳ ಸಮೂಹ, ಕಾಡು ಪ್ರಾಣಿಗಳು, ಖಗ, ಪಕ್ಷಿಗಳು ವಾಸಿಸುತ್ತಿವೆ. ಕರಡಿ, ಜಿಂಕೆ, ಚಿರತೆ, ಕಾಡು ಹಂದಿ, ನವಿಲು ಸೇರಿದಂತೆ ನಾನಾ ಜಾತಿಯ ಅಪರೂಪದ ಪ್ರಾಣಿಗಳಿವೆ. ನೈಸರ್ಗಿಕವಾಗಿರುವ ನೀರಿನ ಹತ್ತಾರು ಜಲಮೂಲಗಳೂ ಇವೆ. ೧೬೦ ಎಕರೆ ವಿಸ್ತಾರದದಲ್ಲಿ ಐತಿಹಾಸಿಕ ಕೊಳ್ಳಿನ ಕೆರೆ ವ್ಯಾಪಿಸಿದೆ. ವಿಜಯನಗರ ಆಳರಸರ ಕಾಲದಲ್ಲಿ ವೈಭವಯುತವಾಗಿ ಮೆರೆದ ಮತ್ತು ಗಂಡುಗಲಿ ಕುಮಾರರಾಮನಿಗೆ ಪ್ರೇರಣೆ ನೀಡಿದ್ದ ಈ ಧಾರ್ಮಿಕ ತಾಣ ಇಂದು ಅವನತಿಯ ಹಾದಿ ಹಿಡಿದಿರುವುದು ನಾಗರಿಕ ಸಮಾಜಕ್ಕೆ ದುಃಖದ ಹಾಗೂ ನೋವಿನ ಸಂಗತಿಯಾಗಿದೆ. ಈ ದೇವಾಲಯ ಸಂಕಿರಣದ ಜೊತೆಗೆ ಐತಿಹಾಸಿಕ ಕೊಳ್ಳಿನ ಕೆರೆ ಅಭಿವೃದ್ಧಿ ಪಡಿಸುವುದರಿಂದ ವರ್ಷದ ಎಲ್ಲ ದಿನಗಳಲ್ಲೂ ಇಲ್ಲಿ ಜಲಮೂಲ ವೃದ್ಧಿಸಿ ಸಕಲ ಜೀವಿಗಳಿಗೆ ಆಸರೆಯಾಗಲಿದೆ. ಎಲ್ಲಕ್ಕಿಂತ ಹೆಚ್ದಾಗಿ ಅಂತರ್ಜಲ ವೃದ್ಧಿಯಾಗಿ ಕಾಡು ಪ್ರಾಣಿಗಳು ಒಳಗೊಂಡAತೆ ರೈತರಿಗೂ ಅನುಕೂಲವಾಗಲಿದೆ. ಇದೊಂದು ಮಲೆನಾಡು ನೆನೆಪಿಸುವಂತಹ ಅಪರೂಪದ ತಾಣವಾಗಿದೆ ಎಂದು ಪ್ರವಾಸಿಗರು ಅಭಿಪ್ರಾಯ ಪಡುತ್ತಿದ್ದಾರೆ.
