ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಕೇಂದ್ರ ಸರ್ಕಾರ ಯೋಜನೆಗಳನ್ನು ಪಡೆಯಲು ರೈತರ ಸೆಂಟ್ರಲ್ ಐಡಿ ಕಡ್ಡಾಯ

ಜಾಹೀರಾತು

Farmers' Central ID mandatory to avail central government schemes

ಕೊಪ್ಪಳ ಮಾರ್ಚ್ 03 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಎಲ್ಲಾ ಯೋಜನೆಗಳಿಗೆ ರೈತರು ಸೆಂಟ್ರಲ್ ಐಡಿ (Central Farmer ID), ಅಂದರೆ, ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

 ಕೊಪ್ಪಳ ತಾಲ್ಲೂಕಿನಲ್ಲಿ 15,789 ರೈತರು ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಸುವುದು ಬಾಕಿ ಇರುತ್ತದೆ. ಕೇಂದ್ರ ಸರ್ಕಾರದ ಪಿಎಮ್ ಕಿಸಾನ್, ಬೆಳೆ ವಿಮೆ, ಬೆಳೆ ಪರಿಹಾರ, ಖರೀದಿ ಕೇಂದ್ರ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ರೈತರು “ಸೆಂಟ್ರಲ್ ಫಾರ್ಮರ್ ಐಡಿ” ಮಾಡಿ ಕೊಳ್ಳುವುದು ಅಗತ್ಯವಿದ್ದು, ಕೊಪ್ಪಳ ತಾಲ್ಲೂಕಿನ ರೈತರು ಫ್ರೂಟ್ಸ್ (Fruits) ತಂತ್ರಾಶದಲ್ಲಿ ಸೆಂಟ್ರಲ್ ಫಾರ್ಮರ್ ಐಡಿಯನ್ನು ಮಾಡಿಸುವುದು ಕಡ್ಡಾಯವಾಗಿರುತ್ತದೆ.

 ಸೆಂಟ್ರಲ್ ಐಡಿ ಮಾಡಿಸುವವರು ಮೊಬೈಲ್ ಸಂಖ್ಯೆ ನವೀಕರಣಗೊಳಿಸುವುದು, ರೈತರ ಇ-ಕೆವೈಸಿ ಮಾಡಿಸುವುದು, ರೈತರಿಂದ ವಿದ್ಯುನ್ಮಾನ ಸಹಮತಿ ಪಡೆಯುವುದು ಹಾಗೂ ಭೂ ಘೋಷಣೆ (ಎಲ್ಲಾ ಜಮೀನಿನ ಸರ್ವೆ ನಂಬರಗಳನ್ನು ಅಥವಾ ಇಸಾ ನಂಬರ್‌ಗಳನ್ನು ತಮ್ಮ ಎಫ್‌ಐಡಿಗೆ ಜೋಡಣೆ ಮಾಡುವುದುರಿಂದ ಎಲ್ಲಾ ರೈತ ಬಾಂಧವರು ತಮ್ಮ ಎಲ್ಲಾ ಜಮೀನಿನ ವಿವರ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹತ್ತಿರದ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆಗಳಿಗೆ ಅಥವಾ ಗ್ರಾಮ-1 ಕೇಂದ್ರಗಳಿಗೆ ಸಂಪರ್ಕಿಸಿವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಪ್ರಕಟಣೆ ತಿಳಿಸಿದೆ.

Total Views: 0
Share This Article