Breaking News

ತೊಟ್ಲೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆ

Formation of new SDMC in Totlura Government Senior Primary School

ಜಾಹೀರಾತು

ಯಾದಗಿರಿ: ತೊಟ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ರವಿ ಕೊಟಗೆರಿ ಮತ್ತು ಉಪಾಧ್ಯಕ್ಷರಾಗಿ ಜಯಮ್ಮ – ರಮೇಶ ಆಯ್ಕೆಯಾಗಿದ್ದಾರೆ.

ಶಾಲೆಯಲ್ಲಿ ಪಾಲಕರ ಸಭೆ ನಂತರ, ಎಸ್‌ಡಿಎಂಸಿ ರಚನೆ ಸಭೆ ಆಯೋಜಿಸಲಾಗಿತ್ತು, ಎಲ್ಲ ಊರಿನ ಗಣ್ಯರ ಸಹಮತದೊಂದಿಗೆ ಶಾಂತಿಯುತವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ರವಿ ಕೊಟಗೆರಿ ಮಾತನಾಡಿ “ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ”

ಯಲ್ಹೇರಿ ಕ್ಲಸ್ಟರಿನ ಸಿಆರ್‌ಪಿ ಶಂಕರಪ್ಪ ಪೂಜಾರಿ ಮಾತನಾಡಿ, ” ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಶಾಲಾಭಿವೃದ್ಧಿ, ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಲಹೆ, ಸೂಚನೆ,
ಮಾರ್ಗದರ್ಶನ ನೀಡಬೇಕು”

ಶಿಕ್ಷಕರಾದ ಶರಣಯ್ಯ ಹಿರೇಮಠ ಮಾತನಾಡಿ “
ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಕರ ಜತೆಗೆ, ಎಸ್‌ಡಿಎಂಸಿ ಪಾತ್ರ ಬಹುಮುಖ್ಯ “

ಈ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿಗಳಾದ ಆಸೀಮ್ ಜುಬೇರ್ ಚಿನ್ನಾಕಾರ, ಶಾಲೆ ಭೀಮಪ್ಪ, ಅರುಣ ಕುಮಾರ , ನರಸಪ್ಪ ಹಾಗೂ ನೂತನ ಸದಸ್ಯರಾದ ಲಕ್ಷ್ಮಪ್ಪ, ಹಣಮಂತ, ಬುರನ್ ಸಾಬ, ನಭಿ ಸಾಬ, ಆನಂದ, ಲಕ್ಷ್ಮೀ-ರಾಜು, ಸಂತೋಷಿ, ವಿಶ್ವನಾಥ, ಸೌಭಾಗ್ಯ, ಶರಣಮ್ಮ, ಸಂತೋಷ-ಮಲ್ಲಿಕಾರ್ಜುನ, ಸಾಮುಯಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಾಲಕ-ಪೋಷಕರು,ಗ್ರಾಮಸ್ಥರೆಲ್ಲ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಗುರುಗಳಾದ ಸೂರ್ಯಕಾಂತ ರಾಥೋಡ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.