ರಿಯಾಕ್ಷನ್:
೧) ದೇವತಾಮೂರ್ತಿಗಳು ಭಗ್ನ:
ಶ್ರೀ ತಿರುಗಲ್ ತಿಮ್ಮಪ್ಪ ಮತ್ತು ಶ್ರೀ ಲಕ್ಷಿö್ಮದೇವಿ ವಿಗ್ರಹ, ಮೂರ್ತಿಗಳನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಉಭಯ ದೇವಾಲಯಗಳ ಗೋಪುರಗಳನ್ನು ಧ್ವಂಸಗೊಳಿಸಿದ್ದಾರೆ. ಈ ದೇವಸ್ಥಾನವನ್ನು ಮೂಲ ಮಾದರಿಗೆ ಚ್ಯುತಿ ಬಾರದಂತೆ ನವೀಕರಣಗೊಳಿಸಬೇಕು. ಗರ್ಭಗೃಹ, ಶುಕನಾಶಿ, ಮಂಟಪ, ಭಗ್ನಗೊಂಡ ಮೂರ್ತಿಗಳ ಸ್ಥಳದಲ್ಲಿ ಮತ್ತೆ ತಿಮ್ಮಪ್ಪ ಹಾಗೂ ಲಕ್ಷಿö್ಮದೇವಿ ವಿಗ್ರಹಗಳನ್ನು ಕುಶಲಕರ್ಮಿಗಳ ನೆರವಿನಿಂದ ಮೂಲ ದೇವತಾ ಮೂರ್ತಿಗಳ ಮಾದರಿಯಲ್ಲಿ ಪ್ರತಿಷ್ಠಾಪಿಸಬೇಕು. ಸುತ್ತಲಿನ ಕೋಟೆ ಕೊತ್ತಲಗಳನ್ನು ದುರಸ್ತಿಗೊಳಿಸಿ, ಗೋಪುರ ಪುನರ್ನಿರ್ಮಾಣ ಮಾಡಬೇಕು. ಶೈವ-ವೈಷ್ಣವ ಆರಾಧನಾ ಕೇಂದ್ರವಾದ ಇದು ವಿಶ್ವದಲ್ಲಿಯೇ ಅಪರೂಪವಾಗಿರುವ ಸೌಹಾರ್ದಯುತವಾದ ತಾಣವಾಗಿದ್ದು, ಅಭಿವೃದ್ಧಿಪಡಿಸಬೇಕಾಗಿದೆ. ಧಾರ್ಮಿಕ ಮತ್ತು ಪ್ರವಾಸಿ ತಾಣವಾಗುವುದರಿಂದ ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಆದಾಯ ತಂದು ಕೊಡವ ಒಂದು ಪುಣ್ಯ ಸ್ಥಳವಾಗಲಿದೆ.
ವೀರಣ್ಣ ಕೋಮಲಾಪುರ
ಅಧ್ಯಕ್ಷರು, ಟಿಟಿಡಿ ಅಭಿವೃದ್ಧಿ ಟ್ರಸ್ಟ್, ಕೆರೆಹಳ್ಳಿ.
೨) ರಾಜ್ಯದ ಪ್ರವಾಸಿ ತಾಣ:
ರಾಜ್ಯ ಸರ್ಕಾರ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿದರೆ ಸುತ್ತಮುತ್ತಲ ಗ್ರಾಮದ ಯುವಕರಿಗೆ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಕರ್ನಾಟಕದ ಅಪರೂಪದ ಪ್ರವಾಸಿ ಮತ್ತು ಧಾರ್ಮಿಕ ತಾಣವೂ ಆಗುತ್ತದೆ. ಅಪರೂಪದ ಅರಣ್ಯ ಸಂಪತ್ತು ರಕ್ಷಿಸಿದಂತಾಗುತ್ತದೆ. ಈ ತಿರುಗಲ್ ತಿಮ್ಮಪ್ಪ ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಿದರೆ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗುವುದಲ್ಲದೆ, ಕರ್ನಾಟಕದ ಮಿನಿ ಟಿ.ಟಿ.ಡಿ. ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಅಪರೂಪದ ದೇವಾಲಯ ಸಂಕಿರಣ, ಕೋಟೆ ಕೊತ್ತಲಗಳನ್ನು ಪುನರ್ ದುರಸ್ತಿಗೊಳಿಸಿ, ನವೀಕರಣಗೊಳಿಸಿ ಶ್ರೀ ತಿಮ್ಮಪ್ಪ, ಶ್ರೀ ಲಕ್ಷಿö್ಮÃದೇವಿ ಮೂರ್ತಿಗಳನ್ನು ಮೊದಲಿನಂತೆ ಮರು ಸ್ಥಾಪಿಸಬೇಕು. ಸರ್ಕಾರ ಮನಸ್ಸು ಮಾಡಿದರೆ ಇದು ಖಂಡಿತ ಸಾಧ್ಯವಾಗುತ್ತದೆ.
ವಸಂತ್ ಕೆರೆಹಳ್ಳಿ,
ಕಾರ್ಯದರ್ಶಿ, ಟಿ.ಟಿ.ಡಿ. ಅಭಿವೃದ್ಧಿ ಟ್ರಸ್ಟ್.

About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.